HEALTH TIPS

ಎಲ್ಲರೂ ಕಾಯುತ್ತಿರುವ ವಾಟ್ಸ್ ಆಪ್ ನ 5 ಫೀಚರ್ ಗಳು ಶೀಘ್ರದಲ್ಲಿ ಬಿಡುಗಡೆ

           ಹಾಲಿ ವರ್ಷ ವಾಟ್ಸ್ ಆಪ್ ಮೆಸೇಂಜರ್ ನಲ್ಲಿ ಹಲವು ಹೊಸ ಫೀಚರ್ ಗಳು ಪರಿಚಿತಗೊಳ್ಳಲಿವೆ ಅವುಗಳೆಂದರೆ ಫಿಂಗರ್ ಪ್ರಿಂಟ್ ಲಾಕ್, ಕನ್ಸಿಗೇಟಿವ್ ವಾಯ್ಸ್ ಮೆಸೇಜಸ್ ಮತ್ತು ಸ್ಟೇಟಸ್ ಗೆ 3ಡಿ ಟಚ್ ಆಕ್ಷನ್.ಲೋಕಸಭೆ ಎಲೆಕ್ಷನ್ ನ ಪ್ರಯುಕ್ತ ಈಗಾಗಲೇ ವಾಟ್ಸ್ ಆಪ್ ಹೊಸ ಗ್ರೂಪ್ ಪ್ರೈವೆಸಿ ಫೀಚರ್ ನ್ನು ಕೂಡ ಪ್ರಕಟಿಸಿದೆ ಮತ್ತು ಆ ಮೂಲಕ ಫೇಕ್ ನ್ಯೂಸ್ ಮತ್ತು ಹಾದಿ ತಪ್ಪಿಸುವ ಮಾಹಿತಿಗಳನ್ನು ಭಾರತದ 22 ಕೋಟಿ ಜನರಿಗೆ ವಾಟ್ಸ್ ಆಪ್ ಮೂಲಕ ಹರಡುವುದನ್ನು ತಡೆಯಲಿದೆ ಮತ್ತು ಸದ್ಯ ಭಾರತವು ಈ ಆಪ್ ಗೆ ಜಗತ್ತಿನ ಅತೀ ದೊಡ್ಡ ಮಾರುಕಟ್ಟೆಯಾಗಿದೆ.ಅದೇ ಕಾರಣಕ್ಕೆ ಪ್ರತಿ ತಿಂಗಳೂ ಕೂಡ ಹೊಸ ಫೀಚರ್ ಗಳನ್ನು ವಾಟ್ಸ್ ಆಪ್ ಗೆ ತರುವುದಕ್ಕೆ ಸಂಸ್ಥೆ ಪ್ರಯತ್ನಿಸುತ್ತದೆ.
    ಈ ವರ್ಷ ವಾಟ್ಸ್ ಆಪ್ ಗೆ ಪರಿಚಿತವಾಗಬೇಕು ಎಂದು ಬಯಸುವ ಕೆಲವು ಫೀಚರ್ ಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.
            ಡಾರ್ಕ್ ಮೋಡ್:
    ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ನಲ್ಲಿ ಡಾರ್ಕ್ ಮೋಡ್ ಫೀಚರ್ ಬಹಳ ದಿನಗಳಿಂದ ಕಾಯುತ್ತಿರುವ ಫೀಚರ್ ಆಗಿದೆ. ಈ ಬಗೆಗಿನ ವದಂತಿಗಳು ಕಳೆದ ಹಲವು ದಿನಗಳಿಂದ ಹರಡುತ್ತಲೇ ಇದೆ. ಈಗಾಗಲೇ ಈ ಫೀಚರ್ ಡೆವಲಪ್ ಮೆಂಟ್ ಹಂತದಲ್ಲಿದ್ದು ಈ ವರ್ಷಾಂತ್ಯದೊಳಗೆ ನಿರೀಕ್ಷಿಸಬಹುದಾಗಿದೆ.ಡಾರ್ಕ್ ಮೋಡ್ ಫೀಚರ್ ಬರುವುದರಿಂದ ಹಲವು ಲಾಭಗಳಿದೆ. ಇದು ಕಣ್ಣುಗಳಿಗೆ ಆರಾಮದಾಯಕವಾಗಿರುತ್ತದೆ ಮತ್ತು ವಾಟ್ಸ್ ಆಪ್ ಗೆ ಹೊಸ ಲುಕ್ ನೀಡುತ್ತದೆ. ಇದು ನಿಮ್ಮ ಡಿವೈಸಿನ ಬ್ಯಾಟರಿಯನ್ನು ಉಳಿಸುತ್ತದೆ ಅದರಲ್ಲೂ ಪ್ರಮುಖವಾಗಿ ದೊಡ್ಡ ಡಿಸ್ಪ್ಲೇ ಇರುವ ಫೋನ್ ಗಳಲ್ಲಿ ಅಧಿಕವಾಗಿ ಬ್ಯಾಟರಿಯ ಉಳಿತಾಯವಾಗುತ್ತದೆ. ವಾಟ್ಸ್ ಆಪ್ ಸ್ಟೇಟಸ್ ಚೆಕ್ ಮಾಡುವುದಕ್ಕಾಗಿ 3ಡಿ ಟಚ್ ಇದು ಐಫೋನ್ ಎಕ್ಸ್ ಕ್ಲೂಸೀವ್ ಫೀಚರ್ ಆಗಿರುತ್ತದೆ. ಇದು ಆಪಲ್ ಐಫೋನ್ ಬಳಕೆದಾರರಿಗೆ 3ಡಿ ಟಚ್ ಮೂಲಕ ಸ್ಟೇಟಸ್ ಪರೀಕ್ಷೆಗೆ ಅವಕಾಶ ನೀಡುತ್ತದೆ. ನೀವು ಸೀಕ್ರೆಟ್ ಆಗಿ ಯಾವುದಾದರೂ ವ್ಯಕ್ತಿಯ ಸ್ಟೋರಿಯನ್ನು ಗಮನಿಸುತ್ತಿದ್ದರೆ ಇದು ರೀಡ್ ರಿಸಿಪ್ಟ್ ಮೆಸೇಜ್ ನ್ನು ಆ ವ್ಯಕ್ತಿಗೆ ಕಳುಹಿಸುವುದಿಲ್ಲ.
