ತ್ರಿಂಶತಿಯ ಸಂಭ್ರಮದಲ್ಲಿ ನಾಗಬ್ರಹ್ಮ ಫೆಂಡ್ಸ್ ಕ್ಲಬ್ ತಲೇಕಳ
0
ಏಪ್ರಿಲ್ 04, 2019
ಎಪ್ರಿಲ್ 6 ತ್ರಿಂಶತಿ ಕಾರ್ಯಕ್ರಮ
ಮಂಜೇಶ್ವರ: ತಲೇಕಳದ ನಾಗಬ್ರಹ್ಮ ಫ್ರಂಡ್ಸ್ ಕ್ಲಬ್‍ನ ತ್ರಿಂಶತಿ ಕಾರ್ಯಕ್ರಮ ಏ.6 ರಂದು ಸಂಜೆ 7.30 ರಿಂದ ತಲೇಕಳದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ಭಜನಾ ಮಂದಿರ ಮದಂಗಲ್ಲುಕಟ್ಟೆ ಇದರ ಅಧ್ಯಕ್ಷ ಶಂಕರನಾರಾಯಣ ಭಟ್ ಮುಂದಿಲ ವಹಿಸುವರು. ಮುಖ್ಯ ಅತಿಥಿಗಳಾಗಿ ಕೈರಂಗಳ ಶಾರದ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಭಾಗವಹಿಸುವರು. ಶ್ರೀ ಅರಸು ಮಂಜಿಷ್ಣಾರ್ ದೈವ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನ ಎಂ, ನಾಗ ಬ್ರಹ್ಮ ಫ್ರಂಡ್ಸ್ ಕ್ಲಬ್‍ನ ಗೌರವಾಧ್ಯಕ್ಷ ಪದ್ಮನಾಭ ರೈ ಉಂಬಲ್ತೋಡಿ, ನಾಗ ಬ್ರಹ್ಮ ಫ್ರಂಡ್ಸ್ ಕ್ಲಬ್ ನ ಅಧ್ಯಕ್ಷ ಪ್ರಕಾಶ್ ಮದಂಗಲ್ಲು ಕಂಬ್ಲ ಉಪಸ್ಥಿತರಿರುವರು.
ಉದ್ಯಮಿ ಹಾಗೂ ಮದಂಗಲ್ಲಾಯ ಧೂಮಾವತೀ ದೈವ ಕ್ಷೇತ್ರದ ಧಾರ್ಮಿಕ ಸೇವಾಕರ್ತ ರಾಜೇಶ ಶೆಟ್ಟಿ ಬೆಜ್ಜಂಗಳ ಗುತ್ತು ಇವರನ್ನು ಗಣ್ಯರ ಸಮಕ್ಷಮ ಗೌರವಿಸಲಾಗುವುದು. ಹಾಗೂ ಕ್ಲಬ್‍ನ ಹಿರಿಯ ಸದಸ್ಯರಿಗೆ ಹಾಗೂ ಊರಿನ ಪ್ರತಿಭೆಗಳಿಗೆ ಗೌರವಾರ್ಪಣೆ ಜರಗಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ಲಯನ್. ಕಿಶೋರ್ ಡಿ ಶೆಟ್ಟಿ ಅವರ ನಿರ್ದೇಶನದಲ್ಲಿ ಲಕುಮಿ ತಂಡದ ಕುಸಾಲ್ದ ಕಲಾವಿರು ಅಭಿನಯಿಸುವ ಮಂಗೆ ಮಲ್ಪೊಡ್ಚಿ ತುಳು ಸಾಮಾಜಿಕ ನಾಟಕ ಜರಗಲಿದೆ ಎಂದು ಕ್ಲಬ್‍ನ ಪ್ರಕಟಣೆ ತಿಳಿಸಿದೆ.