ಚುನಾವಣೆ : ಜಿಲ್ಲೆಯಲ್ಲಿ ನೇಮಕಗೊಂಡವರು 90 ವೀಡೀಯೋಗ್ರಾಫರ್ ಗಳು
0
ಏಪ್ರಿಲ್ 05, 2019
ಕಾಸರಗೋಡು: ಲೋಕಸಭೆ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ 90 ವೀಡಿಯೋ ಗ್ರಾಫರ್ ಗಳನ್ನು ನೇಮಿಸಲಾಗಿದೆ.
ಹೆಚ್ಚುವರಿ ದಂಡನಾಧಿಕರಿ ಸಿ.ಬಿಜು ಮತ್ತು ಹಣಕಾಸು ಅಧಿಕಾರಿ ಕೆ.ಸತೀಶ್ ಅವರ ಆದೇಶ ಪ್ರಕಾರ ವೀಡೀಯೋಗ್ರಾಫರ್ ಗಳು ಜಿಲ್ಲೆಯಲ್ಲಿ ಚಟುವಟಿಕೆ ನಡೆಸಲಿದ್ದಾರೆ. ವಿದ್ಯುನ್ಮಾನ ಮತಯಂತ್ರ ಸಜ್ಜುಗೊಳಿಸುವುದು, ಮತಗಟ್ಟೆ ಕರ್ತವ್ಯದ ಸಿಬ್ಬಂದಿ, ಪ್ರಿಸೈಡಿಂಗ್ ಅಧಿಕಾರಿಗಳು ಮೊದಲಾದವರಿಗೆ ತರಬೇತಿ, ಚುನಾವಣೆ ನಿರೀಕ್ಷಕರ ಪ್ರತ್ಯೇಕ ಸಭೆಗಳು, ಚುನಾವಣೆ ಸಂಬಂಧ ಸಾಮಾಗ್ರಿಗಳ ವಿತರಣೆ, ಸ್ವಾಗತ ಕೇಂದ್ರಗಳ ದಿನವಿಡೀ ನಡೆಯುವ ಚಟುವಟಿಕೆಗಳು, ಸಮಸ್ಯಾತ್ಮಕ ಪ್ರದೇಶಗಳ ಚಟುವಟಿಕೆಗಳು, ಮತಗಟ್ಟೆಗಳ ಚಟುವಟಿಕೆಗಳು ಇತ್ಯಾದಿ ಚಿತ್ರೀಕರಣ ಇವರ ಪ್ರಧಾನ ಕಾಯಕವಾಗಿದೆ. ಚುನಾವಣೆ ಅಧಿಸೂಚನೆ ಪ್ರಕಟಗೊಂಡ ನಂತರ ಇವರ ಸೇವೆ ನಡೆಯಲಿದೆ. 20 ವರ್ಷದಿಂದ 60 ವರ್ಷ ಪ್ರಯದ ವರೆಗಿನ ಮಂದಿ ಈ ಸಾಲಿನಲ್ಲಿದ್ದಾರೆ.
ಇವರಲ್ಲಿ 15 ಮಂದಿ ಪ್ಲೈಯಿಂಗ್ ಸ್ಕ್ವಾಡ್ ವ್ಯಾಪ್ತಿಯಲ್ಲಿ, 51 ಮಂದಿ ಇಕಾನಾಮಿಕ್ ಸ್ಟಾಟಿಕ್ ಸರ್ವೆಲೆನ್ಸ್ ಟೀಂನಲ್ಲಿ, 15 ಮಂದಿಯ್ನು ವೀಡಿಯೋ ಸರ್ವೆಲೆನ್ಸ್ ಟೀಂನಲ್ಲಿ, 6 ಮಂದಿ ಡೀಫೇಸ್ ಮೆಂಟ್ ಸ್ಕ್ವಾಡ್ನಲ್ಲಿ ನೇಮಕಗೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಇಲ್ಲದೇ ಇರುವ ವೇಳೆ ಅಬ್ಯರ್ಥಿಗಳ ನಾಮಪತ್ರಿಕೆ ಸ್ವೀಕಾರದ ಅಧಿಕಾರ ಹೊಂದಿದ್ದ ಇಬ್ಬರು ಸಹಾಯಕ ಚುನಾವಣೆ ಅಧಿಕಾರಿಗಳ ಕಚೇರಿಯಲ್ಲಿ ತಲಾ ಒಬ್ಬ ವೀಡೀಯೋಗ್ರಾಫರ್ ನೇಮಕಗೊಂಡಿದ್ದಾರೆ. ಜಿಲ್ಲೆಯ 17 ಗಡಿ ಪ್ರದೇಶಗಳಲ್ಲಿ ಒಬ್ಬ ವೀಡೀಯೋಗ್ರಾಫರ್, ಹಿರಿಯ ಪೊಲೀಸ್ ಅಧಿಕಾರಿ,ಎಕ್ಸಿಕ್ಯೂಟಿವ್ ಮೆಜಿಸ್ಟ್ರೇಟ್ ಇರುವ ಮೂರು ತಂಡಗಳು ಸದಾ ಸಜ್ಜುಗೊಂಡು ಇರುವರು. ದಾಖಲೆಗಳಿಲ್ಲದ ಹಣ, ಬಂಗಾರ, ಆಯುಧಗಳು ಇತ್ಯಾದಿ ಕ್ರಮ ಸಾಗಾಟ ನಡೆಸುವುದನ್ನು ತಡೆಯುವ ನಿಟ್ಟಿನಲಿ ಇವರು ವಾಹನಗಳ ತಪಾಸಣೆ ನಡೆಸುವರು. ಜೊತೆಗೆ ಸಂಜ್ಞೆ ತೋರಿದರೂ ನಿಲ್ಲಸದೆ ತೆರಳುವ ವಾಹನಗಳನ್ನು ಫ್ಲ್ಯೆಯಿಂಗ್ ಸ್ಕ್ವಾಡ್ ಸಿಬ್ಬಂದಿಯ ತಂಡ ಬೆಂಬತ್ತಿ ಹಿಡಿಯುವರು. ಇವರ ಜೊತೆ ವೀಡಿಯೋಗ್ರಾಫರ್ ಚಿತ್ರೀಕರಣ ನಡೆಸುವರು.