             ವಾಟ್ಸ್ ಆಪ್ ನಲ್ಲಿ ಬೆರಳಚ್ಚು ದೃಢೀಕರಣ:
      ವಾಟ್ಸ್ ಆಪ್ ಫಿಂಗರ್ ಪ್ರಿಂಟ್ ದೃಢೀಕರಣ ಫೀಚರ್ ವಾಟ್ಸ್ ಆಪ್ ಬಳಕೆದಾರರಿಗೆ ಹೆಚ್ಚುವರಿ ಸೆಕ್ಯುರಿಟಿಯನ್ನು ನೀಡುತ್ತದೆ. ಪ್ರತಿಬಾರಿ ಅವರು ವಾಟ್ಸ್ ಆಪ್ ತೆರೆಯುವಾಗಲು ಫಿಂಗರ್ ಪ್ರಿಂಟ್ ಬಳಸಲು ಇದು ಅವಕಾಶ ನೀಡುತ್ತದೆ.
       ಕನ್ಸಗೇಟಿವ್ ವಾಯ್ಸ್ ಮೆಸೇಜ್ ಗಳು:
    ಕನ್ಸಗೇಟಿವ್ ವಾಯ್ಸ್ ಮೆಸೇಜ್ ಫೀಚರ್ ಈಗಾಗಲೇ ವಾಟ್ಸ್ ಆಪ್ ನ ಆಂಡ್ರಾಯ್ಡ್ ಬೇಟಾ ವರ್ಷನ್ 2.19.86 ನಲ್ಲಿ ಲಭ್ಯವಿದೆ. ಹಲವು ವಾಯ್ಸ್ ಮೆಸೇಜ್ ಗಳು ನಿಮ್ಮ ವಾಟ್ಸ್ ಆಪ್ ಇನ್ ಬಾಕ್ಸ್ ನಲ್ಲಿದ್ದರೆ ನೀವು ಪ್ರತಿಯೊಂದನ್ನು ಕ್ಲಿಕ್ಕಿಸುತ್ತಾ ಕುಳಿತುಕೊಳ್ಳುವ ಅಗತ್ಯವಿಲ್ಲ. ಒಂದು ವಾಯ್ಸ್ ಮೆಸೇಜ್ ನ್ನು ಪ್ಲೇ ಮಾಡಿದರೆ ಅದು ಮುಗಿದ ಕೂಡಲೇ ಇನ್ ಬಾಕ್ಸ್ ನಲ್ಲಿ ಮತ್ತೊಂದು ತೆರೆಯದ ವಾಯ್ಸ್ ಮೆಸೇಜ್ ಸ್ವಯಂಚಾಲಿತವಾಗಿ ಪ್ಲೇ ಆಗುತ್ತದೆ. ಅಷ್ಟೇ ಅಲ್ಲ ಒಂದು ವಾಯ್ಸ್ ಮೆಸೇಜ್ ಮುಗಿದ ಕೂಡಲೇ ಬಳಕೆದಾರರಿಗೆ ಸೌಂಡ್ ಪ್ಲೇ ಆಗುವ ಮೂಲಕ ಮುಂದಿನ ವಾಯ್ಸ್ ಮೆಸೇಜ್ ಬಗ್ಗೆ ಬಳಕೆದಾರರಿಗೆ ಮಾಹಿತಿಯನ್ನು ನೀಡಲಾಗುತ್ತದೆ. ಅದರ ಮಧ್ಯೆ ಬಳಕೆದಾರರು ಯಾವುದೇ ಪ್ರತಿಕ್ರಿಯೆ ಮಾಡುವ ಆಗತ್ಯವಿರುವುದಿಲ್ಲ. ಕಾಂಟ್ಯಾಕ್ಟ್ಸ್ ಯಾರ್ಂಕಿಂಗ್ ಆಂಡ್ರಾಯ್ಡ್ ನಲ್ಲಿ ವಾಟ್ಸ್ ಆಪ್ ಕೆಲವೇ ದಿನಗಳಲ್ಲಿ ಕಾಂಟ್ಯಾಕ್ಟ್ಸ್ ರ್ಯಾಕಿಂಗ್ ಸಿಸ್ಟಮ್ ನ್ನು ಬಿಡುಗಡೆಗೊಳಿಸಲಿದೆ. ಅತೀ ಹೆಚ್ಚು ನೀವು ಯಾವ ಕಾಂಟ್ಯಾಕ್ಟ್ ನಂಬರ್ ನೊಂದಿಗೆ ಚರ್ಚೆ ಮಾಡುತ್ತೀರಿ ಅಥವಾ ಮಾತನಾಡುತ್ತೀರಿ ಎಂಬುದನ್ನು ಇದು ಯಾರ್ಂಕ್ ಮೂಲಕ ನೀಡುತ್ತದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries