ಪೆರ್ಲ: ಬೆಂಗಳೂರಿನ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯ ಮೊತ್ತಮೊದಲ ತಂಡದಲ್ಲಿ ಕೊಡಮಾಡುವ 2018-19ನೇ ಸಾಲಿನ ಡಾಕ್ಟರೇಟ್(ವಿದ್ಯಾ ವಾರಧಿ)ಗೆ ಪೆರ್ಲ ಸಮೀಪದ ಸಾಯ ಬಾಕಿಲಪದವು ನಿವಾಸಿಗಳಾದ ದಂಪತಿಗಳು ಸಲ್ಲಿಸಿದ ಪ್ರಬಂಧ ಅಂಗೀಕೃತಗೊಂಡು ಒಂದೇ ವಿವಿಯಲ್ಲಿ ದಂಪತಿಗಳು ಏಕಕಾಲದಲ್ಲಿ ಮೊತ್ತಮೊದಲ ಬಾರಿಗೆ ವಿದ್ಯಾವಾರಿಧಿ ಪದವಿಗೆ ಅರ್ಹರಾದ ದಾಖಲೆ ಸೃಷ್ಟಿಯಾಗಿದೆ.
ಬಾಕಿಲಪದವು ನಿವಾಸಿ ವೇದಮೂರ್ತಿ ಗಣಪತಿ ಭಟ್ ಶುಳುವಾಲಮೂಲೆ-ವಿದ್ಯಾ ಗಣಪತಿ ಭಟ್ ದಂಪತಿಗಳ ಪುತ್ರ ಕೇಶವ ಕಿರಣ ಅವರು ಮಂಡಿಸಿದ "ಉತ್ತಮನಂಬಿ ತಿರುಮಲರಾಯ ಪ್ರಣೀತಸ್ಯ ಲಕ್ಷ್ಮೀ ಕಾವ್ಯಸ್ಯ ಸಟಿಪ್ಪಣಂ ಸಂಪಾದನಮ್" ಮತ್ತು ಅವರ ಪತ್ನಿ ಗೌರಿ ಕೇಶವ ಕಿರಣ ಅವರ " ವಿದ್ಯಾ ಮಾಧವ ಪ್ರಣೀತಸ್ಯ ಕಿರಾತಾರ್ಜುನೀಯ ವ್ಯಾಖ್ಯಾನಸ್ಯ ದಶಮಾದಿ ಸಮಾಪ್ತಿ ಪರ್ಯಂತ ಸರ್ಗಾಣಾಂ ಸಟಿಪ್ಪಣಂ ಸಂಪಾದನಮ್" ಎಂಬ ಮಹಾ ಪ್ರಬಂಧಗಳಿಗೆ ಈ ಅಂಗೀಕಾರ ನೀಡಲಾಗಿದೆ. ಸಂಸ್ಕøತ ಪ್ರಾಧ್ಯಾಪಕ ಡಾ.ಲಕ್ಷ್ಮೀನಾರಾಯಣ ಭಟ್ ಅವರ ಸಹಕಾರದೊಂದಿಗೆ ಈ ಪ್ರಬಂಧಗಳನ್ನು ಮಂಡಿಸಲಾಗಿತ್ತು.