ಏಪ್ರಿಲ್ 9 ರಂದು ಕೊಂಡೆವೂರಲ್ಲಿ ದೃಢಕಲಶಾಭಿಷೇಕ
0
ಏಪ್ರಿಲ್ 04, 2019
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಏಪ್ರಿಲ್ 9, ಮಂಗಳವಾರದಂದು ಕಟೀಲಿನ ಅನುವಂಶಿಕ ಅರ್ಚಕ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ಶ್ರೀ ಗಾಯತ್ರೀ ದೇವಿ ಹಾಗೂ ಸದ್ಗುರು ಶ್ರೀ ನಿತ್ಯಾನಂದ ಗುರುಗಳಿಗೆ ದೃಢಕಲಶಾಭಿಷೇಕವು ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ.
ಪ್ರಾತ:ಕಾಲದಿಂದ ಮಧ್ಯಾಹ್ನದವರೆಗೆ ನಡೆಯುವ ವಿವಿಧ ವೈದಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀ ಗಾಯತ್ರೀ ದೇವಿಯ ಮತ್ತು ಶ್ರೀ ನಿತ್ಯಾನಂದ ಭಗವಾನರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಆಶ್ರಮದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ವಿನಂತಿಸಿದೆ.