HEALTH TIPS

ಸಾಂಪ್ರದಾಯಿಕ ಪತ್ರಿಕೋದ್ಯಮ ಕುಸಿದಿಲ್ಲ-ಎ.ಕೆ.ಎಂ.ಅಶ್ರಫ್ ಪತ್ರಕರ್ತ ಮುತ್ತಲಿಬ್ ಕುಂಬಳೆ ಸಂಸ್ಮರನೆ ಉದ್ಘಾಟಿಸಿ ಅಭಿಮತ

 
      ಕುಂಬಳೆ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಿಡುವಲ್ಲಿ ಮಾಧ್ಯಮ ಕ್ಷೇತ್ರದ ಕೊಡುಗೆ ಮಹತ್ತರವಾದುದಾಗಿದ್ದು, ಪತ್ರಿಕೋದ್ಯಮ ಮತ್ತು ಆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರ ಶ್ರೇಯೋಭಿವೃದಿಗೆ ಕೊಡುಗೆ ನೀಡುವ ಅಗತ್ಯ ನಾಗರಿಕ ಸಮಾಜದ ಜವಾಬ್ದಾರಿ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಭಿಪ್ರಾಯ ವ್ಯಕ್ತಪಡಿಸಿದರು.
    ಕುಂಬಳೆ ಪ್ರೆಸ್ ಪೋರಂ ನೇತೃತ್ವದಲ್ಲಿ ಪ್ರೆಸ್ ಪೋರಂ ಕಾರ್ಯಾಲಯದಲ್ಲಿ ಗುರುವಾರ ಅಪರಾಹ್ನ ನಡೆದ ಪತ್ರಕರ್ತ ದಿ.ಮುತ್ತಲಿಬ್ ಕುಂಬಳೆ ಇವರ ಸಂಸ್ಮರಣಾ ಸಮಾರಂಭ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಮಾಧ್ಯಮ ಕ್ಷೇತ್ರದ ಬೆನ್ನೆಲುಬಾಗಿರುವ ಸ್ಥಳೀಯ ಪತ್ರಕರ್ತರ ಸೇವಾ ತತ್ಪರತೆ, ಅರಿವಿನ ವಿಸ್ತಾರತೆ ಮತ್ತು ಸಮಾಜದೊಂದಿಗೆ ಇರುವ ನಿಕಟತೆಯ ಹಿನ್ನೆಲೆಯಲ್ಲಿ ಪತ್ರಕರ್ತರ ದುರ್ಗಮವಾದ ಬದುಕಿನ ಬಗ್ಗೆ ಅರಿಯುವ ಸೌಹಾರ್ಧತೆಯನ್ನು ಸಮಾಜ ಗುರುತಿಸಬೇಕು. ಆಧುನಿಕ ತಂತ್ರಜ್ಞಾನದ ವ್ಯಾಪಕ ಬಳಕೆಯ ಮಧ್ಯೆ ಸಾಂಪ್ರದಾಯಿಕ ಪತ್ರಿಕೋದ್ಯಮದ ಶಕ್ತಿ ಖಂಡಿತವಾಗಿಯೂ ಕುಸಿದಿಲ್ಲ ಎಂದು ವಿಶ್ಲೇಶಿಸಿದ ಅವರು, ಶಕ್ತಿಶಾಲಿಯಾದ ಮಾಧ್ಯಮ ರಂಗದ ಅಗಲಿದ ಸಾಧಕ ವರದಿಗಾರರ ಸಂಸ್ಮರಣೆಗಳು ಉತ್ತಮ ಕಾರ್ಯಚಟುವಟಿಕೆ ಎಂದು ತಿಳಿಸಿದರು.
    ಪ್ರೆಸ್ ಕ್ಲಬ್ ಅಧ್ಯಕ್ಷ ಸುರೇಂದ್ರ ಮಾಸ್ತರ್ ಚೀಮೇನಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಲೇಖಕ, ಸಾಹಿತಿ ವಿನೋದ್ ಕುಮಾರ್ ಪೆರುಂಬಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಮಾಧ್ಯಮ ಕ್ಷೇತ್ರದ ಜವಾಬ್ದಾರಿಗಳು ಬಹುಮುಖದಲ್ಲಿ ವಿಸ್ತರಿಸಲ್ಪಡುತ್ತಿದ್ದು, ಅತ್ಯಂತ ವೇಗದ ಮಾಹಿತಿ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸುವ ನೈಪುಣ್ಯತೆ ಇರಬೇಕು. ಮಾನವೀಯ ವಿಶಾಲ ಹೃದಯವಂತಿಕೆಯ ಮಧ್ಯೆ ಮನೋಕ್ಲೇಶಕ್ಕೆ ಕಾರಣವಾಗುವ ಘಟನಾವಳಿಗಳನ್ನು ಗಮನಿಸುವ, ಆ ಬಗ್ಗೆ ಕಳಕಳಿ ಹೊಂದಿರುವ ಪತ್ರಕರ್ತರ ಸಮಗ್ರ ಅಭಿವೃದ್ದಿಗೆ ಅಗತ್ಯದ ಕ್ರಮಗಳನ್ನು ಸಂಘಟನಾತ್ಮಕವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ಮೊಹಮ್ಮದ್ ಇಬ್ರಾಹಿಂ ಪಾವೂರು ಅವರು ಉಪಸ್ಥಿತರಿದ್ದು, ಮುತ್ತಲಿಬ್ ಸಂಸ್ಮರಣಾ ಪ್ರಶಸ್ತಿಯನ್ನು ಕೆ.ಎ.ಅಬ್ದುಲ್ಲ ಅವರಿಗೆ ವಿತರಿಸಿ ಶುಭಹಾರೈಸಿದರು.
    ಕಾಸರಗೋಡು ಪ್ರೆಸ್ ಕ್ಲಬ್ ಸದಸ್ಯ ಶಾಫಿ ತೆರುವತ್ ಉಪಸ್ಥಿತರಿದ್ದು ಸಂಸ್ಮರಣಾ ಭಾಷಣಗೈದು ದಿ.ಮುತ್ತಲಿಬ್ ಅವರ ಕರ್ತವ್ಯನಿಷ್ಠೆ, ಅವರಿಗಿದ್ದ ಸಂಪರ್ಕ ಮತ್ತು ಅಗಾಧ ಅರಿವಿನ ವಿಸ್ತಾರತೆಯ ಬಗ್ಗೆ ನೆನಪಿಸಿದರು. ಕೆಎಂಸಿಸಿ ಮಂಜೇಶ್ವರ ಮಂಡಲ ಮುಖಂಡ ಅಶ್ರಫ್ ಕಾರ್ಳೆ ಉಪಸ್ಥಿತರಿದ್ದರು.
   ಫ್ರೆಸ್ ಪೋರಂ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ಎಂ.ಎ.ಸತ್ತಾರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries