ಕಾಸರಗೋಡು: ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಲ್ಲಿ ಒಟ್ಟು 79.02 ಶೇ. ಮತದಾನವಾಗಿರುವ ಬಗ್ಗೆ ಪ್ರಾಥಮಿಕ ವರದಿ ದೃಢಪಡಿಸಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದ 1360827 ಮತದಾರರ ಪೈಕಿ 1073030 ಮತದಾರರು ಮತ ಚಲಾಯಿಸಿದ್ದಾರೆ. 494883(75.38 ಶೇ.) ಪುರುಷ ಮತದಾರರು ಹಾಗೂ 578146(82.07 ಶೇ.) ಮಹಿಳೆಯರು ಮತ ಚಲಾವಣೆ ನಡೆಸಿದ್ದಾರೆ. ಕಳೆದ ಲೋಕಸಭಾಚುನಾವಣೆ(2014)ಗೆ ಹೋಲಿಸಿದರೆ ಈ ಬಾರಿ ಮತದಾನದಲ್ಲಿ ಏರಿಕೆ ಕಂಡುಬಂದಿದೆ. 2014ರಲ್ಲಿ 78.49 ಶೇ. ಮತ ಚಲಾವಣೆಯಾಗಿತ್ತು.
ಜಿಲ್ಲೆಯ 1,317 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಬೆಳಿಗ್ಗೆ 7 ರಿಂದ ಆರಂಭಗೊಂಡ ಮತದಾನ ಸಂಜೆ 6ರ ವರೆಗೆ ನಡೆಯಿತು. ಕೆಲವು ಮತಗಟ್ಟೆಗಳಲ್ಲಿ ಟೋಕನ್ ನೀಡಿ ಹೆಚ್ಚುವರಿ ಸಮಯ ಅನುಮತಿಸಲಾಗಿದ್ದು, ರಾತ್ರಿ 8ರ ವರೆಗೂ ಮತದಾನ ನಡೆದಿದ್ದು, ವರದಿ ಲಭ್ಯವಾಗಿಲ್ಲ. ಮತದಾನ ಪ್ರಕ್ರಿಯೆಯ ನಿರ್ವಹಣೆಗೆ 3872 ಮಂದಿ ಉದ್ಯೋಗಿಗಳನ್ನು ನೇಮಕಗೊಳಿಸಲಾಗಿತ್ತು. ಜೊತೆಗೆ 668 ಹೆಚ್ಚುವರಿ ಅಧಿಕಾರಿಗಳನ್ನೂ ತುರ್ತು ಸಂದರ್ಭಗಳಿಗಾಗಿ ಸಿದ್ದಗೊಳಿಸಲಾಗಿತ್ತು.ಶಾಂತಿಯುತ ಮತದಾನಕ್ಕಾಗಿ 2641 ಪೋಲೀಸರನ್ನೂ ನೇಮಿಸಲಾಗಿತ್ತು.
ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆ ಶಾಂತಿಯುತವಾಗಿತ್ತು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ವಿಧಾನ ಸಭಾ ಕ್ಷೇತ್ರವಾರು ಚಲಾವಣೆಗೊಂಡ ಮತಗಳು:
ಮಂಜೇಶ್ವರ: 73.57ಶೇ.
ಕಾಸರಗೋಡು: 74.92ಶೇ.
ಉದುಮ:78.27 ಶೇ.
ಕಾಞÂಂಗಾಡ್:79.48ಶೇ.
ತೃಕ್ಕರಿಪುರ: 81.32ಶೇ.
ಪಯ್ಯನ್ನೂರು: 85.13ಶೇ.
ಕಲ್ಯಾಶ್ಚೇರಿ:81.81ಶೇ. ಮತ ಚಲಾವಣೆಯಾಗಿದ್ದು, ಅಂತಿಮ ವರದಿಗನುಸಾರ ಬದಲಾವಣೆಯಾಗುವ ಸಾಧ್ಯತೆ ಇದೆ.