HEALTH TIPS

ಸಮರಸ-ಮಹಾ ಭಾರತದ ಜನತಂತ್ರದ ಹೆಜ್ಜೆಗಳು!

ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸಾಮಾಜಿಕ,ಆರ್ಥಿಕ,ಭೌಗೋಳಿಕ, ಆಡಳಿತ, ಸಾಂಸ್ಕøತಿ ಸಹಿತ ವ್ಯವಸ್ಥೆಗಳು ಇತರ ದೇಶಕ್ಕಿಂತ ಭಿನ್ನವಾಗಿದ್ದು, ತನ್ನ ವಿಶಾಲ ಭೂ ವ್ಯವಸ್ಥೆ, ವೈವಿಧ್ಯಮಯ ಆಚಾರ-ವಿಚಾರ ಜೊತೆಗೆ ಬೃಹತ್ ಜನಸಂಖ್ಯೆಯ ಕಾರಣ ವಿಶಿಷ್ಟವಾದುದು. ವಿಜ್ಞಾನ ಸಹಿತ ಬಹುತೇಕ ಎಲ್ಲಾ ವಿಭಾಗಗಳಲ್ಲೂ ಅತ್ಯುನ್ನತ ಸ್ಥಾನದಲ್ಲಿ ಮಿಂಚುತ್ತಿರುವ ನಮ್ಮ ರಾಷ್ಟ್ರದ ಸುಧೀರ್ಘ ಪ್ರಜಾತಂತ್ರದಿಂದ ಇಂದಿನ ಈ ಮಟ್ಟಕ್ಕೆ ಏರಲಾಗಿರುವುದನ್ನು ಮರೆಯುವಂತಿಲ್ಲ. ಪ್ರಸ್ತುತ ರಾಷ್ಟ್ರದ ಸಂವಿಧಾನದ ಪ್ರಧಾನ ಅಂಗವಾದ ಶಾಸಕಾಂಗ ಅಥವಾ ಲೋಕಸಭಾ ನಿರ್ವಹಣೆಯ 17ನೇ ಮಹಾ ಚುನಾವಣೆಗೆ ದಿನಗಳಷ್ಟೇ ಬಾಕಿಯಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರ ಸ್ವಾತಂತ್ರ್ಯಾ ಬಳಿಕ ಗಟ್ಟಿ ತನದ ಈ ಪ್ರಜಾತಂತ್ರ್ಯವನ್ನು ಕಾಯ್ದ ಬಂದ ಸಿಂಹಾವಲೋಕನ ಅಗತ್ಯವಿದೆ ಎಂಬ ಪರಿಕಲ್ಪನೆಯಡಿ ಸಮರಸ ಸುದ್ದಿ ಇಂದಿನಿಂದ ನಿಯಮಿತವಾಗಿ ಮಹಾ ಭಾರತದಜನತಂತ್ರದ ಹೆಜ್ಜೆ ಎಂಬ ವಿನೂತನ ಲೇಖನ ಮಾಲೆಯನ್ನು ಓದುಗರ ಮುಂದಿರಿಸುತ್ತಿದೆ.ಓದಿರಿ,,,ಪ್ರೋತ್ಸಾಹಿಸಿರಿ.....ಗಟ್ಟಿ ಜನತಂತ್ರ ಅರಿವಿನೊಂದಿಗೆ ಮುನ್ನಡೆಸೋಣ. ಲೋಕಸಭೆ ಸಂಕ್ಷಿಪ್ತ ವಿವರ: ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ 552 ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ 530 ಸದಸ್ಯರು ಚುನಾಯಿತರಾಗುತ್ತಾರೆ. 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಇದೆ. ಲೋಕಸಭೆಯ ಸದಸ್ಯರಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ಲೋಕಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು. ಐದು ವರ್ಷಗಳ ನಂತರ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಚುನಾವಣೆಗಳನ್ನು ಮುಂದೂಡಬಹುದು. ಹಾಗೆಯೇ ಅವಧಿ ಮುಗಿಯುವ ಮುನ್ನ ಸರ್ಕಾರ ಬಹುಮತ ಕಳೆದುಕೊಂಡಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯಬೇಕಾಗಬಹುದು. ಪ್ರಸ್ಥುತ ಕಾರ್ಯ ನಿರ್ವಹಿಸುತ್ತಿರುವ 16 ನೆಯ ಲೋಕಸಭೆ ಮೇ, 2014 ರಲ್ಲಿ ಸೇರಿತು. ಪ್ರತಿ ರಾಜ್ಯದಿಂದ ಇರುವ ಲೋಕಸಭಾ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈಗಿನ ಹಂಚಿಕೆ ಹೀಗಿದೆ (545 ಸದಸ್ಯರು: 543 ಚುನಾಯಿತ + 2 ನೇಮಿತ): ಭಾರತದ ರಾಜ್ಯವಾರು ಲೋಕಸಭಾ ಕ್ಷೇತ್ರಗಳು: 2014 ರ ಚುನಾವಣೆ ಫಲಿತಾಂಶ ಕೆಳಗೆ ಕೊಟ್ಟಿದೆ ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ . ಉಳಿದ 25 ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ. ರಾಜ್ಯಗಳು: ಕ್ರಮ ಸಂಖ್ಯೆ ರಾಜ್ಯಗಳು ನಿಗದಿತ ಲೋಕಸಭಾಸ್ಥಾನಗಳು 1 ಆಂಧ್ರ ಪ್ರದೇಶಸೀಮಾಂಧ್ರ 25 2 ತೆಲಂಗಾಣ 17 3 ಅರುಣಾಚಲ ಪ್ರದೇಶ - 2 4 ಅಸ್ಸಾಮ್ - 14 5 ಬಿಹಾರ - 40 6 ಚತ್ತೀಸ್‍ಗಢ - 11 7 ಗೋವ - 2 8 ಗುಜರಾತ್ - 26 9 ಹರ್ಯಾಣಾ - 10 10 ಹಿಮಾಚಲ ಪ್ರದೇಶ - 4 11 ಜಮ್ಮು ಮತ್ತು ಕಾಶ್ಮೀರ - 6 12 ಜಾಖರ್ಂಡ್ - 14 13 ಕರ್ನಾಟಕ - 28 14 ಕೇರಳ - 20 15 ಮಧ್ಯ ಪ್ರದೇಶ - 29 16 ಮಹಾರಾಷ್ಟ್ರ - 48 17 ಮಣಿಪುರ - 2 18 ಮೇಘಾಲಯ - 2 19 ಮಿಜೋರಮ್ - 1 20 ನಾಗಾಲ್ಯಾಂಡ್ - 1 21 ಒಡಿಶಾ - 21 22 ಪಂಜಾಬ್ - 13 23 ರಾಜಸ್ಥಾನ - 25 24 ಸಿಕ್ಕಿಮ್ - 1 25 ತಮಿಳುನಾಡು - 39 26 ತ್ರಿಪುರಾ - 2 27 ಉತ್ತರ ಪ್ರದೇಶ - 80 28 ಉತ್ತರಾಂಚಲ - 5 29 ಪಶ್ಚಿಮ ಬಂಗಾಳ - 42 ಕೇಂದ್ರಾಡಳಿತ ಪ್ರದೇಶಗಳು 1 ಅಂಡಮಾನ್ ಮತ್ತು ನಿಕೋಬಾರ್ - 1 2 ಚಂಡೀಗಢ - 1 3 ದಾದ್ರಾ ಮತ್ತು ನಗರ್ ಹವೇಲಿ - 1 4 ಡಾಮನ್ ಮತ್ತು ಡಿಯು - 1 5 ದೆಹಲಿ - 7 6 ಲಕ್ಷದ್ವೀಪ - 1 7 ಪಾಂಡಿಚೆರಿ - 1 ಮುಂದುವರಿಯುವುದು.............

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries