HEALTH TIPS

ಶಡ್ರಂಪಾಡಿಯಲ್ಲಿ ಜನಸಾಗರದೊಂದಿಗೆ ಮೇಳೈಸುತ್ತಿದೆ ಪುನಃ ಪ್ರತಿಷ್ಠಾ ಬ್ರಹಮಕಲಶೋತ್ಸವ

ಕುಂಬಳೆ: ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತು ಉಳ್ಳಾಕ್ಲು, ಧೂಮಾವತಿ, ರಕ್ತೇಶ್ವರಿ ದೈವಸಾನ್ನಿಧ್ಯಗಳ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಶುಕ್ರವಾರ ಬೆಳಿಗ್ಗೆ ಗಣಪತಿ ಹೋಮ, ಉಷಃಪೂಜೆ, ಅಂಕುರಪೂಜೆ, ತತ್ತ್ವಕಲಶ ಪೂಜೆ, ತತ್ತ್ವಹೋಮ, ಅನುಜ್ಞಾಕಲಶ ಪೂಜೆ, ತತ್ತ್ವಕಲಶಾಭಿಷೇಕ ವಿಧಿವಿಧಾನಗಳು ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನದ ಬಳಿಕ ಸಂಜೆ ಅನುಜ್ಞಾ ಬಲಿ, ಚತುರ್ಥ ಕಲಶ, ಬಿಂಬಶುದ್ಧಿ ಮತ್ತು ರಾತ್ರಿಪೂಜೆಗಳು ನಡೆಯಿತು. ಚೀರುಂಬಾ ಭಗವತೀ ಮಹಿಳಾ ಭಜನಾ ಸಂಘ ನಾರಾಯಣಮಂಗಲ, ಅಯ್ಯಪ್ಪ ಭಜನಾ ಸಂಘ ಸೂರಂಬೈಲು, ಕುಮಾರಸ್ವಾಮಿ ಭಜನಾ ಸಂಘ ಪುತ್ತಿಗೆ ಇವರಿಂದ ಬೆಳಗ್ಗೆ ಮತ್ತು ಆರ್ಟ್ ಓಫ್ ಲಿವಿಂಗ್ ಕಳತ್ತೂರು ಇವರಿಂದ ಅಪರಾಹ್ನ ಭಜನಾ ಸಂಕೀರ್ತನಾ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 11.30 ರಿಂದ ಕೃಷ್ಣಶೌರಿ.ಡಿ.ಎಸ್ ದೊಡ್ಡಮಾಣಿ ಇವರಿಂದ ಕೊಳಲುವಾದನ ಮತ್ತು ಸಂಜೆ ಪವನ.ಬಿ.ಆಚಾರ್ ಮಣಿಪಾಲ ಇವರಿಂದ ವೀಣಾವಾದನ ಕಾರ್ಯಕ್ರಮ ಪ್ರಸ್ತುತಿಗೊಂಡಿತು. ರಾತ್ರಿ 8 ರಿಂದ ನೀರ್ಚಾಲು ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ವಾಣಿಪ್ರಸಾದ್ ಕಬೆಕ್ಕೋಡು ಇವರ ಶಿಷ್ಯೆ ಕುಮಾರಿ ರೂಪಾ ಕನಕಪ್ಪಾಡಿ ಇವರಿಂದ ಸಂಗೀತ ಕಛೇರಿ, ಸಂಜೆ ಡಾ.