HEALTH TIPS

ಚುನಾವಣಾ ಜಾಗೃತಿ ನೀಡಲು ಪ್ರಸ್ತುತಗೊಳ್ಳಲಿವೆ ಬೀದಿನಾಟಕಗಳು

ಕಾಸರಗೋಡು: ಚುನಾವಣೆಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮದ ಮೂಲಕ ಚುನಾವಣೆ ವಿಭಾಗ ನಡೆಸುತ್ತಿರುವ ಚಟುವಟಿಕೆಗಳಲ್ಲಿ ಬೀದಿನಾಟಕಗಳೂ ತಮ್ಮದೇ ಕೊಡುಗೆ ನೀಡಲಿವೆ. "ನನ್ನ ಮತದಾನ ನನ್ನ ಹಕ್ಕು" ಎಂಬ ಸಂದೇಶದೊಂದಿಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ಸಹಕಾರದೊಂದಿಗೆ ರಂಗಶ್ರೀ ಸಂಘಟನೆಯ ವತಿಯಿಂದ ಈ ಬೀದಿ ನಾಟಕಗಳನ್ನು ನಡೆಸಲಾಗುವುದು. ರಂಗಶ್ರೀಯ 8 ಮಂದಿ ಕಲಾವಿದರು ಈ ನಾಟಕಗಳ ಶಾಶ್ವತ ಸದಸ್ಯರಾಗಿರುವರು. ಜಿಲ್ಲೆಯ ಕನ್ನಡ ವಲಯಗಳಲ್ಲಿ ನಾರಾಯಣ ಪೆರಡಾಲ(ನಾಪಿ ಪೆರಡಾಲ) ಅವರ ನೇತೃತ್ವದಲ್ಲಿ ಬೀದಿ ನಾಟಕಗಳು ಪ್ರದರ್ಶನಗೊಳ್ಳಲಿದೆ. ಏ.4ರಂದು ಕಾಸರಗೋಡು ಉದುಮಾ ವಿಧಾನಸಭೆ ಕ್ಷೇತ್ರಗಳಲ್ಲಿ, 5ರಂದು ಕಾಞÂಂಗಾಡ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳಲ್ಲಿ, 8 ರಂದು ಮಂಜೇಶ್ವರ ವಿಧಾನಸಭೆ ಕ್ಷೇತ್ರಗಳಲ್ಲೂ ಬೀದಿನಾಟಕಗಳು ಜರುಗಲಿವೆ. 15 ನಿಮಿಷದ ಅವಧಿಯ ಕಿರು ನಾಟಕ ಈ ವೇಳೆ ಪ್ರದರ್ಶನಗೊಳ್ಳಲಿದೆ. ಪ್ರತಿ ವಿದಾನಸಭೆ ಕ್ಷೇತ್ರದ ಮೂರು ಪ್ರಧಾನ ಕೇಂದ್ರಗಳಲ್ಲಿ ಈ ನಾಟಕ ಜರುಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries