ಕುಂಬಳೆ: ಆರಿಕ್ಕಾಡಿ ಹನುಮಾನ್‍ನಗರದ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಏ.19 ರಂದು ಆರಂಭಗೊಂಡಿದ್ದು 25 ರ ವರೆಗೆ ವಿವಿಧ ಕಾಯರ್ಣಕ್ರಮಗಳೊಂದಿಗೆ ಜರಗಲಿದೆ.
ಏ.19 ರಂದು ಪ್ರಾತ:ಕಾಲ ಶ್ರೀ ಕ್ಷೇತ್ರಗಳ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರು ಹಾಗು ವೈದಿಕ ಶ್ರೇಷ್ಠರ ಆಗಮನ, ಪೂರ್ಣಕುಂಭ ಸ್ವಾಗತ, ಶ್ರೀ ಗಣಪತಿ ಹವನ, ಉಗ್ರಾಣ ಭರಣ, ದೀಪ ಸ್ಥಾಪನೆ, ಪರಮಪೂಜ್ಯ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರಿಂದ ಉಗ್ರಾಣ ಉದ್ಘಾಟನೆ ನಡೆಯಿತು. ಸಂಜೆ ಆಚಾರ್ಯವರಣ, ಪುಣ್ಯಾಹ, ಅಂಕುರಾರೋಪಣ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ರಕ್ಷೋಘ್ನ ಹೋಮ, ರಾತ್ರಿ ಪೂಜೆ ಜರಗಿತು. ಏ18 ರಂದು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಶನಿವಾರ ವಿವಿಧ ವೈದಿಕ ವಿಧಿವಿಧಾನಗಳು, ಧಾರ್ಮಿಕ ಸಭೆ, ಸಾಮಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಏ..24 ರಂದು ಬೆಳಗ್ಗೆ ಶ್ರೀ ಗಣಪತಿ ಹೋಮ, 9.45 ರಿಂದ ಜೀವಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ನಿತ್ಯ ನೈಮಿತ್ತಿಕ ನಿರ್ಣಯ, ಮಧ್ಯಾಹ್ನ ಮಹಾಪೂಜೆ, 1 ಕ್ಕೆ ಅನ್ನ ಪ್ರಸಾದ ಸಂತರ್ಪಣೆ, 3 ರಿಂದ ಆಟೋಟ ಸ್ಪರ್ಧೆಗಳು, ಸಂಜೆ 6 ಕ್ಕೆ ತಾಯಂಬಕ, 6.30 ಕ್ಕೆ ಸ್ಯಾಕ್ಸೋಫೆÇೀನ್ ವಾದನ, 7 ಕ್ಕೆ ಬಲಿ ಉತ್ಸವ, ಶ್ರೀ ಭೂತ ಬಲಿ, ಸಿಡಿ ಮದ್ದು ಪ್ರದರ್ಶನ, ಬಲಿ ಉತ್ಸವ ನಡೆಯಲಿದೆ.
ಏ.25 ರಂದು ಬೆಳಿಗ್ಗೆ 8.30 ಕ್ಕೆ ಶ್ರೀ ಭೂತ ಬಲಿ, ದರ್ಶನ ಬಲಿ, ರಾಜಾಂಗಣ ಗಂಧ ಪ್ರಸಾದ ವಿತರಣೆ, 10 ಕ್ಕೆ ರಕ್ತೇಶ್ವರಿ ಕೋಲ, ಗುಳಿಗನ ಕೋಲ, ಸಂಪೆÇ್ರೀಕ್ಷಣೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, 1 ಕ್ಕೆ ಅನ್ನಪ್ರಸಾದ ಸಂತರ್ಪಣೆ ನಡೆಯುವುದು.