ಪಾರೆಸ್ಥಾನ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರದ ವಾರ್ಷಿಕ ಕಳಿಯಾಟ ಮಹೋತ್ಸವ
0
ಏಪ್ರಿಲ್ 01, 2019
ಕುಂಬಳೆ : ಆರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರದ ವಾರ್ಷಿಕ ಕಳಿಯಾಟ ಮಹೋತ್ಸವವು ಮಾ.30 ರಿಂದ ಆರಂಭಗೊಂಡಿದ್ದು, ಎ.6 ರ ತನಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಮಾ.30 ರಂದು ಸಂಜೆ 4 ಗಂಟೆಗೆ ಚಪ್ಪರ ಮುಹೂರ್ತ,ದೀಪ ಪ್ರತಿಷ್ಠೆ,ರಾತ್ರಿ 10 ರಿಂದ ಭಂಡಾರ ಮನೆಯಿಂದ ಭಂಡಾರ ಆಗಮನ ನಡೆಯಿತು.
ಮಾ.31 ರಂದು ಸಂಜೆ 4 ಗಂಟೆಗೆ ಭಗವತೀ ದರ್ಶನ,ಕೆಂಡಸೇವೆ,ಪ್ರದಕ್ಷಿಣೆ ಬಲಿ,ಬಿಂಬ ದರ್ಶನದ ಬಳಿಕ ಧ್ವಜಾರೋಹಣ,ರಾತ್ರಿ 8 ರಿಂದ ವಿವಿಧ ದೈವದ ಕೋಲಗಳು ನಡೆಯಿತು.
ಎ.1 ರಂದು ಸಂಜೆ 5 ರಿಂದ ಭಗವತೀ ದರ್ಶನ ಮತ್ತು ಅಡೆಯಾಳಂ ಚೇರ್ಕಲ್, ರಾತ್ರಿ 9 ರಿಂದ ವಿವಿಧ ದೈವಗಳ ಕೋಲ ನಡೆಯಲಿದೆ. ಎ.2 ರಂದು ಮೊದಲ ಕಳಿಯಾಟದಂಗವಾಗಿ ಬೆಳಗ್ಗೆ 6 ರಿಂದ ಮಲಯಾಂ ಚಾಮುಂಡಿ ದೈವದಕೋಲ,ಸಂಜೆ 5ರಿಂದ ವಿವಿಧ ದೈವಗಳ ಕೋಲ ನಡೆಯಲಿದೆ.
ಎ.3 ರಂದು ನಡು ಕಳಿಯಾಟದಂಗವಾಗಿ ಬೆಳಿಗ್ಗೆ ಗಂಟೆ 4 ರಿಂದ ವೀರ ಪುತ್ರನ್ ದೈವದ ಕೋಲ,ಸಂಜೆ 5 ರಿಂದ ವಿವಿಧ ದೈವಗಳ ಕೋಲ ನಡೆಯಲಿದೆ.ರಾತ್ರಿ 9.30 ರಿಂದ ಲಕುಮಿ ತಂಡದಿಂದ ಒವುಲಾ ಒಂತೆ ದಿನಾನೆ ತುಳು ನಾಟಕ ಜರಗಲಿದೆ.
ಎ.4 ರಂದು ಬೆಳಿಗ್ಗೆ 4.30 ರಿಂದ ಪೀಯಾಯಿ,ಆಲಿ ಭೂತದ ಬಳಿಕ ರಾತ್ರಿ ತನಕ ವಿವಿಧ ದೈವಗಳ ಕೋಲ ನಡೆಯಲಿದೆ.ರಾತ್ರಿ 7 ಗಂಟೆಗೆ ನೃತ್ಯ ವೈಭವ ಜರಗಲಿದೆ.
ಎ.5 ರಂದು ಮುಂಜಾನೆ 1 ಗಂಟೆಗೆ ವೀರ ಪುತ್ರನ್ ದೈವಗಳ ಕೋಲ,ಬೆಳಿಗ್ಗೆ 5.30 ರಿಂದ ಪೀಯಾಯಿ,ಆಲಿಭೂತ ಮುಂತಾದ ದೈವಗಳ ಕೋಲ ರಾತ್ರಿ ತನಕ ನಡೆಯಲಿದೆ.
ಎ.6 ರಂದು ಬೆಳಿಗ್ಗೆ ಪೀಯಾಯಿ,ಆಲಿ ಭೂತದ ಬಳಿಕ ರಾತ್ರಿ ತನಕ ವಿವಿಧ ದೈವಗಳ ಕೋಲ ನಡೆದು ರಾತ್ರಿ 11.30ಕ್ಕೆ ಭಂಡಾರಮನೆಗೆ ಭಂಡಾರ ನಿರ್ಗಮನದ ಬಳಿಕ ಅನ್ನದಾನದೊಂದಿಗೆ ಸಂಪನ್ನಗೊಳ್ಳಲಿದೆ.ನಿತ್ಯ ಮಧ್ಯಾಹ್ನ ಅನ್ನದಾನವಿರುವುದು.