ಉದ್ದಂತೋಡು ಪ್ರತಿಷ್ಠಾ ವಾರ್ಷಿಕೋತ್ಸವ, ದೈವಗಳ ನೃತ್ಯೋತ್ಸವವು ಏಪ್ರಿಲ್ 9 ರಿಂದ
0
ಏಪ್ರಿಲ್ 03, 2019
ಬದಿಯಡ್ಕ: ಚೆಡೆಕಲ್ಲು ಶ್ರೀ ಚಾಮುಂಡಿ ದೈವಸ್ಥಾನ ಮತ್ತು ಉದ್ದಂತೋಡು ತರವಾಡು ಪ್ರತಿಷ್ಠಾ ವಾರ್ಷಿಕೋತ್ಸವ, ದೈವಗಳ ನೃತ್ಯೋತ್ಸವವು ಏಪ್ರಿಲ್ 9 ರಿಂದ 11ರ ತನಕ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ನೇತೃತ್ವದಲ್ಲಿ ನಡೆಯಲಿರುವುದು.
ಏ.9ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹವನ, ನಾಗದೇವರಿಗೆ ಮತ್ತು ಶ್ರೀ ದೈವಗಳಿಗೆ ತಂಬಿಲ, ಪಾನಕ ಪೂಜೆ, ಅಪರಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಾಯಂ. 7 ರಿಂದ ಭಜನೆ. ಏ.10 ರಂದು ಸಂಜೆ 6 ರಿಂದ ದೈವಗಳ ಭಂಡಾರ ತೆಗೆಯುವುದು. ಸಾಯಂ. 7ರಿಂದ ತೊಡಂಗಲ್, 8ಕ್ಕೆ ಅನ್ನಸಂತರ್ಪಣೆ, ರಾತ್ರಿ 9 ರಿಂದ ಕೊರತ್ತಿ ಅಮ್ಮನ ಕೋಲ ಜರಗಲಿರುವುದು. ಏ.11 ರಂದು ಗುರುವಾರ ಬೆಳಿಗ್ಗೆ 8ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ನೃತ್ಯ, ಬೆಳಿಗ್ಗೆ ಗಂಟೆ 9ಕ್ಕೆ ಶ್ರೀ ಪಡಿಞËರ್ ಚಾಮುಂಡಿ ದೈವದ ನೃತ್ಯ, ಮಧ್ಯಾಹ್ನ ಅನ್ನ ಸಂತರ್ಪಣೆ, ಅಪರಾಹ್ನ ಗಂಟೆ 2ಕ್ಕೆ ಚೆಡೆಕಲ್ಲು ಶ್ರೀ ಚಾಮುಂಡಿ ದೈವದ ಕೋಲ, ಸಂಜೆ 5ಕ್ಕೆ ಗುಳಿಗ ದೈವದ ಕೋಲ, ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.