ಏ.7 ರಂದು ಬೆಜ್ಜ ಯಕ್ಷೋತ್ಸವ
0
ಏಪ್ರಿಲ್ 04, 2019
ಮಂಜೇಶ್ವರ: ಏಪ್ರಿಲ್ ಏಳರಂದು ಶನಿವಾರ ರಾತ್ರಿ 8ರಿಂದ ಬೆಜ್ಜ ಶ್ರೀ ಧೂಮಾವತೀ ಬಂಟ ದೈವಸ್ಥಾನದ ಜಾತ್ರೋತ್ಸವ ಅಂಗವಾಗಿ ಉದ್ಯಮಿ ಮೋಹನ ಹೆಗ್ಡೆ ಬೆಜ್ಜ ಅವರ ನೇತೃತ್ವದ ರಾಮಚಂದ್ರ ಹೆಗ್ಡೆ ವೇದಿಕೆ ಬೆಜ್ಜ ವತಿಯಿಂದ 27ನೇ ವರ್ಷದ ಯಕ್ಷೋತ್ಸವ ಸಲುವಾಗಿ ಸಾಲಿಗ್ರಾಮ ಮೇಳದವರಿಂದ ಕಸ್ತೂರಿ ತಿಲಕ ಯಕ್ಷಗಾನ ಬಯಲಾಟ ಹಾಗೂ ತೆಂಕು ತಿಟ್ಟಿನ ಹಿರಿಯ ಕಲಾವಿದರೂ ಸಂಘಟಕರೂ ಆಗಿರುವ ಕೈರಂಗಳ ನಾರಾಯಣ ಹೊಳ್ಳರಿಗೆ ರಾಮಚಂದ್ರ ಹೆಗ್ಡೆ ವೇದಿಕೆಯ ವಾರ್ಷಿಕ ಸನ್ಮಾನ ಜರಗಲಿದೆ. ಇದೇ ಸಂದರ್ಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಲನಚಿತ್ರದಲ್ಲಿ ಅಭಿನಯಿಸಿದ ಸ್ಥಳೀಯ ಪ್ರತಿಭೆಗಳಾದ ನಾಗರಾಜ ಪದಕಣ್ಣಾಯ ಮೂಡಂಬೈಲು, ಯೋಗೀಶ ಶೆಟ್ಟಿ ದರ್ಮೆಮಾರ್ ಇವರನ್ನು ಗಣ್ಯರ ಸಮಕ್ಷಮ ಅಭಿನಂದಿಸಲಾಗುವುದು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಪಾರ್ತಿಸುಬ್ಬ ಯಕ್ಷಗಾನ ಕೇಂದ್ರದ ಮಾಜಿ ಅಧ್ಯಕ್ಷ ಶಂಕರ ರೈ ಮಾಸ್ತರ್ ವಹಿಸಲಿದ್ದು ಕಾಸರಗೋಡು ಜಿಲ್ಲಾ ಜನಜಾಗೃತಿವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಘ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣ ಗೈಯಲಿದ್ದು ಕಾರ್ಯಕ್ರಮ ಸಂಯೋಜಕರಾದ ಸತೀಶ ಅಡಪ ಸಂಕಬೈಲು ಕಾರ್ಯಕ್ರಮ ನಿರ್ವಹಿಸುವರು. ರಾಮಚಂದ್ರ ಹೆಗ್ಡೆ ವೇದಿಕೆಯ ಅಧ್ಯಕ್ಷ ಗೋವಿಂದ ಹೆಗ್ಡೆ ಬೆಜ್ಜ, ಸಂಚಾಲಕ ಮೋಹನ ಹೆಗ್ಡೆ ಬೆಜ್ಜ ಮೊದಲಾದ ಗಣ್ಯರು ಉಪಸ್ಥಿತರಿರುವರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.