HEALTH TIPS

ಇಂದು ಅಬ್ಬರದ ಪ್ರಚಾರಕ್ಕೆ ತೆರೆ

        ಕಾಸರಗೋಡು: ಕೇರಳದಲ್ಲಿ ಎ.23 ರಂದು ಲೋಕಸಭೆಗೆ ನಡೆಯಲಿರುವ ಚುನಾವಣೆಯ ಅಬ್ಬರದ ಪ್ರಚಾರಗಳಿಗೆ ಎ.21 ರಂದು ಸಂಜೆ 5 ಗಂಟೆಗೆ ತೆರೆ ಬೀಳಲಿದೆ.
      ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಶಬರಿಮಲೆ ವಿಷಯವೇ ರಾಜಕೀಯ ಒಕ್ಕೂಟಗಳ ಕಾರ್ಯಸೂಚಿಯಾಗಿವೆ. ಈ ಚುನಾವಣೆಯಲ್ಲಿ ಶಬರಿಮಲೆ ವಿಷಯವನ್ನು ಒಂದು ಪ್ರಮುಖ ಚರ್ಚಾ ವಿಷಯವನ್ನಾಗಿಸಲು ಮೊದಲು ಬಿಜೆಪಿ ತೀರ್ಮಾನಿಸಿತ್ತು. ಅದರ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರಮೋದಿ ಕಲ್ಲಿಕೋಟೆ ಬಳಿಕ ತಿರುವನಂತಪುರದಲ್ಲಿ ನಡೆಸಿದ ಎನ್‍ಡಿಎ ಚುನಾವಣಾ ಪ್ರಚಾರ ಸಭೆಗಳಲ್ಲಿ ಶಬರಿಮಲೆ ವಿಷಯವನ್ನು ಪ್ರಧಾನ ಪ್ರಚಾರ ಅಸ್ತ್ರವನ್ನಾಗಿ ಎಡರಂಗದ ವಿರುದ್ಧ ಪ್ರಯೋಗಿಸಿದಾಗ ಅದು ಎಡರಂಗವನ್ನು ಕೆಂಡಾಮಂಡಲಗೊಳಿಸಿ ಶಬರಿಮಲೆ ವಿಷಯದಲ್ಲಿ ಎನ್‍ಡಿಎಗೆ ತೀಕ್ಷ್ಣವಾದ ಭಾಷೆಯಲ್ಲೇ ಚುನಾವಣಾ ಪ್ರಚಾರ ವೇದಿಕೆಗಳಲ್ಲಿ ಪ್ರತಿಕ್ರಿಯೆ ನೀಡತೊಡಗಿತು.
       ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಸರಗೋಡಿನಲ್ಲಿ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲೂ ನಂಬುಗೆ ವಿಷಯದಲ್ಲಿ ಬಿಜೆಪಿ ಮತ್ತು ಪ್ರಧಾನಮಂತ್ರಿ ಮೋದಿ ನಡೆಸುತ್ತಿರುವ ಪ್ರಚಾರಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಅದರೊಂದಿಗೆ ವಿಶ್ವಾಸ ಸಂರಕ್ಷಣೆ ವಿಷಯವೂ ಪ್ರಚಾರದ ಅಂತಿಮ ಹಂತದಲ್ಲಿ ರಾಜಕೀಯ ಪಕ್ಷಗಳ ಕಾರ್ಯ ಸೂಚಿಯಲ್ಲಿ ಸೇರಿಕೊಂಡಿದೆ. ಇನ್ನೊಂದೆಡೆ ಶಬರಿಮಲೆ ವಿಷಯದಲ್ಲಿ ತಮಗೆ ಅನುಕೂಲವಾಗುವ ರೀತಿಯ ಯತ್ನದಲ್ಲಿ ಯುಡಿಎಫ್ ಕೂಡಾ ತೊಡಗಿದೆ. ಅದಕ್ಕಾಗಿ ಈ ವಿಷಯದಲ್ಲಿ ಯುಡಿಎಫ್ ಕೂಡಾ ಎಡರಂಗದ ವಿರುದ್ಧ ವ್ಯಾಪಕ ಪ್ರಚಾರದಲ್ಲಿ ನಿರತವಾಗಿದೆ.
   ಏ.21ರ ಸಂಜೆ 5 ಗಂಟೆಯ ಬಳಿಕ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಅಂತಿಮ ಹಂತದ ಪ್ರಚಾರ ನಡೆಸಲು ಕಾಸರಗೋಡಿನಲ್ಲಿ ಎನ್‍ಡಿಎ, ಎಡರಂಗ, ಐಕ್ಯರಂಗಕ್ಕೆ ಪ್ರತ್ಯೇಕ ಪ್ರತ್ಯೇಕ ಸ್ಥಳವನ್ನು ಪೆÇಲೀಸರು ಮಂಜೂರು ಮಾಡಿದ್ದಾರೆ.
    ಎಡರಂಗಕ್ಕೆ ನಗರದ ಹೊಸ ಬಸ್ ನಿಲ್ದಾಣ ಪರಿಸರ, ಯುಡಿಎಫ್‍ಗೆ ನಗರದ ಬಸ್ ನಿಲ್ದಾಣ ಪರಿಸರ, ಬಿಜೆಪಿಗೆ ಕರಂದಕ್ಕಾಡ್‍ನಲ್ಲಿ ಸೌಕರ್ಯ ಕಲ್ಪಿಸಿದೆ. ಈ ಮೂರು ಒಕ್ಕೂಟಗಳು ತಮಗೆ ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರವೇ ಅಂತಿಮ ಕ್ಷಣದ ಪ್ರಚಾರ ನಡೆಸಬೇಕು. ಇತರ ಒಕ್ಕೂಟಗಳಿಗೆ ಅನುಮತಿ ನೀಡಲಾದ ಸ್ಥಳಕ್ಕೆ ತೆರಳಿ ಪ್ರಚಾರ ನಡೆಸಬಾರದೆಂದು ಮುನ್ನೆಚ್ಚರಿಕೆ ನೀಡಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries