HEALTH TIPS

ಆರೋಗ್ಯ ಕೇಂದ್ರಗಳಿಗೆ ಅತ್ಯುತ್ತಮ ಗುಣಮಟ್ಟ ಅರ್ಹತಾಪತ್ರ

         ಕಾಸರಗೋಡು: ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಂಡಿರುವ ಬಗ್ಗೆ ಅರ್ಹತಾಪತ್ರ ಪಡೆದು ಜಿಲ್ಲೆಯ ಆರೋಗ್ಯ ಕೇಂದ್ರಗಳು ನಾಡಿಗೆ ಹಿರಿಮೆ ತಂದಿವೆ.
       2018-19ನೇ ವರ್ಷದ ರಾಷ್ಟ್ರೀಯ ಕ್ವಾಲಿಟಿ ಅಶ್ಯೂರೆನ್ಸ್ ಸರ್ಟಿಫಿಕೆಟ್ ನಿಟ್ಟಿನಲ್ಲಿ ಶೇ. 99 ಅಂಕ ಗಳಿಸಿ ಜಿಲ್ಲೆಯ ಕಯ್ಯೂರು ಕುಟುಂಬ ಆರೋಗ್ಯ ಕೇಂದ್ರ ಪ್ರಥಮ ಸ್ಥಾನ ಪಡೆದಿದೆ. ಶೇ. 97 ಅಂಕ ಪಡೆದು ವಲಿಯಪರಂಬ ಪ್ರಾಥಮಿಕ ಆರೋಗ್ಯ ಕೇಂದ್ರ ಮೂರನೇ ಸ್ಥಾನ, ಶೇ. 96 ಅಂಕ ಪಡೆದು ಕರಿಂದಳಂ ಕುಟುಂಬ ಆರೋಗ್ಯ ಕೇಂದ್ರ ನಾಲ್ಕನೇ ಸ್ಥಾನ ಪಡೆದಿದೆ. ರಾಜ್ಯದ 7 ಸಂಸ್ಥೆಗಳು ಈ ಅಂಗೀಕಾರಕ್ಕಾಗಿ ಸ್ಪರ್ಧಾ ಕಣದಲ್ಲಿದ್ದವು.
       ಆರೋಗ್ಯ ಸೇವಾ ವಲಯದ ಗುಣಮಟ್ಟವನ್ನು ಗಮನಿಸಿ ಈ ಮಾನ್ಯತೆ ನೀಡಲಾಗುತ್ತದೆ. ಆಸ್ಪತ್ರೆಗಳ ಹೊರರೋಗಿ ವಿಭಾಗ, ಭೌತಿಕ ವ್ಯವಸ್ಥೆಗಳು, ಸಿಬ್ಬಂದಿಯ ದಕ್ಷತೆ, ಅಗತ್ಯದ ಔಷಧಗಳ ಲಭ್ಯತೆ, ಪ್ರಯೋಗಾಲಯ ಸಹಿತ ಸೌಲಭ್ಯಗಳು, ಆರೋಗ್ಯ ಸೇವಾ ಚಟುವಟಿಕೆಗಳು, ದಾಖಲೀಕರಣ, ಜನಜಾಗೃತಿ ಕಾರ್ಯಕ್ರಮಗಳು ಸಹಿತ 300 ಮಾನದಂಡಗಳ ಹಿನ್ನೆಲೆಯಲ್ಲಿ ಈ ಅಂಗೀಕಾರ ಲಭಿಸಿದೆ.
       ಇತ್ತೀಚೆಗೆ ಜಿಲ್ಲಾ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿಯೂ ಲಭಿಸಿತ್ತು. ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ಪಿ. ದಿನೇಶ್ ಕುಮಾರ್,  ಆರೋಗ್ಯ ಕೇರಳಂ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ. ರಾಮನ್ ಸ್ವಾತಿ ವಾಮನ್, ಜಿಲ್ಲಾ ಕ್ವಾಲಿಟಿ ಅಶ್ಯೂರೆನ್ಸ್ ಅಧಿಕಾರಿ ಲಿಬಿಯ ಎಂ. ಸಿರಿಯಕ್ ಅವರ ನೇತೃತ್ವದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ಮತ್ತಿರರ ಒಗ್ಗಟ್ಟಿನ ಯತ್ನದ ಫಲವಾಗಿ ಈ ಅಂಗೀಕಾರ ಲಭಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries