ಶಿರಿಯ ಶಾಲೆಯಲ್ಲಿ ವಾರ್ಷಿಕೋತ್ಸವ-ಬೀಳ್ಕೊಡುಗೆ
0
ಏಪ್ರಿಲ್ 04, 2019
ಕುಂಬಳೆ: ಶಿರಿಯದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಾರ್ಷಿಕೋತ್ಸವ ಹಾಗೂ ನಿವೃತ್ತರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಕೋಟ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ನಿವೃತ್ತ ಮುಖ್ಯೋಪಾಧ್ಯಾಯ ಶಂಕರ ರೈ ಮಾಸ್ತರ್ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಬೆಂಬ ನೀಡುವ ವಾರ್ಷಿಕೋತ್ಸವಗಳು ಶಾಲೆಯ ಹಿರಿಮೆಯ ಸಂಕೇತ ಎಂದು ತಿಳಿಸಿದರು. ಸುದೀರ್ಘ ಕಾಲ ಶಾಲೆಯ ಶಿಕ್ಷಣ ರಂಗದಲ್ಲಿ ಸೇವೆಗೈದವರನ್ನು ನಿವೃತ್ತಿಯ ಅಂಚಿನಲ್ಲಿ ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದ್ದು, ಪ್ರೇರಣದಾಯಿ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಯ್ಯದ್ ಎಂ.ಕೆ.ಕೆ.ತಂಙಳ್ ಮುಟ್ಟಂ ಅವರ ಅವರ ಉಪಸ್ಥಿತಿಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯ ನಾಸರ್ ಮಾಸ್ತರ್ ಮುಟ್ಟಂ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ಶಿಕ್ಷಣ ಮತ್ತು ಶಿಕ್ಷಣೇತರ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಅಶ್ರಫ್ ಮುಟ್ಟಂ, ಸಯ್ಯದ್ ಸಿದ್ದೀಕ್ ತಂಙಳ್ ಉದ್ಯಾವರ, ಅಬೂಬಕರ್ ಬತ್ತೇರಿ, ಹರೀಶ್ ಶೆಟ್ಟಿ, ಮೊಹಮ್ಮದ್ ವಳಯಂ, ಮನ್ಸೂರ್ ಶಿರಿಯ, ಅಬ್ಬು ಶಿರಿಯ, ಅಬೂಬಕರ್ ಕೆ.ಜಿ, ಇಸ್ಮಾಯಿಲ್ ಬಿ.ಎಸ್, ಸಿದ್ದೀಕ್ ಒ.ಎಂ, ಖಲೀಲ್ ಶಿರಿಯ, ಆರೀಫ್ ಮುಟ್ಟಂ ಕೃಷ್ಣ ಅಡ್ಕ, ರಾಜೇಶ್ ಶೆಟ್ಟಿ, ಸಾಯಿಭದ್ರಾ ರೈ ಶಿರಿಯ, ಅನುರಾಧಾ ಶಿರಿಯ, ರಮೇಶ್ ಕಾರಂತ, ಸುಕುಮಾರ ಕೊಪ್ಪಳ, ಕೃಷ್ಣ ಶಿರಿಯಾ, ದಯಾನಂದ ವಾನಂದೆ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಸಮಾರಂಭದಲ್ಲಿ ನಿವೃತ್ತರಾಗುತ್ತಿರುವ ಮುಖ್ಯ ಶಿಕ್ಷಕಿ ಗೀತಾ ಎಚ್ ಹಾಗೂ ಶಿಕ್ಷಕ ಕೃಷ್ಣನ್ ಟಿ ಅವರನ್ನು ಅಭಿನಂದಿಸಿ, ಸನ್ಮಾನಿಸಿ ಬೀಳ್ಕೊಡಲಾಯಿತು. ಎ.ಬಿ.ಕುಟ್ಟಿಯಾನಂ ಅವರು ಮಾತನಾಡಿದರು. ಅಬ್ದುಲ್ ಖಾದರ್ ಹಾಜಿ, ಶಶಿಧರ ಶೆಟ್ಟಿ, ಡಿ.ಎಂ.ಬಶೀರ್ ಶುಭಹಾರೈಸಿದರು. ಶಾಲಾ ಪ್ರಾಂಶುಪಾಲೆ ಮಾಲಿನಿ ವಿ.ಸ್ವಾಗತಿಸಿ, ಹಿರಿಯ ಶಿಕ್ಷಕಿ ಉಷಾ ಕೆ.ವಂದಿಸಿದರು.