ಪಾಕ್ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಸೋಹೈಲ್ ಮಹ್ಮೂದ್ ನೇಮಕ
0
ಏಪ್ರಿಲ್ 01, 2019
ಇಸ್ಲಾಮಾಬಾದ್: ದೇಶದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಸೋಹೈಲ್ ಮಹ್ಮೂದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಭಾನುವಾರ ಭಾರತದ ಹೈಕಮಿಷನರ್ ತಿಳಿಸಿದೆ.
ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಚರ್ಚಿಸಿದ ನಂತರ ಮಹ್ಮೂದ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹ್ಮೂದ್ ಖುರೇಶಿ ಅವರು ಹೇಳಿರುವುದಾಗಿ ಡಾನ್ ವರದಿ ಮಾಡಿದೆ.
ಪ್ರಸ್ತುತ ಪಾಕ್ ವಿದೇಶಾಂಗ ಕಾರ್ಯದರ್ಶಿಯಾಗಿರುವ ತೆಹ್ಮಿನಾ ಜಂಜುವಾ ಅವರು ಏಪ್ರಿಲ್ 16ರಂದು ನಿವೃತ್ತಿಯಾಗುತ್ತಿದ್ದು, ಅವರ ಸ್ಥಾನಕ್ಕೆ ಮಹ್ಮೂದ್ ಅವರನ್ನು ನೇಮಕ ಮಾಡಲಾಗಿದೆ.
ಎರಡು ವರ್ಷಗಳ ಕಾಲ ಪಾಕ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಜಂಜುವಾ ಅವರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಖುರೇಶಿ, ಜಂಜುವಾ ಅವರು ಅತ್ಯಂತ ಧೈರ್ಯ, ಶೌರ್ಯ ಮತ್ತು ಸ್ಪಷ್ಟತೆಯಿಂದ ವಿದೇಶಾಂಗ ವ್ಯವಹಾರಗಳನ್ನು ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.