ಕಿರಣ್ ಕುಮಾರ್, 'ಗಾನಸಿರಿ' ಪುತ್ತೂರು ಇವರ ಶಿಷ್ಯೆ ಕುಮಾರಿ ವಿಭಾಶ್ರೀ ಬೆಳ್ಳಾರೆ ಇವರಿಂದ ಭಕ್ತಿ-ಭಾವ-ಗಾನ ಕಾರ್ಯಕ್ರಮ ಪ್ರಸ್ತುತಿಗೊಂಡಿತು. ನಾಟ್ಯ ವಿದ್ಯಾನಿಲಯ ಕುಂಬಳೆಯ ವಿದ್ಯಾಲಕ್ಷ್ಮಿ ಇವರ ಶಿಷ್ಯವೃಂದದವರಿಂದ ರಾತ್ರಿ 8 ಗಂಟೆಗೆ 'ನೃತ್ಯ ಸಂಭ್ರಮ - 2019' ಕಾರ್ಯಕ್ರಮ ಪ್ರದರ್ಶನಗೊಂಡಿತು. ಇಂದಿನ ಕಾರ್ಯಕ್ರಮ: ಶನಿವಾರ ಬೆಳಿಗ್ಗೆ ನಿದ್ರಾಕಲಶ ಪೂಜೆ, ಕುಂಭೇಶ ಕಲಶಪೂಜೆ, ಕರ್ಕರಿ ಪೂಜೆ, ಶಿರತತ್ವಪೂಜೆ, ಅನುಜ್ಞಾದಾನಂ, ಸಂಹಾರತತ್ತ್ವ ಕಲಶಾಭಿಷೇಕ, ಜೀವದ್ಧೋಶಾನ ಜೀವ ಕಲಶ, ಶಯ್ಯಾರೋಪಣ, ಗಣಪತಿ ಹೋಮ, ಉಷಃಪೂಜೆ, ಅಂಕುರಪೂಜೆ, ಸಂಹಾರತತ್ತ್ವಹೋಮ ಜರಗಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನದ ಬಳಿಕ ಸಂಜೆ ಬಿಂಬಶುದ್ಧಿ, ಪೀಠಾಧಿವಾಸ, ಧಾನ್ಯಾಧಿವಾಸ, ಅಧಿವಾಸ ಹೋಮ, ಶಾಂತಿಹೋಮ, ಅಧಿವಾಸ ಪೂಜೆ ರಾತ್ರಿಪೂಜೆ ನಡೆಯಲಿವೆ. ಮಾತಾ ಭಜನಾ ಸಂಘ ಜಿ.ಕೆ.ನಗರ ಸೂರಂಬೈಲು, ಗಣೇಶ ಮಹಿಳಾ ಭಜನಾ ಸಂಘ ನಾಯ್ಕಾಪು, ಶ್ರೀಮಾತಾ ಹವ್ಯಕ ಮಹಿಳಾ ಭಜನಾ ಸಂಘ ಬದಿಯಡ್ಕ ಇವರಿಂದ ಬೆಳಿಗ್ಗೆ ಮತ್ತು ಉಮಾಭಗವತಿ ಭಜನಾ ಸಂಘ ಪಚ್ಲಂಪಾರೆ ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ಶ್ರೀಮತಿ ವಿಜಯಾ ಪ್ರಕಾಶ್ ಬೆದ್ರಡಿ-ಕಲ್ಲಕಟ್ಟ ಮತ್ತು ವಿಜಯಾ ಬೆಂಗಳೂರು ಇವರ ಶಿಷ್ಯೆ ಕಾವ್ಯಶ್ರೀ ಹಾಗೂ ಬಳಗದವರಿಂದ ಸಂಗೀತ ಕಛೇರಿ ಜರಗಲಿದೆ. ಅಪರಾಹ್ನ 2 ಗಂಟೆಯಿಂದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಶಿಷ್ಯರು ಯಕ್ಷಗಾನ ವೈಭವ ಕಾರ್ಯಕ್ರಮ ನೀಡಲಿದ್ದಾರೆ. ಸಮಜೆ 6 ಕ್ಕೆ ಶಂ.ನಾ.ಅಡಿಗ ಕುಂಬಳೆ ಇವರಿಂದ ನಮೇ ಭಕ್ತಃ ಪ್ರಣಶ್ಯತಿ ಎಂಬ ಹರಿಕಥಾ ಸತ್ಸಂಗ ಕಾರ್ಯಕ್ರಮವಿದೆ. ರಾತ್ರಿ 8 ರಿಂದ ರಾಷ್ಟ್ರಪ್ರಶಸ್ತಿ ವಿಜೇತೆ ಸ್ವಾತಿ ಭಟ್ ಅಸೈಗೋಳಿ ಮತ್ತು ಮಿಥುನ್‍ರಾಜ್ ಮುಡಿಪು ಇವರು ಹಾಗೂ ಇವರ ಶಿಷ್ಯವೃಂದದವರಿಂದ ಭರತನಾಟ್ಯ - ಜನಪದ ನೃತ್ಯ ಕಾರ್ಯಕ್ರಮ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries