HEALTH TIPS

ತಲೇಕಳದಲ್ಲಿ ವಿಷು ಆಚರಣೆ

         ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ಸೌರಮಾನ ಯುಗಾದಿ ಹಬ್ಬದ ಹೊಸ ವರ್ಷಾಚರಣೆಯ ವಿಷು ಪರ್ವವನ್ನು ವಿಶೇಷ ಸೇವೆಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಷುಕಣಿಯೊಂದಿಗೆ ವಿಶೇಷ ಪೂಜೆಯನ್ನು ಪಂಚಾಂಗ ಪುಸ್ತಕಕ್ಕೆ ಸಲ್ಲಿಸಿ ಸಮೂಹಿಕವಾಗಿ ಪಂಚಾಂಗ ಶ್ರವಣ ವನ್ನು ಮಾಡಲಾಯಿತು. ತಲೇಕಳ ಶ್ರೀ ಸದಾಶಿವ ರಾಮವಿಠಲ ದೇಗುಲದಲ್ಲಿ ಹೊಸ ವóರ್ಷ ಸೌರಮಾನ ಯುಗಾದಿ, ವಿಷುಕಣಿ, ಪಂಚಾಂಗ ಶ್ರವಣದ ಆಚರಣೆಯ ಸಲುವಾಗಿ-ಕಲ್ಪತರು ಹಾಗೂ ಹಲವಾರು ಬಗೆ ಬಗೆಯ ಹಣ್ಣು ಹಂಪಲು, ಫಲ ಪುಷ್ಪಗಳನ್ನು ಇರಿಸಿ ರಜತ, ಸ್ವರ್ಣ ಅಲಂಕಾರದೊಂದಿಗೆ ದರ್ಪಣದ ಮೂಲಕ ಪ್ರತಿಬಿಂಬವನ್ನು ನೋಡಿ ವಿಷುಕಣಿಯನ್ನು ಆಚರಿಸಲಾಯಿತು. ದೇವರಿಗೆ ವಿಶೇಷó ಸೇವೆಗಳನ್ನು ಸಲ್ಲಿಸಿ, ಪಂಚಾಂಗ ಶ್ರವಣವನ್ನು ಮಾಡಲಾಯಿತು. ಧಾರ್ಮಿಕ ಕಾರ್ಯಕ್ರಮಗಳ ನಂತರ ವಿಶೇಷವಾಗಿ ಸಮಿತಿಯ ಸಭೆಯನ್ನು ಕರೆಯಲಾಯಿತು.
    ಶ್ರೀಕ್ಷೇತ್ರದಲ್ಲಿ ಪ್ರಾತ:ಕಾಲ ಉಷ: ಪೂಜೆಯೊಂದಿಗೆ ಮೊಕ್ತೇಸರ ವೇದಮೂರ್ತಿ ಯಸ್. ವಾಸುದೇವ ಭಟ್ ಇವರ ನೇತೃತ್ವದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಲಕ್ಷ್ಮೀಶ ವಿ ಹಾಗೂ ಸಮಿತಿಯವರೊಡಗೂಡಿ ಶಿವರಾಜ. ವಿ. ಇವರ ಸಹಭಾಗಿತ್ವದೊಂದಿಗೆ ಪರಿವಾರ ದೇವತೆಗಳಿಗೆ ವಿಶೇಷ ಪೂಜಾದಿ ಸೇವೆಗಳು, ಸದಾಶಿವ ದೇವರ ಸನ್ನಿಧಿಯಲ್ಲಿ ಪಂಚಾಂಮೃತಾಭಿಷೇಕ, ರುದ್ರಾಭಿಷೇಕದೊಂದಿಗೆ ವಿಶೇóಷ ಪೂಜಾದಿಗಳನ್ನು ನೆರವೇರಿಸಿ ರಜತ, ಸ್ವರ್ಣ, ಪುಷ್ಪಾಲಂಕಾರದೊಂದಿಗೆ ಪೂಜಿಸಲಾಯಿತು. ಸಾಮೂಹಿಕವಾಗಿ ಭಜನಾ ಸೇವೆಯನ್ನು ಸಲ್ಲಿಸಿ, ಪ್ರಾರ್ಥನೆಯನ್ನು ಮಾಡಲಾಯಿತು. ಸೌರಮಾನ ಯುಗಾದಿ ಹೊಸ ವರ್ಷ ಪರ್ವವಾದ ಪಂಚಾಂಗ ಶ್ರವಣದ ಸಲುವಾಗಿ ಪುಸ್ತಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಪಂಚಾಂಗ ಶ್ರವಣವನ್ನು ಸಾಮೂಹಿಕವಾಗಿ ಮಾಡಲಾಯಿತು. ಭಗವದ್ಭಕ್ತರ ಸಮ್ಮುಖದಲ್ಲಿ ಶ್ರೀ ಕ್ಷೇತ್ರದ ವರ್ಷಾವಧಿ ಉತ್ಸವದ ಅಂಗವಾಗಿ ಮೇ 7 ರಂದು ನಡೆಯಲಿರುವ ಅಕ್ಷಯ ತೃತೀಯ ಸೇವೆಯ ಅಮಂತ್ರಣ ಪತ್ರಿಕೆಯನ್ನು ಭಕ್ತಾಧಿಗಳಿಗೆ ನೀಡಲಾಯಿತು. ತೀರ್ಥ ಪ್ರಸಾದವನ್ನು ಭಕ್ತಾದಿಗಳೆಲ್ಲರೂ ಸ್ವೀಕರಿಸಿ, ಭಕ್ತಿ ಪರವಶರಾಗಿ ಸೌರಮಾನದ ಹೊಸ ವರ್ಷವನ್ನು ಹರ್ಷದಿಂದ  ಸ್ವಾಗತಿಸಿ ನಾಡಿಗೆ ಶುಭವನ್ನು ಕೋರಿದರು. ನವೀಕರಣ ಜೀಣೋದ್ಧಾರ ಹಾಗೂ ವರ್ಷಾವಧಿ ಉತ್ಸವದ ಸಲುವಾಗಿ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಶೆಟ್ಟಿ, ತಲೇಕಳ ಇವರು ಸಮಿತಿಯ ಸಭೆಯನ್ನು ಕರೆದು ಸದಸ್ಯರೊಂದಿಗೆ ಚಿಂತಿಸಿ ಕಾರ್ಯಕ್ರಮವನ್ನು ಸಂಪನ್ನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries