ನೂಜಿಯಲ್ಲಿ ದೈವಂಕೆಟ್ಟು ಮಹೋತ್ಸವ -ಪೂರ್ವಭಾವೀ ಕೂವಂ ಅಳಕಲ್ ಕಾರ್ಯಕ್ರಮ
0
ಏಪ್ರಿಲ್ 01, 2019
ಬದಿಯಡ್ಕ: ಪಿಲಾಂಕಟ್ಟೆ ಸಮೀಪದ ನೂಜಿ ಶ್ರೀ ವಯನಾಟು ಕುಲವನ್ ತರವಾಡಿನಲ್ಲಿ ನಡೆಯಲಿರುವ ತೆಯ್ಯಂಕೆಟ್ಟು ಮಹೋತ್ಸವದ ಅಂಗವಾಗಿ ಕೂವಂ ಅಳಕಲ್ ಕಾರ್ಯಕ್ರಮ ಸೋಮವಾರ ನಡೆಯಿತು.
ಪೆÇಡಿಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಆಚಾರ ಸ್ಥಾನಿಕರು, ತೆಯ್ಯಂಕೆಟ್ಟು ಮಹೋತ್ಸವ ಸಮಿತಿ ಪದಾಧಿಕಾರಿಗಳು, ನೂಜಿ ತರವಾಡು ಸದಸ್ಯರು, ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನೂಜಿ ತರವಾಡಿನಲ್ಲಿ ಶ್ರೀ ವಯನಾಟ್ ಕುಲವನ್ ತೈಯ್ಯಂಕಟ್ಟು ಮಹೋತ್ಸವವು ಏ. 22 ರಿಂದ 25 ರ ವರೆಗೆ ಜರಗಲಿದೆ. ಏ.22 ರಂದು ಹಸಿರುವಾಣಿ ಹೊರೆ ಕಾಣಿಕೆ, ಉಗ್ರಾಣ ತುಂಬಿಸುವುದು, 23 ರಂದು ಮುಂಜಾನೆ 5 ರಿಂದ ಕೊರತ್ತಿ ದೈವ, ರಕ್ತ ಚಾಮುಂಡಿ ದೈವ, ವಿಷ್ಣುಮೂರ್ತಿ ದೈವ, ಪಡಿಞõÁರ್ ಚಾಮುಂಡಿ ದೈವ, ಗುಳಿಗ ದೈವ ನಡೆಯಲಿದೆ. 24 ರಂದು ಸಂಜೆ 5 ರಿಂದ ಕಾರ್ನವನ್ ದೈವದ ವೆಳ್ಳಾಟ, 7 ರಿಂದ ಕೋರಚ್ಚನ್ ದೈವ, 10 ಕ್ಕೆ ಕಂಡನಾರ್ ದೈವ, 3 ಗಂಟೆಗೆ ವಯನಾಟು ಕುಲವನ್ ದೈವದ ಆಗಮನ, ಚೂಟೊಪ್ಪಿಕಲ್, ಸಂಜೆ 5 ಕ್ಕೆ ವಿಷ್ಣುಮೂರ್ತಿ ದೈವ, ಭಂಡಾರ ನಿರ್ಗಮನ ಮೊದಲಾದ ಕಾರ್ಯಕ್ರಮಗಳು ಜರಗಲಿದೆ.