ಕಾಸರಗೋಡು: ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದಲ್ಲಿರುವ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಪ್ರತಿಷ್ಠಾದಿನ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರನ್ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ಸುಬ್ರಾಯ ಕಾರಂತ ಹಾಗು ಸಹಾಯಕ ಅರ್ಚಕ ಗೋಪಾಲಕೃಷ್ಣ ಕಾರಂತರ ಸಹಕಾರದೊಂದಿಗೆ ಮೇ 9 ರಂದು ವಿವಿಧ ವೈಧಿಕ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಮೇ.9 ರಂದು ಬೆಳಿಗ್ಗೆ 6 ಕ್ಕೆ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ 12ಗಂಟೆಗೆ ಮಹಾಪೂಜೆ ನಡೆಯಲಿದೆ. ಶುದ್ಧ ಪಂಚಮಿ ದಿನ ವಿವೇಷದ ಹಿನ್ನೆಲೆಯಲ್ಲಿ ನಾಗಸನ್ನಿಧಿಯಲ್ಲಿ ವಿಶೇಷ ನಾಗತಂಬಿಲ, ಬಳಿಕ ಅನ್ನದಾನ ಜರಗಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ರಿಂದ ಕುತ್ಯಾಳ ಶ್ರಿ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದವರಿಂದ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಸಂಜೆ 6.30 ರಿಂದ ಶೇಷವನ ಭಕ್ತವೃಂದದವರಿಂದ ಭಜನಾ ಸಂಕೀರ್ತನೆ, ರಾತ್ರಿ 7 ರಿಂದ ಸಾಮೂಹಿಕ ರಂಗಪೂಜೆ, 8ಕ್ಕೆ ಮಹಾಪೂಜೆ, ಅನ್ನ ಪ್ರಸಾದ ವಿತರಣೆ ಜರಗಲಿದೆ. ಮೇ.10 ರಂದು ಶುದ್ಧ ಷಷ್ಠಿಯ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಗೆ ವಿಶೇಷ ಮಹಾಪೂಜೆ, ಬಲಿವಾಡು ಸೇವೆ, ಸಂಜೆ 7 ರಿಂದ ಶೇಷವನ ಭಕ್ತವೃಂದದವರಿಂದ ಭಜನಾ ಸಂಕೀರ್ತನೆ, 8ಕ್ಕೆ ಮಹಾಪೂಜೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡು ಸಹಕರಿಸಬೇಕೆಂದು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವಿನಂತಿಸಿದ್ದಾರೆ.