ಹೃದಯದ ಖಾಯಿಲೆಯಿಂದ ಬಳಲುತ್ತಿರುವ ಸ್ವರ್ಣಲತಾರಿಗೆ ಹೃದಯವಂತರ ನೆರವು ನಿರೀಕ್ಷೆ
0
ಏಪ್ರಿಲ್ 06, 2019
ಸಂಕಷ್ಟ ಕುಟುಂಬ ದಾನಿಗಳ ಸಹಾಯದ ನಿರೀಕ್ಷೆಯಲ್ಲಿ
ಬದಿಯಡ್ಕ: ನೀರ್ಚಾಲು ಸಮೀಪದ ಪೆರ್ವದಲ್ಲಿ ತನ್ನ ಮೂವರು ಹೆಣ್ಣು ಮಕ್ಕಳನ್ನು ಒಳಗೊಂಡ ಕಡು ಬಡತನದಲ್ಲಿರುವ ದಂಪತಿಗಳು ಹೃದಯವಂತರ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ.
ಪೆರ್ವ ಸುಬ್ರಹ್ಮಣ್ಯ ಭಟ್ ಅವರ ಪತ್ನಿ ಸ್ವರ್ಣಲತಾ ಹೃದಯದ ಖಾಯಿಲೆಯಿಂದ ಬಳಲುತ್ತಿದ್ದು ಔಷಧಿಗಾಗಿ ಸಹೃದಯಿ ದಾನಿಗಳ ನೆರವನ್ನು ಕೋರುತ್ತಿದ್ದಾರೆ. ಆದಾಯವೇನೂ ಇಲ್ಲದೆ ಕಡು ಬಡತನದ ಮಧ್ಯೆ ಪುಟ್ಟ ಮನೆಯಲ್ಲಿ ವಾಸಿಸುವ ಇವರ ಕುಟುಂಬಕ್ಕೆ ಗಂಡ ಸುಬ್ರಹ್ಮಣ್ಯ ಭಟ್ ಅವರ (ಪ್ಲ0ಬರ್) ಪುಟ್ಟ ಆದಾಯವೇ ಆಸರೆಯಾಗಿದೆ. ವರ್ಷಗಳ ಹಿಂದೆ ಸಾಲ ಮಾಡಿ ದೊಡ್ಡ ಮಗಳ ವಿವಾಹವನ್ನು ಮಾಡಿದ್ದರು. ಇದೀಗ ಸ್ವರ್ಣಲತಾರಿಗೆ ಹೃದಯದ ಖಾಯಿಲೆ ಬಾಧಿಸಿದ್ದು, ಚಿಕಿತ್ಸೆಗಾಗಿ ದೊಡ್ಡ ಮೊತ್ತನ್ನೇ ವ್ಯಯಿಸಲಾಗಿದೆ. ಆದರೂ ಇನ್ನೂ ಸಂಪೂರ್ಣ ಗುಣಮುಖವಾಗದ ಇವರಿಗೆ ಜೀವನ ಪರ್ಯಂತ ಔಷಧಿ ಹಾಗೂ ಪರಿಶೋಧನೆ ಅಗತ್ಯವಿರುವುದಾಗಿ ವೈದ್ಯರು ಸೂಚಿಸಿರುತ್ತಾರೆ. ಇದೀಗ ಪ್ರತೀ ತಿಂಗಳ ಔಷಧಿ ಖರ್ಚೇ ರೂಪಾಯಿ 3500ಕ್ಕೂ ಹೆಚ್ಚು ಅಗತ್ಯವಿದೆ. ಇದರೊಂದಿಗೆ ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸ ಖರ್ಚು ಎಲ್ಲವನ್ನೂ ಸರಿ ಹೊಂದಿಸಲು ಪರದಾಡುವಂತಹ ಸ್ಥಿತಿ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ನೀರ್ಚಾಲು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ನಿವೇದಿತಾ ಸೇವಾ ಮಿಷನ್ ಕಾರ್ಯಕರ್ತರನ್ನು ಅವರು ಸಂಪರ್ಕಿಸಿ ಧನ ಸಹಾಯವನ್ನು ಅಪೇಕ್ಷಿಸಿರುತ್ತಾರೆ. ಆದುದರಿಂದ ಸಹೃದಯೀ ದಾನಿಗಳು ಮುಂದೆ ಬಂದು ಈ ಕುಟುಂಬದ ಸಂಕಷ್ಟಕ್ಕೆ ನಿವೇದಿತಾ ಸೇವಾ ಮಿಶನ್‍ನೊಂದಿಗೆ ಕೈಜೋಡಿಸಿ ಅವರಿಗೆ ನೆರವಾಗಬೇಕೆಂದು ಸಂಬಂಧಪಟ್ಟವರು ವಿನಂತಿಸಿಕೊಂಡಿರುತ್ತಾರೆ. ಹೆಚ್ಚಿನ ವಿವರಗಳ ಅಗತ್ಯವಿದ್ದಲ್ಲಿ ಸುಬ್ರಹ್ಮಣ್ಯ ಭಟ್ಟರ 8129532157 ನಂಬ್ರದ ಮೊಬೈಲ್ ಸಂಪರ್ಕಿಸಬಹುದಾಗಿದೆ. ಧನಸಹಾಯವನ್ನು ಮಾಡಲಿಚ್ಛಿಸುವ ದಾನಿಗಳು ಸುಬ್ರಹ್ಮಣ್ಯ ಭಟ್, ಬ್ಯಾಂಕ್ ಖಾತೆ ಸಂಖ್ಯೆ 5322500100934301, ಐಎಫ್‍ಎಸ್‍ಸಿ ಕೋಡ್ ಕೆಎಆರ್‍ಬಿ0000532, ಕರ್ನಾಟಕ ಬ್ಯಾಂಕ್, ನೀರ್ಚಾಲು ಶಾಖೆಗೆ ಹಣವನ್ನು ವರ್ಗಾಯಿಸಬಹುದಾಗಿದೆ.
ಚಿತ್ರದಲ್ಲಿ: ನೀರ್ಚಾಲು ಸಮೀಪದ ಪೆರ್ವ ಸ್ವರ್ಣಲತಾ ಹೃದಯದ ಖಾಯಿಲೆಯಿಂದ ಬಳಲುತ್ತಿದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.