ಕಾಸರಗೋಡು: ಕೋಟೆ ಕ್ಷತ್ರಿಯಾಸ್ ಯುವ ಸೇನೆ ಕಾಸರಗೋಡು ಇದರ ಆಶ್ರಯದಲ್ಲಿ ಅಶೋಕನಗರ ಮೈದಾನದಲ್ಲಿ `ಕೋಟೆಯಾರ್ ಪ್ರೀಮಿಯರ್ ಲೀಗ್-2019' ಕ್ರಿಕೆಟ್ ಪಂದ್ಯ ಭಾನುವಾರ ವರ್ಣರಂಜಿತವಾಗಿ ನಡೆಯಿತು.
ಪ್ರೀಮಿಯರ್ ಲೀಗ್ -2019 ಕ್ರಿಕೆಟ್ ಪಂದ್ಯವನ್ನು ಬಿ.ಪಿ.ವೆಂಕಟ್ರಮಣ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಯುವ ಜನರಲ್ಲಿ ಸುಪ್ತವಾಗಿರುವ ಕ್ರೀಡಾ ಪ್ರತಿಭೆಯ ಅನಾವರಣಗೊಳಿಸಲು ಈ ಕೋಟೆಯಾರ್ ಪ್ರೀಮಿಯರ್ ಲೀಗ್ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈ ಮೂಲಕ ನಮ್ಮ ಸಮಾಜದ ಯುವಕರು ಇನ್ನಷ್ಟು ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಸಕ್ರಿಯವಾಗಬೇಕೆಂದು ಅವರು ಆಶಯ ವ್ಯಕ್ತಪಡಿಸಿದರು. ಕ್ರೀಡೆಯಿಂದ ಸಮಾಜ ಸುಧಾರಣೆ, ಆರೋಗ್ಯದಾಯಕ ಬದುಕಿಗೆ ನೆರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣಪತಿ ಕೋಟೆಕಣಿ ಅವರು ಸಮಾಜ ಸೇವೆಯ ಜೊತೆಗೆ ಕ್ರೀಡೆಯಲ್ಲೂ ಯುವ ಜನರು ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕೋಟೆಯಾರ್ ಪ್ರೀಮಿಯರ್ ಲೀಗ್ ಮಾದರಿಯಾಗಲಿ ಎಂದು ಹಾರೈಸಿದರು. ಕೋಟೆಯಾರ್ ಪ್ರೀಮಿಯರ್ ಲೀಗ್ ಹೊಸ ಇತಿಹಾಸ ದಾಖಲಿಸಿದೆ ಎಂದು ಅಭಿಪ್ರಾಯಪಟ್ಟ ಕಿರಣ್ ಪ್ರಸಾದ್ ಅವರು ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಗಳ ಜೊತೆಗೆ ಕಾರ್ಯಕ್ರಮ ವೈವಿಧ್ಯತೆಯನ್ನು ಹಮ್ಮಿಕೊಳ್ಳಬೇಕೆಂದರು. ಕೋಟೆ ಕ್ಷತ್ರಿಯಾಸ್ ಯುವ ಸೇನೆ ಆಯೋಜಿಸುವ ಎಲ್ಲ ಸಮಾಜ ಸುಧಾರಣೆ ಕಾರ್ಯಕ್ರಮಗಳಿಗೆ ಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು. ವೇದಿಕೆಯಲ್ಲಿ ಸೀತಾರಾಮ, ದಿವಾಕರ ಮೊದಲಾದವರು ಉಪಸ್ಥಿತರಿದ್ದರು. ವರಪ್ರಸಾದ್ ಕೋಟೆಕಣಿ ಸ್ವಾಗತಿಸಿದರು.