8 ವರ್ಷದಿಂದ ದೂರವಾಗಿದ್ದ ಬಾಲಕನನ್ನು ಪೋಷಕರೊಂದಿಗೆ ಸೇರಿಸಿದ ಫೇಸ್ ಬುಕ್!
0
ಏಪ್ರಿಲ್ 04, 2019
ಹೈದರಾಬಾದ್: ಸಾಮಾಜಿಕ ಜಾಲತಾಣಗಳು ಕುಟುಂಬದಿಂದ ದೂರವಾಗಿರುವವರನ್ನು ಬೆಸೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ, ಇಂಥಹದ್ದೇ ಪ್ರಕರಣವೊಂದು ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ.
ಹೈದರಾಬಾದ್ ನಿಂದ 2011 ರ ಜನವರಿ. 26 ರಂದು ತಪ್ಪಿಸಿಕೊಂಡಿದ್ದ ಬಾಲಕನನ್ನು ಮರಳು ಕುಟುಂಬದೊಂದಿಗೆ ಸೇರಿಸಲು ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ನೆರವಾಗಿದೆ.
ನಾಪತ್ತೆಯಾಗಿದ್ದ ಬಾಲಕ ತಾಯಿ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ ನಾಪತ್ತೆಯಾಗಿದ್ದ ಬಾಲಕ 8 ವರ್ಷಗಳಾದರೂ ಪತ್ತೆಯಾಗಲಿಲ್ಲ. ಈ ನಡುವೆ ಮಹಿಳೆಗೆ ಫೇಸ್ ಬುಕ್ ನಲ್ಲಿ ತನ್ನ ಮಗನ ಫೋಟೊ ಇರುವ ಪ್ರೊಫೈಲ್ ಕಂಡಳು. ತಕ್ಷಣವೇ ಪೊಲೀಸರಿಗೆ ಮಾಹಿತಿ ತಲುಪಿಸಿದರು. ಪೊಲೀಸರು ಸೈಬರ್ ಕ್ರೈಮ್ ಅಧಿಕಾರಿಗಳ ನೆರವಿನಿಂದ ಯುವಕನ ಐಪಿ ಅಡ್ರೆಸ್ ಪತ್ತೆ ಮಾಡಿದರು. ನಾಪತ್ತೆಯಾಗಿದ್ದ ಬಾಲಕ ಪಂಜಾಬ್ ನಲ್ಲಿರುವುದು ಪತ್ತೆಯಾಯಿತು. ಪಂಜಾಬ್ ನಲ್ಲಿ ಭೂಮಾಲೀಕ ಆಶ್ರಯದಲ್ಲಿದ್ದ ಬಾಲಕನನ್ನು ಫೇಸ್ ಬುಕ್ ಸಹಾಯದಿಂದ ಪೊಲೀಸ್ ಅಧಿಕಾರಿಗಳು ಮರಳಿ ಕುಟುಂಬದೊಂದಿಗೆ ಸೇರಿಸುವಲ್ಲಿ ಈ ಮೂಲಕ ಸಫಲರಾದರು.