HEALTH TIPS

ಇಂದು ಶಡ್ರಂಪಾಡಿ ದೇವಾಲಯದಲ್ಲಿ ಶ್ರೀದೈವಗಳ ಪ್ರತಿಷ್ಠೆ

       ಕುಂಬಳೆ: ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗುತ್ತಿರುವ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಏಳನೆಯ ದಿನವಾದ ಇಂದು  ಪ್ರಾತಃಕಾಲ ಗಣಪತಿ ಹೋಮ, ಸೋಪಾನದಲ್ಲಿ ಪೂಜೆ, ದೊಡ್ಡ ಬಲಿಕಲ್ಲು ಪ್ರತಿಷ್ಠೆ, ಸಣ್ಣ ಬಲಿಕಲ್ಲುಗಳ ಪ್ರತಿಷ್ಠೆ ಹಾಗೂ ಉಳ್ಳಾಕ್ಲು, ಧೂಮಾವತಿ ಮತ್ತು ರಕ್ತೇಶ್ವರಿ ದೈವಗಳ ಪ್ರತಿಷ್ಠೆ ಕಾರ್ಯಕ್ರಮಗಳು ಜರಗಲಿವೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನದ ನಂತರ ಸಾಯಂಕಾಲ ಸೋಪಾನದಲ್ಲಿ ಪೂಜೆ, ಅಂಕುರ ಪೂಜೆ, ರಾತ್ರಿಪೂಜೆ ನಡೆಯಲಿವೆ.
    ಶ್ರೀರಾಜರಾಜೇಶ್ವರೀ ಭಜನಾ ಸಂಘ ಮಾಯಿಪ್ಪಾಡಿ, ಶ್ರೀ ಸತ್ಯನಾರಾಯಣ ಭಜನಾ ಸಂಘ ಐಲ ಇವರಿಂದ ಬೆಳಿಗ್ಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 4 ರಿಂದ ಕುಂಬಳೆಯ ವೈಕುಂಠ ಕಾಮತ್ ಮತ್ತು ಬಳಗದವರು ಭಜನಾ ಕಾರ್ಯಕ್ರಮ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ವಿದುಷಿ ಸಾವಿತ್ರಿ.ಕೆ.ಭಟ್ ದೊಡ್ಡಮಾಣಿ ಮತ್ತು ಶಿಷ್ಯವೃಂದದವರಿಂದ ಸಂಗೀತ ಕಛೇರಿ ಜರಗಲಿದೆ. ಅಪರಾಹ್ನ 1 ಗಂಟೆಯಿಂದ ನಾರಾಯಣಮಂಗಲದ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ಇವರಿಂದ ರಣವೀಳ್ಯ ಯಕ್ಷಗಾನ ತಾಳಮದ್ದಳೆ ಜರಗಲಿದೆ. ರಾತ್ರಿ 8 ಗಂಟೆಗೆ ತೆಂಕುತಿಟ್ಟಿನ ಗಜಮೇಳವೆಂದೇ ಪ್ರಸಿದ್ಧಿ ಪಡೆದ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರು ಗಜೇಂದ್ರ ಮೋಕ್ಷ, ಕಂಸವಧೆ, ರತಿಕಲ್ಯಾಣ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಲಿದ್ದಾರೆ.
    ಭಾನುವಾರ ಪ್ರಾತಃಕಾಲ 5 ರಿಂದ ಗಣಪತಿ ಹೋಮ, ವಿದ್ಯೇಶ್ವರ ಕಲಶಪೂಜೆ, ಪ್ರಾಸಾದ ಪ್ರತಿಷ್ಠೆ, ನಾಂದಿಮುಖ, ಪುಣ್ಯಾಹ, ನಪುಂಸಕ ಶಿಲಾಪ್ರತಿಷ್ಠೆ, ಪೀಠಪ್ರತಿಷ್ಠೆ, ಜೀವಕಲಶಾಭಿಷೇಕ, ಮುಹೂರ್ತದಾನ, ಮುಹೂರ್ತದಕ್ಷಿಣೆ, ಪ್ರತಿಷ್ಠಾ ಮುಹೂರ್ತ, ಅಷ್ಟಬಂಧ ನಿಕ್ಷೇಪ, ಜೀವ ಆವಾಹನ, ಸ್ಥೂಲ ಆವಾಹನ, ಸ್ತೋತ್ರ, ಪ್ರಾರ್ಥನೆಗಳು, ಪ್ರತಿಷ್ಠಾ ಬಲಿ, ಪ್ರದಕ್ಷಿಣೆ, ನಿತ್ಯ ನೈಮಿತ್ತಿಕ ನಿರ್ಣಯ, ಭದ್ರದೀಪ ನಿಕ್ಷೇಪ, ಕವಾಟ ಬಂಧನ, ಸೋಪಾನ ಪೂಜೆ, ಅಂಕುರಪೂಜೆ ವಿಧಿವಿಧಾನಗಳು ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನದ ಬಳಿಕ ಸಂಜೆ ಸೋಪಾನದಲ್ಲಿ ಪೂಜೆ, ಅಂಕುರ ಪೂಜೆ, ರಾತ್ರಿಪೂಜೆಗಳು ನೆರವೇರಿದವು.
     ಗಣೇಶ ಭಜನಾ ಸಂಘ ಸೂರಂಬೈಲು, ಗುರುಕೃಪಾ ಭಜನಾ ಸಂಘ ಉಳಿಯತ್ತಡ್ಕ ಇವರಿಂದ ಬೆಳಗ್ಗೆ ಮತ್ತು ಕಾಳಿಕಾಂಬಾ ಭಜನಾ ಸಂಘ ಆರಿಕ್ಕಾಡಿ ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ಚಿತ್ತರಂಜಿನಿ ಹಿಳ್ಳೆಮನೆ ಮತ್ತು ಬಳಗದವರಿಂದ ಸಂಗೀತ ಕಛೇರಿ ನಡೆಯಿತು. ಅಪರಾಹ್ನ 2 ಗಂಟೆಯಿಂದ ಉಳಿಯ ಶ್ರೀಧನ್ವಂತರೀ ಯಕ್ಷಗಾನ ಕಲಾಸಂಘ, ಮಧೂರು ಇವರಿಂದ ಭೀಷ್ಮೋತ್ಪತ್ತಿ - ಭೀಷ್ಮ ಪ್ರತಿಜ್ಞೆ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು. ರಾತ್ರಿ 8 ರಿಂದ ನಂದಾದೀಪ ಮಕ್ಕಳ ಗುಂಪು ಮುಖಾರಿಗದ್ದೆ ಮತ್ತು ಊರವರಿಂದ ನೃತ್ಯ ವೈಭವ ಕಾರ್ಯಕ್ರಮಗಳು ನೆರವೇರಿದವು.
                   ನಾಳೆಯ ಕಾರ್ಯಕ್ರಮ: 
   ಮಂಗಳವಾರ ಬೆಳಿಗ್ಗೆ 6.30 ರಿಂದ ಗಣಪತಿಹೋಮ, ಸೋಪಾನದಲ್ಲಿ ಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ತತ್ವಹೋಮ, ತತ್ವಕಲಶ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 6 ರಿಂದ ಸೋಪಾನದಲ್ಲಿ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ಪ್ರಾರ್ಥನೆ, ರಾತ್ರಿ ಪೂಜೆಗಳು ನಡೆಯಲಿವೆ.
    ಬೆಳಿಗ್ಗೆ 8ರಿಂದ 10.30ರ ತನಕ ಅನಂತಪದ್ಮನಾಭ ಭಜನಾ ಸಂಘ ಅನಂತಪುರ, ಸತ್ಯನಾರಾಯಣ ಭಜನಾ ಸಂಘ ಮುಖಾರಿಗದ್ದೆ ತಂಡಗಳಿಂದ, ಸಂಜೆ 6ರಿಂದ ಕುತ್ಯಾಳ ರಕ್ತೇಶ್ವರಿ ಭಜನಾ ತಂಡದವರಿಂದ  ಭಜನಾ ಸಂಕೀರ್ತನೆ, 10.30 ರಿಂದ 12.30ರ ತನಕ ಬಂಟ್ವಾಳ ಕಡೇಶಿವಾಲಯದ ಗಹನಶ್ರೀ ತಂಡದವರಿಂದ ಸಂಗೀತ ಕಚೇರಿ ನಡೆಯಲಿದೆ.ಅಪರಾಹ್ನ 2ರಿಂದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಬಳಗದವರಿಂದ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿ ನಡೆಯಲಿದೆ.  ರಾತ್ರಿ 7ರಿಂದ ನಾಟ್ಯನಿಲಯಂ ಮಂಜೇಶ್ವರ ಬಾಲಕೃಷ್ಣ ಮಾಸ್ತರ್ ಅವರ ಶಿಷ್ಯ ವೃಂದದವರಿಂದ ನೃತ್ಯಾರ್ಪಣಂ-ಭರತನಾಟ್ಯ ಮತ್ತು ಜಾನಪದ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ.
        ಸಮರಸ ಚಿತ್ರಗಳು:
    ಶನಿವಾರ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳಿಂದ
1. ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಇವರಿಂದ ನಮೇ ಭಕ್ತಃ ಪ್ರಣಶ್ಯತಿ ಹರಿಕಥೆ
2. ರಾಷ್ಟ್ರಪ್ರಶಸ್ತಿ ವಿಜೇತೆ ಸ್ವಾತಿ ಭಟ್ ಅಸೈಗೋಳಿ ಮತ್ತು ಮಿಥುನ್‍ರಾಜ್ ಮುಡಿಪು ಇವರು ಹಾಗೂ ಇವರ ಶಿಷ್ಯವೃಂದದವರಿಂದ ಭರತನಾಟ್ಯ - ಜನಪದ ನೃತ್ಯ
3. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಶಿಷ್ಯರಿಂದ ಯಕ್ಷಗಾನ ವೈಭವ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries