ಕುಂಟಾರು ಶ್ರೀಕ್ಷೇತ್ರದ ಜಾತ್ರೋತ್ಸವ ಸಂಪನ್ನ
0
ಏಪ್ರಿಲ್ 01, 2019
ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಭಾನುವಾರ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪುತ್ತೂರು ಜಗದೀಶ್ ಆಚಾರ್ಯ ಅವರ ಕಲಾ ಸಿಂಧೂ ಬಳಗದವರಿಂದ ಸಂಗೀತ ಗಾನ ವೈಭವ, ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇದರ ಮಕ್ಕಳಿಂದ ಯಕ್ಷಗಾನ ಬಯಲಾಟ ಮೀನಾಕ್ಷಿ ಕಲ್ಯಾಣ-ಸುದರ್ಶನ ವಿಜಯ, ಮುಖ್ಯಪ್ರಾಣ ಭಜನಾ ಸಂಘ ಆದೂರು ಗ್ರಾಮ ಇವರಿಂದ ಭಜನಾಮೃತ, ಹರಿಪ್ರಿಯ ಮಹಿಳಾ ಭಜನಾ ಸಂಘ ಮುಳ್ಳೇರಿಯ ಇವರಿಂದ ಭಜನೆ, ವಿಧುಷಿ ವಿದ್ಯಾಲಕ್ಷ್ಮಿ ನಾಟ್ಯ ವಿದ್ಯಾನಿಲಯ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ, ಕುಂಟಾರು ಶ್ರೀ ಶಾರದಾ ಸಂಗೀತ ಕಲಾ ಶಾಲೆ ಇದರ ದಾಮೋದರ ಮಾಸ್ಟರ್ ಮತ್ತು ಶಿಷ್ಯವೃಂದದವರಿಂದ ಭಕ್ತಿ ಸಂಗೀತ, ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ಕೊಲ್ಲಂಗಾನ ಇವರಿಂದ ಯಕ್ಷಗಾನ ಬಯಲಾಟ ಮಯೂರೇಕ ವಿಜಯ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಶ್ರೀಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಆಶೀರ್ವಚನ ನೀಡಿದರು.ಸಹನಾ ಕುಂದರ್ ಕಾರ್ಕಳ ಇವರಿಂದ ಧಾರ್ಮಿಕ ಭಾಷಣ, ಉಣ್ಣಿಕೃಷ್ಣನ್ ಕುಂಟಾರು ಮತ್ತು ವಿಶ್ವನಾಥ ಭಟ್ ಬೇಂದ್ರ್ರೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚಂದ್ರಿಕಾ ಮಂಜುನಾಥ ಶೆಣೈ ಮುಳ್ಳೇರಿಯ ಮತ್ತು ಝೀ ಕನ್ನಡ ಡ್ರಾಮಾ ಜೂನಿಯರ್ ಖ್ಯಾತಿಯ ಅನೂಪ್ ರಮಣ ಮುಳ್ಳೇರಿಯ, ಮಹಾಲಿಂಗ ನಾಯ್ಕ ಮತ್ತು ಕಮಲ ಇವರಿಗೆ ಸನ್ಮಾನಿಸಲಾಯಿತು. ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ, ಕುಂಟಾರು ಎಯುಪಿ ಶಾಲೆಯ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗೆ ಅಭಿನಂದನೆ ನಡೆಯಿತು.
ಶ್ರೀದೇವರ ಭೂತಬಲಿ ಉತ್ಸವ, ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ರಂಗಪೂಜೆ, ಶ್ರೀ ದೇವರ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಭಾನುವಾರ ಕುಂಟಾರು ಚಾಮುಂಡಿ ದೈವದ ನೇಮ, ಪಡೈ ಚಾಮುಂಡಿ ದೈವದ ನೇಮ ನಡೆಯಿತು.