ಬದಿಯಡ್ಕ: ಸಮಾಜದ ಹಿತರಕ್ಷಣೆ ಯಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರಲ್ಲಿ ದಿ. ರವೀಂದ್ರ ಮಾಸ್ತರ್ ಅವರೂ ಒಬ್ಬರು. ತನ್ನ ನಿಸ್ವಾರ್ಥ ಸೇವೆ ಹಾಗೂ ಸಮಾಜದೆಡೆಗಿನ ಕಳಕಳಿ ಅವರ ಪ್ರತಿಯೊಂದು ಚಟುವಟಿಕೆಗಳಲ್ಲಿ ಎದ್ದು ಕಾಣುತ್ತಿತ್ತು. ಜೀವನದುದ್ದಕ್ಕೂ ಶಿಕ್ಷಕನಾಗಿ, ಉತ್ತಮ ಮಾರ್ಗದರ್ಶಕರಾಗಿ, ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ದುಡಿದ ಮಾಸ್ತರರ ಬದುಕು ನಮಗೆ ಆದರ್ಶ ಎಂದು ಬದಿಯಡ್ಕ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರು ಸಂತಾಪ ವ್ಯಕ್ತಪಡಿಸಿದರು.
ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಅಗಲಿದ ಎಂ.ಎ.ರವೀಂದ್ರ ಮಾಸ್ತರ್ ಮಾನ್ಯ ಅವರಿಗೆ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ರಾಜಕೀಯ, ಧಾರ್ಮಿಕ ಮುಂದಾಳು:
ಬದಿಯಡ್ಕ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಸಮಗ್ರತೆಯನ್ನು ಕಟ್ಟಲು ವಿದ್ಯಾಭ್ಯಾಸದ ಅಗತ್ಯವಿದೆ ಎಂದು ಮನಗಂಡು ಅಕ್ಷರಜ್ಯೋತಿ ಯೋಜನೆಗೆ ರೂಪು ನೀಡಿದರು. ಇಂದೂ ಕೇರಳ ಸರಕಾರದ ಅಕ್ಷರಜ್ಯೋತಿ ಯೋಜನೆಯು ಮಾಸ್ತರರು ಸಿದ್ಧಪಡಿಸಿದ ರೀತಿಯಲ್ಲೇ ಮುಂದುವರಿಯುತ್ತಿದೆ ಎಂದು ಅವರು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಗೋವಿಂದನ್ ನಂಬೂದಿರಿ ಅಧ್ಯಕ್ಷತೆವಹಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ನೀಲಕಂಠನ್ ನಾಯರ್, ಐಯುಎಮ್‍ಎಲ್‍ನ ಅನ್ವರ್ ಓಝೋನ್, ಬಿಜೆಪಿಯ ಶಂಕರ.ಡಿ, ಸಿಪಿಎಂನ ರಾಧಾಕೃಷ್ಣ ರೈ ಕಾರ್ಮಾರ್, ಜೆಡಿಯುವಿನ ಎಂ.ಎಂ.ಜನಾರ್ಧನ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್., ಐಎನ್‍ಸಿಯ ಖಾದರ್ ಮಾನ್ಯ, ಉದ್ಯಮಿ ಅಬ್ದುಲ್ ಖಾದರ್ ಹಾಜಿ, ಹಿರಿಯರಾದ ಎಸ್.ಗೋಪಾಲ, ಮಾನ್ಯ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಮಧುಚಂದ್ರ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಮಾನ್ಯ, ಯಕ್ಷಮಿತ್ರರು ಮಾನ್ಯ ಇದರ ಅಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ, ನಿವೃತ್ತ ಗ್ರಾಮಾಧಿಕಾರಿ ನಾರಾಯಣ ಮಣಿಯಾಣಿ, ನಿವೃತ್ತ ಮುಖ್ಯೋಪಾಧ್ಯಾಯ ನವೀನ್ ಮಾಸ್ತರ್, ಕಾರ್ಮಾರು ದೇವಸ್ಥಾನದ ಆಡಳಿತ ಟ್ರಸ್ಟ್‍ನ ನರಸಿಂಹ ಭಟ್, ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ವಿಷ್ಣುಮೂರ್ತಿ ಸೇವಾಸಮಿತಿ ಕಾರ್ಮಾರ್ ಕಾರ್ಯದರ್ಶಿ ಅಶೋಕ್ ಕುಮಾರ್ ಎಂ.ಎನ್, ಸಾಮ್ರಾಟ್ ಸ್ಪೋಟ್ರ್ಸ್ ಕ್ಲಬ್ ಮಾನ್ಯ, ಪ್ರಿಯದರ್ಶಿನಿ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್ ಮೇಗಿನಡ್ಕ, ಫ್ರೆಂಡ್ಸ್ ಮಾನ್ಯ, ಮಂಜುಶ್ರೀ ಯುವಕ ವೃಂದ ಕಾರ್ಮಾರ್, ಭಜರಂಗಬಲಿ ಕಾರ್ಮಾರ್, ಮುಕಾಂಬಿಕಾ ಆಟ್ರ್ಸ್ ಆಂಡ್ ನ್ಪೋಟ್ರ್ಸ್ ಕ್ಲಬ್ ಮುಂಡೋಡು, ಯಕ್ಷಮಿತ್ರರು ಮಾನ್ಯ, ಶಕ್ತಿ ಫ್ರೆಂಡ್ಸ್ ಶಕ್ತಿನಗರ, ಬ್ರದರ್ಸ್ ಕ್ಲಬ್ ಮಾನ್ಯ, ವಯನಾಟು ಕುಲವನ್ ಸೇವಾ ಸಮಿತಿ ಮಾನ್ಯ, ರಕ್ತೇಶ್ವರಿ ಮತ್ತು ಪರಿವಾರ ಸೇವಾ ಸಮಿತಿ ದೇವರಕೆರೆ ಮೇಗಿನಡ್ಕ ಇದರ ಪದಾಧಿಕಾರಿಗಳು ಶ್ರದ್ಧಾಂಜಲಿ ಸಮರ್ಪಿಸಿದರು. ಬದಿಯಡ್ಕ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಸ್ವಾಗತಿಸಿ, ಮಂಜುನಾಥ.ಡಿ ಮಾನ್ಯ ವಂದಿಸಿದರು.