ಕುಂಬಳೆ: ಆರಿಕ್ಕಾಡಿ ಹನುಮಾನ್‍ನಗರದ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳೂರಿನ ಜೆಪ್ಪು ಶ್ರೀ ರಾಮಕ್ಷತ್ರಿಯ ಮಹಿಳಾ ಯಕ್ಷವೃಂದದವರಿಂದ `ಕದಂಬ ಕೌಶಿಕೆ' ಪ್ರಸಂಗದ ಯಕ್ಷಗಾನ ತಾಳಮದ್ದಳೆ ಶುಕ್ರವಾರ ಜರಗಿತು.
ಹಾಡುಗಾರಿಕೆಯಲ್ಲಿ ಯೋಗೀಶ್ ಕುಮಾರ್ ಜೆಪ್ಪು ಮಂಗಳೂರು, ಚೆಂಡೆಯಲ್ಲಿ ಮಧುಸೂದನ ಅಲೆವೂರಾಯ ವರ್ಕಾಡಿ, ಮೃದಂಗದಲ್ಲಿ ಮಾಧವ ನಾವಡ ವರ್ಕಾಡಿ ಸಹಕರಿಸಿದರು. ಬಸವ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕøತ ರವಿ ಅಲೆವೂರಾಯ ವರ್ಕಾಡಿ ಅವರ ಮಾರ್ಗದರ್ಶನದಲ್ಲಿ ತಾಳಮದ್ದಳೆ ಜರಗಿತು. ಈ ಸಂದರ್ಭ ಕಲಾವಿದರನ್ನು ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಸ್ಮರಣಿಕೆ ನೀಡಿ ಸಮ್ಮಾನಿಸಿ ಗೌರವಿಸಲಾಯಿತು.