ಪೆರ್ಲ: ಈ ಮಹಾತಾಯಿಗೆ ವಯಸ್ಸು 83. ಆದರೆ ಈವರೆಗೆ ಒಮ್ಮೆಯೂ ಮತ ಚಲಾಯಿಸದ ಇವರು ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಮೊತ್ತಮೊದಲ ಬಾರಿಗೆ ಮತದಾನಗೈಯ್ಯುವ ಮೂಲಕ ಗಮನ ಸೆಳೆದರು. ಈ ಮೂಲಕ ಅವರು ನಾಡಿಗೆ ಅಭಿಮಾನವಾಗಿದೆ.
ಉಳಿವಯಸ್ಸಿನ ಜೊತೆಗೆ ವಿಶೇಷ ಚೇತನರಾಗಿದ್ದರೂ, ಮತದಾನ ನಡೆಸುವಲ್ಲಿ ಯಾವ ಹಿಂಜರಿಕೆಯೂ ಇಲ್ಲದೆ ಆಂಬುಲೆನ್ಸ್ ನಲ್ಲಿ ಆಗಮಿಸಿ ಮೊದಲ ಬಾರಿಗೆ ಮತ ಚಲಾಯಿಸಿ ಅಸ್ಯಮ್ಮ ನಾಡಿಗೆ ಮಾದರಿಯಾಗಿದ್ದಾರೆ.
ತಮ್ಮ 83ನೇ ವಯಸ್ಸಿನಲ್ಲಿ ವಯೋಸಹಜ ದೌರ್ಬಲ್ಯಗಳೊಂದಿಗೆ, ವಿಕಲಚೇತನೆಯೂ ಆಗಿರುವ ಇವರು ಅಂಗನವಾಡಿ ಟೀಚರ್ ಯಶೋದಾ ಅವರ ಸಹಾಯದೊಂದಿಗೆ ಎಣ್ಮಕಜೆ ಗ್ರಾಮಪಂಚಾಯತ್ ನ ಶೇಣಿ ಗ್ರಾಮದ ಏಳ್ಕಾನ ಶೇಣಿಮೂಲೆ ನಿವಾಸಿ ಅಸ್ಯಮ್ಮ ಆಗಮಿಸಿದ್ದರು. ಇಲ್ಲಿನ 189ನೇ ನಂಬ್ರ ಮತಗಟ್ಟೆಯಲ್ಲಿ ಇವರು ಮತಚಲಾಯಿಸಿದ್ದಾರೆ.
ಪತಿಯಿಂದ ವಿಚ್ಛೇದನೆಗೊಂಡು ಬದುಕುತ್ತಿರುವ ಅಸ್ಸಿಯಮ್ಮ ಅವರ ಪುತ್ರ ಜುನೈದ್ ಕೂಡ ವಿಕಲಚೇತನೆಯಾಗಿದ್ದಾರೆ. ಅಂಗನವಾಡಿ ಟೀಚರ್ ಯಶೋದಾ ಅವರ ಬಗೆಗಿನ ವಿಶ್ವಾಸ ಮತ್ತು ಸೊಸೆ ನೀಡುತ್ತಿರುವ ಬೆಂಬಲದಿಂದ ಮತ ಚಲಾಯಿಸಲು ಸಾಧ್ಯವಾಗಿತ್ತು ಎಂದು ಅಸ್ಯಮ್ಮ ತಿಳಿಸಿದ್ದಾರೆ.