ಕಾಸರಗೋಡು: ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕಾಸರಗೋಡಿಗೆ ಆಗಮಿಸಲಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವರು. ದೆಹಲಿಯಿಂದ ಹೆಲಿಕಾಪ್ಟರ್‍ನಲ್ಲಿ ಆಗಮಿಸುವ ನಿರ್ಮಲಾ ಸೀತಾರಾಮನ್ ಮಧ್ಯಾಹ್ನ ಉದುಮದ ಪಂಚನಕ್ಷತ್ರ ಹೊಟೇಲ್‍ನ ಹೆಲಿಪ್ಯಾಡ್‍ನಲ್ಲಿಳಿಯುವರು. ಅಲ್ಲಿಂದ ಕಾರಿನಲ್ಲಿ ಕಾಸರಗೋಡಿಗೆ ಆಗಮಿಸುವ ಅವರು ಮಧ್ಯಾಹ್ನ 2 ಗಂಟೆಗೆ ರೋಡ್‍ಶೋ ನಡೆಸುವರು. ಕಸಬ ಕಡಪ್ಪುರದಿಂದ ರೋಡ್‍ಶೋ ಉದ್ಘಾಟನೆಗೊಳ್ಳಲಿದ್ದು, ಬಳಿಕ ನಗರದಲ್ಲಿ ವಿವಿಧೆಡೆ ಸಾಗಲಿದೆ. ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಹಾಗು ಪಕ್ಷದ ಹಲವು ನೇತಾರರು ಜೊತೆಗಿರುವರು.