2019 ರ ಲೋಕಸಭೆ ಚುನಾವಣೆ ಸಂದರ್ಭ ಪ್ರತಿಯೊಬ್ಬ ಭಾರತೀಯ ಪ್ರಜೆ ಮತದಾನ ಮಾಡಬೇಕೆಂಬ ಸಂದೇಶ ಸಾರಲು ಉತ್ತಮ ಹಾಗೂ ಬಲಿಷ್ಟ ಭಾರತಕ್ಕೆ ತಮ್ಮ ಮತ ಸಾಕ್ಷಿ ಆಗಲಿ ಎಂಬ ಉದ್ದೇಶದಿಂದ ಕಾಸರಗೋಡು ಮುಳ್ಳೇರಿಯಾ ತಲೆಬೈಲು ನಿವಾಸಿ
ಮೈಕ್ರೋ ಆರ್ಟಿಸ್ಟ್ ವೆಂಕಟೇಶ್ ಆಚಾರ್ಯ ಇವರು ಬೆಂಕಿಕಡ್ಡಿಯ ಮದ್ದಿನ ಗಾತ್ರದಲ್ಲಿ ಭಾರತದ ಸಂವಿಧಾನ ಕಟ್ಟಡದ ಆಕೃತಿ ಮತ್ತು ತ್ರಿವರ್ಣ ಧ್ವಜ ಹಾಗೂ ವೋಟ್ ಫಾರ್ ಇಂಡಿಯಾ ಎಂದು ಇಂಗ್ಲೀಷ್ ಅಕ್ಷರದಲ್ಲಿ ಬರೆದು ಸೂಕ್ಷ್ಮ ರೀತಿಯಲ್ಲಿ ರಚಿಸಿ ಜಾಗೃತಿಯ ಮೂಲಕ ಗಮನ ಸೆಳೆದಿದ್ದಾರೆ.