ಕುಂಬಳೆ: ಕಳೆದ 1975 ರಿಂದ 1977 ರ ತನಕ ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲುವಾಸ ಅನುಭವಿಸಿದವರು ಮತ್ತು ಹೋರಾಟ ನಡೆಸಿ ಅಸೌಖ್ಯದಲ್ಲಿರುವವರಿಗೆ ಸರಕಾರ ಪಿಂಚಣಿ ನೀಡಲು ಮುಂದಾಗಿದೆ.
ಕೇರಳದಲ್ಲಿ ಸುಮಾರು 7 ಸಹಸ್ರದಷ್ಟು ಮಂದಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಪೆÇಲೀಸರ ಪೀಡನೆಗೊಳಗಾಗಿರುವುದಲ್ಲದೆ ಕೆಲವರು ಜೈಲುವಾಸ ಅನುಭವಿಸಿರುವುದಾಗಿ ಅಂದಾಜಿಸಲಾಗಿದೆ. ಇದರಲ್ಲಿ ಮಿಸ ಮತ್ತು ಡಿ.ಐ.ಆರ್.ಕಾಯಿದೆಯಡಿ ಬಂಧನಕ್ಕೊಳಗಾಗಿ ಕೆಲವು ತಿಂಗಳ ಕಾಲ ಸೆರೆಮನೆವಾಸ ಅನುಭವಿಸಿರುವರು,ಹಲವರು ಪೆÇಲೀಸರ ದೌರ್ಜನ್ಯಕ್ಕೊಳಗಾಗಿರುವರಲ್ಲದೆ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿರುವರು,ಕೆಲವರು ಪೆÇಲೀಸರ ಕ್ರೂರ ಪೀಡನೆಗೊಳಗಾಗಿ ವಿಕಲಾಂಗರಾಗಿರುವರಲ್ಲದೆ ಇನ್ನೂ ಕೆಲವರು ಸಾವಿಗೀಡಾಗಿದ್ದು ಕೆಲವರು ಆನಾರೋಗ್ಯದಿಂದ ಇಂದಿಗೂ ಹಾಸಿಗೆ ಹಿಡಿದಿರುವರು.
ಸಂತ್ರಸ್ಥರ ಕುರಿತು ಮಾಹಿತಿ ಸಂಗ್ರಹಿಸಲು ಸರಕಾರದ ರಾಜ್ಯ ಮುಖ್ಯಕಾರ್ಯದರ್ಶಿಯವರು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿರುವರು. ಜಿಲ್ಲಾಧಿಕಾರಿಯವರು ಆಯಾ ಗ್ರಾಮಕಚೇರಿಯ ಗ್ರಾಮಾಧಿಕಾರಿಯವರಿಗೆ ಮಾಹಿತಿ ಸಂಗ್ರಹಕ್ಕೆ ಸುತ್ತೋಲೆ ಕಳುಹಿಸಿರುವರು.
ಈ ಕುರಿತು ಚರ್ಚಿಸಲು ತುರ್ತು ಪರಿಸ್ಥಿತಿ ಹೋರಾಟ ಸಮಿತಿಯ ಕಾಸರಗೋಡು ಜಿಲ್ಲಾ ಸಮಿತಿಯ ಸಭೆಯು ಮೇ.3 ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಟೌನ್ ಬ್ಯಾಂಕ್ ಹಾಲ್‍ನಲ್ಲಿ ಜರಗಲಿರುವುದು. ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಮತ್ತು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಪೆÇಲೀಸರ ಪೀಡನೆಗೊಳಗಾಗಿರುವುದಲ್ಲದೆ ಜೈಲುವಾಸ ಅನುಭವಿಸಿದವರು ಭೂಗತ ಚಟುವಟಿಕೆಯಲ್ಲಿ ಪಾಲ್ಗೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟನೆಯ ಜಿಲ್ಲಾಧ್ಯಕ್ಷ ವಿ.ರವೀಂದ್ರನ್ ವಿನಂತಿಸಿರುವರು.