HEALTH TIPS

ಚುನಾವಣೆ ಪ್ರಚಾರ: ಧ್ವಜ, ಬ್ಯಾನರ್ ಬಳಸುವಲ್ಲಿ ನಿಯಮಾವಳಿ

ಕಾಸರಗೋಡು: ಲೋಕಸಭೆ ಚುನಾವಣೆ ಪ್ರಚಾರ ಸಂಬಂಧ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಧ್ವಜ, ಬ್ಯಾನರ್ ಇತ್ಯಾದಿ ಬಳಸುವನಿಟ್ಟಿನಲ್ಲಿ ಕೇಂದ್ರ ಚುನಾವಣೆ ಆಯೋಗದ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. ನಿಯಮಾವಳಿಗಳು ಇಂತಿವೆ: 1. ಚುನಾವಣೆ ಸಂಬಮಧ ಸ್ಥಾಪಿಸುವ ಧ್ವಜ, ತೋರಣ, ಬ್ಯಾನರ್ ಇತ್ಯಾದಿ ಪ್ರಚಾರ ಸಾಮಾಗ್ರಿಗಳು ಇತರರಿಗೆ ತೊಂದರೆಯುಂಟುಮಾಡುವಂತಿರಬಾರದು. 2. ಜಿಲ್ಲಾ ಚುನಾವಣೆ ಅಧಿಕರಿ/ಹಾಯಕ ಚುನಾವಣೆ ಅಧಿಕಾರಿ ಪಾಸ್ ಮಂಜೂರು ಮಾಡಿರುವ ವಾಹನಗಳಿಗೆ ಮಾತ್ರ ಚುನಾವಣೆ ಪ್ರಚಾರ ನಡೆಸಲು ಅನುಮತಿಯಿರುವುದು. 3. ಸ್ಪಾಟ್ ಲೈಟ್ಗಳು, ಫೋಕಸ್/ಸರ್ಚ್ ಲೈಟ್ ಗಳು, ಸೈರನ್ ಗಳು ಇತ್ಯಾದಿ ಪ್ರಚಾರ ವಾಹನಗಳಲ್ಲಿ ಇರಿಸುವುದು, ಬಳಸುವುದು ಕೂಡದು. 4. ಚುನಾವಣೆ ಪ್ರಚಾರಕ್ಕೆ ಧ್ವನಿವರ್ಧಕಬಳಕೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆ ವರೆಗೆ ಮಾತ್ರ ಬಳಸಬೇಕು. 5. ಕರ್ತವ್ಯ ಹೊಂದಿರುವ ಸಿಬ್ಬಂದಿಯ ಅರಿವಿಗೆ ಬಾರದೆ, ಒಪ್ಪಿಗೆಪಡೆಯದೆ ಧ್ವಜ ಸ್ಥಾಪನೆ, ಧ್ವನಿವರ್ಧಕ ಬಳಕೆ ಸಲ್ಲದು. ಇದಕ್ಕಾಗಿ ಈ ಕೆಳಗೆ ತಿಳಿಸಲಾದ ನಿಬಂಧನೆಗಳಿಗೆ ಅನ್ವಯವಾಗಿ ಬಲಸಬೇಕು. ಚುನಾವಣೆ ಪ್ರಚಾರಕ್ಕೆ ತ್ರಿಚಕ್ರ/ನಾಲ್ಕುಚಕ್ರ/ಇ-ರಿಕ್ಷಾ/ದ್ವಿಚಕ್ರ ವಾಹನಗಳಲ್ಲಿ ಗರಿಷ್ಠ 181/2 ಅಡಿ ಅಗಲವಿರುವ ಒಂದು ಧ್ವಜಮಾತ್ರ ಬಳಸಬಹುದಾಗಿದೆ. ಇಂಥಾ ವಾಹನಗಳಿಗೆ ನಿಗದಿತ ಅಗಲದ ಒಂದು ಯಾ ಎರಡು ಸ್ಪೀಕರ್ ಮೋಟಾರು ವಾಹನ ಇಲಾಖೆ ತಿಳಿಸುವ ರೀತಿ ಸ್ಥಾಪಿಸಬೇಕು. ಬ್ಯಾನರ್ ಗಳು ಯಾವುದೇ ಕಾರಣಕ್ಕೂ ವಾಹನಗಳಲ್ಲಿ ಬಳಸಕೂಡದು. 6.ಇತರ ಪಕ್ಷಗಳೊಂದಿಗೆ ಸಖ್ಯಹೊಂದಿರುವ/ ಸೀಟು ಕುರಿತು ಮಾತುಕತೆ ನಡೆಸಿ ಸ್ಪರ್ಧೆಯಲ್ಲಿರುವ ಪಕ್ಷಗಳಭ್ಯರ್ಥಿಗಳ ಪ್ರಚಾರ ವಾಹನಗಳಲ್ಲಿ ಸಖ್ಯದಲ್ಲಿರುವ ಪಕ್ಷಗಳ ಒಂದೇ ಧ್ವಜ ಇರಿಸಬಹುದಾಗಿದೆ. 7.ಧ್ವಜ ಸ್ತಾಪಿಸಲು ಬಳಸುವ ದಂಡಕ್ಕೆ 3 ಅಡಿಗಿಂತ ಅಧಿಕ ಉದ್ದವಿರಬಾರದು. 8.ರೋಡ್ ಶೋದಲ್ಲಿ ಭಾಗವಹಿಸುವ ವೇಳೆ ಕೈಗಳಲ್ಲಿ ಹಿಡಿಯುವ ಧ್ವಜ 6*4 ಅಡಿಗಿಂತ ದೊಡ್ಡದಾಗಿರಬಾರದು. 9.ಅಬ್ಯರ್ಥಿಯ ಚುನಾವಣೆ ಪ್ರಚಾರ ಸಂಬಂಧ ಸಾಲಾಗಿ ಸಂಚರಿಸುವ ವಾಹನಗಳ ಸಂಖ್ಯೆ 10ಕ್ಕಿಂತ ಹೆಚ್ಚಾಗಿರಬಾರದು. ಹತ್ತಕ್ಕಿಂತ ಅಧಿಕ ವಾಹನಗಳಿದ್ದಲ್ಲಿ ಹತ್ತು ವಾಹನಗಳ ನಡುವೆ ಇತರ ವಾಹನಗಳಿಗೆ ತೆರಳಲು 100 ಮೀಟರ್ ಎಡೆದರಾರಿಗಳನ್ನು ಒದಗಿಸುವ ಸ್ವಯಂ ಕ್ರಮಗಳನ್ನು ಪಾಲಿಸಬೇಕು. ಪೊಲೀಸ್ ನಿರೀಕ್ಷಕರಿಗೆ ದೂರು ಸಲ್ಲಿಸಬಹುದು ಜಿಲ್ಲೆಯ ಚುನಾವಣೆ ಪೊಲೀಸ್ ನಿರೀಕ್ಷಕ ಓಂಪ್ರಕಾಶ್ ತ್ರಿಪಾಠಿ ಅವರಿಗೆ ಸಾರ್ವಜನಿಕರು ದೂರು ಸಲ್ಲಿಸಬಹುದು. ಅವರು ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಪೊಲೀಸ್ ವಲಯದ ಹೊಣೆ ಹೊತ್ತಿದ್ದಾರೆ. ದೂರವಾಣಿ ಸಂಖ್ಯೆ: 8330896690, 6238877524(ಕಾಸರಗೋಡು), 9188610278, 7999543176(ಕಣ್ಣೂರು), ಲೈಸನ್ ಆಫೀಸರ್: 9447237617.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries