ನವದೆಹಲಿ: ಸಾಮಾಜಿಕ ವಲಯ ಯೋಜನೆಗಳಲ್ಲಿ ಮೋದಿ ಸರ್ಕಾರದ ಸಾಕಷ್ಟು ಯೋಜನೆಗಳು ಯಶಸ್ಸು ಸಾಧಿಸಿದೆ ಎಂದು ಮಾಜಿ ನೀತಿ ಆಯೋಗ ಉಪಾಧ್ಯಕ್ಷ ಅರವಿಂದ್ ಪನಾಗರಿಯಾ ಹೇಳಿದ್ದಾರೆ.
ಸುದ್ದಿಸಂಸ್ಛೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ನೀತಿ ಆಯೋಗ ಉಪಾಧ್ಯಕ್ಷ ಅರವಿಂದ್ ಪನಾಗರಿಯಾ ಅವರು, ಆಯುಷ್ಮಾನ್ ಭಾರತ್, ಪಿಎಂಕಿಸಾನ್ ಯೋಜನೆ, ಗ್ರಾಮೀಣ ವಿದ್ಯುತ್ ಚ್ಛಕ್ತಿಯಂತಹ ಸಾಮಾಜಿಕ ವಲಯದ ಯೋಜನೆಗಳಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದೆ. ಅಂತೆಯೇ ಭಷ್ಟಾಚಾರ ನಿಗ್ರಹ ವಿಚಾರದಲ್ಲಿ ಮೋದಿ ಸರ್ಕಾರ ಸಾಕಷ್ಟು ನಿಯಂತ್ರಣ ಸಾಧಿಸಿದೆ ಎಂದು ಹೇಳಿದ್ದಾರೆ.
ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಪ್ರಮುಖ ಮೂರು ವಲಯಗಳಾದ ಸರಕು ಮತ್ತು ಸೇವಾ ತೆರಿಗೆ, ದಿವಾಳಿತನ ಮತ್ತು ನೇರ ಲಾಭ ವರ್ಗಾವಣೆಯಂತಹ ವಿಚಾರಗಳಲ್ಲಿ ಇನ್ನೂ ಸಾಕಷ್ಟು ನಿಯಂತ್ರಣ ಸಾಧಿಸಬೇಕಿದೆ. ಇನ್ನು ಮೂಲಭೂತ ಸೌಕರ್ಯ ವಿಚಾರದಲ್ಲೂ ಸರ್ಕಾರ ಕೈಗೊಂಡ ಕ್ರಮಗಳು ಉತ್ತಮ ಫಲಿತಾಂಶ ನೀಡುತ್ತಿದೆ. ರಸ್ತೆ ನಿರ್ಮಾಣ, ರೈಲ್ವೇ, ನೀರು ಸರಬರಾಜು, ನಾಗರಿಕ ವಿಮಾನಯಾನ ಸೇವೆ, ಡಿಜಿಟಲೀಕರಣ ದಂತಹ ವಿಚಾರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂಜು ಹೇಳಿದರು.
ಇದೇ ವೇಳೆ ಮೋದಿ ಸರ್ಕಾರದ ವಿರುದ್ಧ ಅರ್ಥ ಶಾಸ್ತಜ್ಞರು ಮಾಡಿರುವ ಟೀಕೆಗಳ ಕುರಿತು ಮಾತನಾಡಿದ ಅವರು, ಅಂತಾರಾಷ್ಟ್ರೀಯ ಸಂಸ್ಥೆಗಳಾದ ವಿಶ್ವ ಹಣಕಾಸು ನಿಧಿ, ವಿಶ್ವಬ್ಯಾಂಕ್, ವಿಶ್ವಸಂಸ್ಥೆಗಳೇ ಮೋದಿ ಸರ್ಕಾರದ ಯೋಜನೆಗಳ ಕುರಿತು ಸಕಾರಾತ್ಮಕ ವರದಿ ನೀಡಿದೆ ಎಂದು ತಿರುಗೇಟು ನೀಡಿದರು.