ಕಾಸರಗೋಡು: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯ ಸಿದ್ಧತೆಗಳು ಪೂರ್ಣಗೊಂಡಿವೆ. ಮತಗಟ್ಟೆಗಳಿಗಿರುವ ಮತಯಂತ್ರಗಳ ಸಹಿತ ಮತದಾನ ಸಂಬಂಧ ಸಾಮಾಗ್ರಿಗಳು ವಿತರಣೆಗೆ ಸಿದ್ಧವಾಗಿವೆ.
ಮತಗಟ್ಟೆಗಿರುವ ಸಾಮಾಗ್ರಿಗಳು, ಕಿಟ್ ಗಳಲ್ಲಿ ಮತ್ತು ಪೆಟ್ಟಿಗೆಗಳಲ್ಲಿ ವಿತರಣೆಗೆ ಸಿದ್ಧವಾಗಿವೆ. ಇಂದು(ಏ.22) ಬೆಳಗ್ಗೆ 8 ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜು, ಪಡನ್ನಕ್ಕಾಡ್ ನೆಹರೂ ಕಲಾ ವಿಜ್ಞಾನ ಕಾಲೇಜುಗಳಲ್ಲಿ ಸಾಮಾಗ್ರಿಗಳ ವಿತರಣೆ ನಡೆಯಲಿದೆ. ಬೆಳಗ್ಗೆ 8 ರಿಂದ ಕಾಸರಗೋಡು ಸರಕಾರಿ ಕಾಲೃಏಜಿಗೆ ತಲಪುವ ಮತಗಟ್ಟೆ ಕರ್ತವ್ಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು, ನೆಹರೂ ಕಾಲೇಜಿಗೆ ತಲಪುವ ಸಿಬ್ಬಂದಿಗೆ ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದು ರಹಮಾನ್ ಅವರು, ಕಲ್ಯಾಶೇರಿ, ಪಯ್ಯನ್ನೂರು ಕ್ಷೇತ್ರಗಳಿಗೆ ತಲಪುವ ಸಿಬ್ಬಂದಿಗೆ ಹೆಚ್ಚುವರಿ ದಂಡನಾಧಿಕಾರಿ ಪಿ.ಬಿಜು ಅವರು ಸ್ವಾಗತಿಸಲಿದ್ದಾರೆ. ವಿತರಣೆ ಕೇಂದ್ರಗಳಲ್ಲಿ ಪ್ರತ್ಯೇಕ ಕೌಂಟರ್ ಗಳ ಮೂಲಕ ಪೋಲಿಂಗ್ ಮೆಟೀರಿಯಲ್ ಗಳು ವಿತರಣೆಗೊಳ್ಳಲಿವೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನೂ ನೇಮಿಸಲಾಗಿದೆ.
11 ಗಂಟೆಗೆ ಮತಗಟ್ಟೆ ಕರ್ತವ್ಯ ಸಿಬ್ಬಂದಿರನ್ನು ವಾಹನಗಳ ಮೂಲಕ ಆಯಾ ವಿಧಾನಸಭೆ ಕ್ಷೇತ್ರಗಳ ಮತಗಟ್ಟೆಗಳಿಗೆ ಕರೆದೊಯ್ಯಲಾಗುವುದು. ಮತಗಟ್ಟೆಘಲನ್ನು ಸೆಕ್ಟರ್ ರೂಪದಲ್ಲಿ ವಿಭಾಗಿಸಲಾಗಿದ್ದು, ಅವುಗಳ ಮೇಲ್ನೋಟ,
ಚುನಾವಣೆ ನಿಯಮಗಳು ಮತ್ತು ಅವುಗಳ ಪರಿಪಾಲನೆ ಖಚಿತಪಡಿಸಲು ಸೆಕ್ಟರ್ ಮೆಜಿಸ್ಟ್ರೇಟರ್ ಗಳಿಗೆ ಹೊಣೆ ನೀಡಲಾಗಿದೆ. ಮತಗಟ್ಟೆ ಕರ್ತವ್ಯ ಸಿಬ್ಬಂದಿ ಮತಗಟ್ಟೆಗಳಿಗೆ ತಲಪಿ ಸಿದ್ಧತೆ ಖಚಿತಪಡಿಸಲಿದ್ದಾರೆ. ಮತಗಟ್ಟೆಗಳಲ್ಲಿ ಮತದಾನ ಸುಗಮಗೊಳಿಸುವ ನಿಟ್ಟಿನಲ್ಲಿ ಸಿಬ್ಬಂದಿ ಸಿದ್ಧತೆ ನಡೆಸುವರು. ನಂತರ ಮತದಾನ ಏಜೆಂಟರಿಗೆ ಪಾಸ್ ಗಳನ್ನು ವಿತರಿಸಲಾಗುವುದು. ಇದರೊಂದಿಗೆ ಮೋಕ್ ಪೋಲ್ ಆರಂಭಿಸುವ ಸಮಯವನ್ನು ಏಜೆಂಟರಿಗೆ ತಿಳಿಸಲಾಗುವುದು. 71 ಮೈಕ್ರೋ ಒಬ್ಸರ್ ವರ್ ಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನೇಮಿಸಲಾಗಿದೆ. ಮತಗಟ್ಟೆ ಕರ್ತವ್ಯ ಸಿಬ್ಬಂದಿಗೆ ಆಹಾರ ಪೂರೈಕೆ ಹೊಣೆ ಜಿಲ್ಲಾ ಕುಟುಂಬಶ್ರೀ ಮಿಷನ್ ವಹಿಸಿಕೊಂಡಿದೆ.
ಚುನಾವಣೆಯ ನಂತರ ಮತಗಟ್ಟೆ ಸಿಬ್ಬಂದಿ ಸಾಮಾಗ್ರಿಗಳ ಸಹಿತ ಆಯಾ ಕೇಂದ್ರಗಳಿಗೆ ತೆರಳಿ ಸಾಮಾಗ್ರಿಗಳನ್ನು ತಲಪಿಸಬೇಕು. ಇದಕ್ಕಾಗಿ 15 ಕೌಂಟರ್ ಗಳು ಇರುವುವು. ಒಂದು ಕೌಂಟರ್ ನಲ್ಲಿ ಸೂಪರ್ ವೈಸರ್, 2 ಸಹಾಯಕರು ಇರುವರು. ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಎ.ಆರ್.ಒ.ಗಳ ವ್ಯಾಪ್ತಿಯಲ್ಲಿಕೌಂಟರ್ ಚಟುವಟಿಕೆ ನಡೆಸಲಿವೆ. ಒಂದು ಕೌಂಟರ್ ವ್ಯಾಪ್ತಿಯಲ್ಲಿ 12-13 ಮತಗಟ್ಟೆಗಳು ಇರುವುವು. ಆಯಾ ಕೌಂಟರ್ ನ ಮೇಲೆ ಆಯಾ ಮತಗಟ್ಟೆಗಳ ನಂಬ್ರ ಪ್ರಕಟಿಸಲಾಗುವುದು. ಕೌಂಟರ್ ಗಳಲ್ಲಿ ಸಾಮಾಗ್ರಿ ಸಂಗ್ರಹಿಸಿದ ನಂತರ , ವಿವಿಪಾಟ್ ಸಹಿತ ಮತಯಂತ್ರಗಳನ್ನು ಅಂದೇ ನೆಹರೂ ಕಾಲೇಜಿನಲ್ಲಿ ಸಜ್ಜುಗೊಳಿಸಿದ ಸ್ಟ್ರಾಂಗ್ ರೂಂಗೆ ತಲಪಿಸಿ ಸೀಲ್ ನಡೆಸಿ , ಕೀಲಿಕೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು.
ಮತಗಟ್ಟೆಗಳಲ್ಲಿ ಈ ಬಾರಿ ಮುದ್ರಿತ ಭಿತ್ತಿಪತ್ರಗಳು:
ಚುನಾವಣೆ ದಿನ ಪ್ರತಿ ಮತಗಟ್ಟೆಯಲ್ಲಿ ಚುನಾವಣೆ ಆಯೋಗದ 7 ಭಿತ್ತಿಪತ್ರಗಳನ್ನು ಲಗತ್ತಿಸಲಾಗುವುದು. ಈ ಹಿಂದಿನ ಕ್ರಮಗಳಿಗಿಂತ ಭಿನ್ನವಾಗಿ ಚುನಾವಣೆ ಪ್ರಕ್ರಿಯೆ ಸುಗಮಗೊಳಿಸುವ ನಿಟ್ಟಿನಲ್ಲಿ ಈ ಭಿತ್ತಿಪತ್ರಗಳನ್ನು ಆಯೋಗ ಪ್ರಕಟಿಸಿದೆ. ಮುದ್ರಿತ ಭಿತ್ತಿಪತ್ರಗಳು ಈ ಬಾರಿಯ ವಿಶೇಷತೆಯಾಗಿವೆ. ಭಿತ್ತಿಪತ್ರಗಳಲ್ಲಿ ಮತಗಟ್ಟೆಯಲ್ಲಿ ಮತದಾರ ವ್ಯವಹರಿಸಬೇಕಾದ ರೀತಿಯನನು ಚಿತ್ರಗಳ ಮೂಲಕ ಅತ್ಯಂತ ಸರಳ ರೂಪದಲ್ಲಿ ಪ್ರಕಟಿಸಲಾಗಿದೆ. ಮೋಕ್ ಪೋಲಿಂಗ್ ವೇಳೆ ಗಮನಿಸಬೇಕಾದ ವಿಚಾರಗಳು, ಮತದಾನ ಯಾವ ರೀತಿ ನಡೆಸಬೇಕು, ವಿವಿಪಾಟ್ ನ ಚಟುವಟಿಕೆಗಳು, ಆಯಾ ಮತಗಟ್ಟೆಗಳ ಕುರಿತಾದ ಮೂಲಭೂತ ಮಾಹಿತಿಗಳು, ಭಾವಿತ್ರ ಸಹಿತ ಅಭ್ಯರ್ಥಿಗಳ ಪಟ್ಟಿ, ಮತದಾನಕ್ಕೆ ಗುರುತು ಚೀಟಿ ರೂಪದಲ್ಲಿ ಬಳಸಬಹುದಾದ ದಾಖಲೆಗಳು ಇತ್ಯಾದಿ ವಿಚಾರಗಳನ್ನು ಈ ಭಿತ್ತಿಪತ್ರಗಳಲ್ಲಿ ಪ್ರಕಿಸಲಾಗಿದೆ. ಮತಗಟ್ಟೆಗೆ ರವಾನಿಸುವ ಸಾಮಾಗ್ರಿಗಳ ಜೊತೆಯಲ್ಲಿ ಈ ಭಿತ್ತಿಪತ್ರಗಳೂ ಹಸ್ತಾಂತರಗೊಂಡಿವೆ.
ಇಂದು ರಜೆ
ಲೋಕಸಭೆ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ಮತದಾನ ಸಾಮಾಗ್ರಿಗಳ ವಿತರಣೆ ಕೇಂದ್ರಗಳಿಗೆ ಮತ್ತು ಮತಗಟ್ಟೆಗಳಾಗಿರುವ ಸಂಸ್ಥೆಗಳಿಗೆ ಇಂದು(ಏ.22) ರಜೆ ಸಾರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.