ಕಾಟುಕುಕ್ಕೆ ದೇವಳದ ಪ್ರತಿಷ್ಠಾ ದಿನ
0
ಏಪ್ರಿಲ್ 04, 2019
ಪೆರ್ಲ:ಕಾಟುಕುಕ್ಕೆ ಶ್ರೀಸುಬ್ರಾಯ ದೇವಳದ ಪ್ರತಿಷ್ಠಾ ದಿನದ ಅಂಗವಾಗಿ ಮಂಗಳವಾರ ವಿವಿಧ ಕಾರ್ಯಕ್ರಮಗಳು ಜರುಗಿದವು.
ಸೋಮವಾರ ರಾತ್ರಿ ರಾಕ್ಷೋಘ್ನ ಹೋಮ, ವಾಸ್ತುಬಲಿ, ಮಂಗಳವಾರ ಬೆಳಿಗ್ಗೆ ಉಷಃಪೂಜೆ, 108 ಕಾಯಿ ಗಣಪತಿ ಹೋಮ, ಬಲಿವಾಡು ಕೂಟ, ಶತರುಧ್ರಾಭಿಷೇಕ, ಕಲಶಾಭಿಷೇಕ, ತುಲಾಭಾರ, ರಾತ್ರಿ ರಂಗಪೂಜೆ, ದೇವರ ಬಲಿ, ಶ್ರೀ ಭೂತಬಲಿ, ಬೆಡಿ, ದರ್ಶನ ಬಲಿ, ಬಟ್ಟಲು ಕಾಣಿಕೆ,
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ದೇವಳದ ಪ್ರತಿಷ್ಠಾ ದಿನದ ಅಂಗವಾಗಿ ಮಂಗಳವಾರ ಶ್ರೀ ಸುಬ್ರಣ್ಯೇಶ್ವರ ಮಹಿಳಾ ಮಂಡಳಿ ಸದಸ್ಯರುಗಳು ಮತ್ತು ಅವರ ಮಕ್ಕಳಿಂದ ವಿವಿಧ ಭಾಷೆ, ಪ್ರಕಾರ ವಿಭಿನ್ನ ಶೈಲಿಗಳ ನೃತ್ಯ ವೈಭವ ಜನ ಮನ ರಂಜಿಸಿತು.