ಬದಿಯಡ್ಕ : ಕರ್ನಾಟಕ ಪಿಯು ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಹಳೆವಿದ್ಯಾರ್ಥಿ ಬದಿಯಡ್ಕದ ಶ್ರೀಕೃಷ್ಣ ಶರ್ಮನನ್ನು ಶಾಲೆಯ ವತಿಯಿಂದ ಆತನ ನಿವಾಸಕ್ಕೆ ತೆರಳಿ ಸಂಚಾಲಕ ಜಯಪ್ರಕಾಶ ಪಜಿಲ ಶಾಲುಹೊದೆಸಿ ಸನ್ಮಾನಿಸಿದರು. ಕೋಶಾಧಿಕಾರಿ ಈಶ್ವರ ಭಟ್ ಹಳೆಮನೆ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ಶ್ರೀಕೃಷ್ಣನ ಶರ್ಮನ ಹೆತ್ತವರಾದ ಕಡಪ್ಪು ಸುಬ್ರಹ್ಮಣ್ಯ ಭಟ್ ಹಾಗೂ ಶಾರದಾ ಜೊತೆಗಿದ್ದರು.
ಈ ಸಂದರ್ಭ ಮಾತನಾಡಿದ ವಿದ್ಯಾಪೀಠದ ಸಂಚಾಲಕ ಜಯಪ್ರಕಾಶ ಪಜಿಲ ಅವರು, ಶ್ರೀಕೃಷ್ಣ ಶರ್ಮನ ಸಾಧನೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಕನಿಷ್ಠ ಸೌಕರ್ಯಗಳ ಮಧ್ಯೆ ಸಂಕಷ್ಟದಿಂದ ಕಠಿಣ ಪರಿಶ್ರಮದ ಮೂಲಕ ಸಾಧನೆಗೈದಿರುವುದು ಹೆಮ್ಮೆ ತಮದಿದೆ ಎಮದು ತಿಳಿಸಿದರು. ವಿದ್ಯಾಪೀಠದಲ್ಲಿ ಶಿಕ್ಷಣ ಪೂರೈಸಿರುವ ಶರ್ಮ ಎಳವೆಯಿಂದಲೇ ಭರವಸೆಯ ವಿದ್ಯಾರ್ಥಿಯಾಗಿ ಗಮನ ಸೆಳೆದವ. ಹತ್ತನೇ ತರಗತಿಯಲ್ಲಿ ಶೇ.95 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ ಎಂದು ನೆನಪಿಸಿ ಶುಭಹಾರೈಸಿದರು.