HEALTH TIPS

ಮೋದಿಯವರ ಅಭಿವೃದ್ಧಿ ಚಿಂತನೆಗಳು ಕೇರಳದ ಹೆಬ್ಬಾಗಿಲು ಕಾಸರಗೋಡಿನಲ್ಲಿ ಸಾಕ್ಷಾತ್ಕಾರ ಗೊಳ್ಳಲು ಎನ್ ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಸಂಸದರಾಗಿ ಆರಿಸಿ ಬರ ಬೇಕಾಗಿರುವುದು ಅನಿವಾರ್ಯ- ಪೆರ್ಲದಲ್ಲಿ ನಡೆದ ಎನ್ ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್

 

   ಪೆರ್ಲ: ಕೇರಳದಲ್ಲಿ ನಡೆಯುವ ಸಂಸದೀಯ ಚುನಾವಣೆ ಅಭಿವೃದ್ಧಿ ಹಾಗೂ ಅಕ್ರಮ ರಾಜಕೀಯದ ನಡುವಿನ ಸ್ಪರ್ಧೆಯಾಗಿದೆ.ಇಲ್ಲಿನ ಷಡ್ಯಂತ್ರ ಹಾಗೂ ಕುಂತಂತ್ರ ಪ್ರೇರಿತ ಕೀಳು ಕೊಲೆ ರಾಜಕೀಯವನ್ನು ತೊಲಗಿಸಿ ಧರ್ಮ ರಾಜಕಾರಣದ  ಸ್ಥಾಪನೆಯಾಗಬೇಕಿದೆ ಎಂದು ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಆಶಯ ವ್ಯಕ್ತಪಡಿಸಿದರು.
      ಕಾಸರಗೋಡು ಲೋಕಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ  ರವೀಶ ತಂತ್ರಿ ಕುಂಟಾರು ಅವರ ಚುನಾವಣಾ ಪ್ರಚಾರಾರ್ಥ ಭಾನುವಾರ ಪೆರ್ಲದಲ್ಲಿ ನಡೆದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
    ಆಧ್ಯಾತ್ಮಿಕ ಶ್ರೇಷ್ಟರಿಗೆ ಜನ್ಮ ನೀಡಿದ ದೇವರ ನಾಡು ಕೇರಳ ಎಡರಂಗದ ಆಡಳಿತದಿಂದ ರಾಕ್ಷಸ ರಾಜ್ಯವಾಗಿ ಮಾರ್ಪಡುತ್ತಿದೆ.ನಿಜವಾದ ದೇವರ ನಾಡಾಗಿ ಮಾರ್ಪಡಲು ಬಿಜೆಪಿಯ ಗೆಲುವು ಅನಿವಾರ್ಯ ಹಾಗೂ ಅದು ದೈವ ನಿಶ್ಚಯ. ರಕ್ತ ಸಿಕ್ತ ರಾಜಕೀಯ ಮನಸ್ಥಿತಿಯ ಸಿಪಿಐ(ಎಂ) ಸೋಲಿನ ಭೀತಿಯಿಂದ ನಲುಗಿ ಆಕ್ರಮಣ ರಾಜಕೀಯಕ್ಕೆ ಮುಂದಾಗಿದೆ.ಕಾಸರಗೋಡು ಎನ್ ಡಿಎ ಅಭ್ಯರ್ಥಿಯ ಚುನಾವಣಾ ಪ್ರಚಾರದ ವೇಳೆ ಎರಡು ಬಾರಿ ಹಲ್ಲೆಗೆ ಯತ್ನಿಸಿದೆ.ಸಂಸದೀಯ ಚುನಾವಣೆ ಬಳಿಕ ಕೇರಳದ ಮುಖಮಂತ್ರಿ ಪಿಣರಾಯಿ ವಿಜಯನ್ ಸಕ್ರಿಯ ರಾಜಕಾರಣದಿಂದ ಒತ್ತಾಯ ಪೂರ್ವಕ ನಿವೃತ್ತರಾಗಲಿದ್ದು ಸಿಪಿಎಂ ಪಕ್ಷ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದಂತೆ ಕೇರಳದಲ್ಲೂ ಸಂಪೂರ್ಣ ನಿರ್ಣಾಮವಾಗಿ ಅರಬ್ಬೀ ಸಮುದ್ರ ಸೇರುವ ದಿನ ದೂರ ಉಳಿದಿಲ್ಲ.
ಭಾರತದ ಸರ್ವತೋಮುಖ ಅಭಿವೃದ್ಧಿಯ ಹೊಂಗನಸು ಹೊತ್ತ ಪ್ರಧಾನಿ ನರೇಂದ್ರ ಮೋದಿ 14ನೇ ಪಂಚವಾರ್ಷಿಕ ಯೋಜನೆ ಅನ್ವಯ ಕೇಂದ್ರದ  ಅನುದಾನಗಳನ್ನು ನೇರವಾಗಿ ಪಂಚಾಯಿತಿಗಳಿಗೆ ಲಭಿಸುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
   ಮೋದಿಯವರ ಅಭಿವೃದ್ಧಿ ಚಿಂತನೆಗಳು ಕೇರಳದ ಹೆಬ್ಬಾಗಿಲು ಕಾಸರಗೋಡಿನಲ್ಲಿ ಸಾಕ್ಷಾತ್ಕಾರ ಗೊಳ್ಳಲು ಎನ್ ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಸಂಸದರಾಗಿ ಆರಿಸಿ ಬರಬೇಕಾದುದು ಅನಿವಾರ್ಯ ಎಂಬ ಪ್ರಬುದ್ಧ ಮನಸ್ಥಿತಿಯನ್ನು ಕಾಸರಗೋಡಿನ ಮತದಾರರರು ಹೊಂದಿದ್ದಾರೆ ಎಂದರು.
    ರವೀಶ ತಂತ್ರಿ ಅವರು ಮಾತನಾಡಿ, ಬಿಜೆಪಿಯ ಯಾವೊಬ್ಬ ನೇತಾರನೂ ಕಾಂಗ್ರೆಸ್ ನ ಕುಟುಂಬ ರಾಜಕೀಯ ಅಥವಾ ಸಿಪಿಎಂನ  ಅಕ್ರಮ ರಾಜಕೀಯದಂತೆ ಮೇಲೆ ಬಂದಿಲ್ಲ.ಪ್ರಧಾನಿ ಮೋದಿಯವರೂ ಸೇರಿದಂತೆ ಪ್ರತಿಯೊಬ್ಬ ನೇತಾರನೂ ಆರೋಗ್ಯ ಪೂರ್ಣ ರಾಜಕೀಯದೊಂದಿಗೆ ಕೆಳ ಸ್ಥರದಿಂದ ನಾಯಕನಾಗಿ ಹೊರಹೊಮ್ಮಿದ್ದಾನೆ.ರಾಜಕೀಯ ಅಸಹಿಷ್ಣುತೆ ಬಾಧಿಸಿದ ಕೇರಳವನ್ನು ಆಳುತ್ತಿರುವ ಸಿಪಿಎಂ ನೇತೃತ್ವದ ಸರಕಾರ ಆಕ್ರಮಣ ರಾಜಕೀಯಕ್ಕೆ ಮುಂದಾಗಿದ್ದು ಉಳಿದ ರಾಜ್ಯಗಳಲ್ಲಿ ಸಂಭವಿಸಿದಂತೆ ಕೇರಳದಲ್ಲೂ ಅವನತಿ ಕಾಣುವ ದಿನಗಳು ದೂರ ಉಳಿದಿಲ್ಲ.ಕಾಸರಗೋಡಿನ ಜನತೆಯ ನಾಡಿ ಮಿಡಿತ ಏಕೈಕ ಅಭ್ಯರ್ಥಿಯಾಗಿ ಸಂಸದನಾಗಿ ಆಯ್ಕೆಯಾದಲ್ಲಿ ಪ್ರಧಾನಿ ಮೋದಿಯವರ ಆದರ್ಶದೊಂದಿಗೆ ಕಾಸರಗೋಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.
   ಯುವಮೋರ್ಚಾ ನೇತಾರ ರಮಾನಂದ ಎಡಮಲೆ ಅಧ್ಯಕ್ಷತೆ ವಹಿಸಿದರು.ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ರೂಪವಾಣಿ ಆರ್.ಭಟ್, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಯುವ ಮೋರ್ಚಾದ ವಿ.ಆರ್.ಸುನಿಲ್, ರೂಪೇಶ್, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಕುಮಾರ್ ಶೆಟ್ಟಿ, ಮಾತನಾಡಿದರು.ಮಹಿಳಾ ಮೋರ್ಚಾ ರಾಜ್ಯ ಸಮಿತಿ ಸದಸ್ಯೆ ಪುಷ್ಪಾ ಅಮೆಕ್ಕಳ, ಎಣ್ಮಕಜೆ ಎಸ್ ಟಿ ಮೋರ್ಚಾ ಅಧ್ಯಕ್ಷ ನಾರಾಯಣ ನಾಯ್ಕ್ ಅಡ್ಕಸ್ಥಳ, ಬಿಜೆಪಿ, ಮಹಿಳಾ ಮೋರ್ಚಾ, ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.ಪಂಚಾಯಿತಿ ಸಮಿತಿ ಕಾರ್ಯದರ್ಶಿ ಪದ್ಮಶೇಖರ ನೇರೋಳು ಸ್ವಾಗತಿಸಿ, ಸುರೇಶ್ ವಾಣೀನಗರ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries