ಬದಿಯಡ್ಕ : ಉಪ್ಲೇರಿ ಶ್ರೀಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಪಂಚ ವರ್ಷಗಳಿಗೊಮ್ಮೆ ಜರಗುವ ಧರ್ಮ ಕೋಲೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದರಂಗವಾಗಿ ಕುಂಟಾಲುಮೂಲೆ ಶ್ರೀಆದಿಶಕ್ತಿ ಅಯ್ಯಪ್ಪ ಮಂದಿರದ ಪರಿಸರದಿಂದ ನಡೆದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ಪೆರುಮುಂಡ ಶಂಕರನಾರಾಯಣ ಭಟ್ ಉದ್ಘಾಟಿಸಿದರು.ಮಂದಿರದ ಗುರುಸ್ವಾಮಿ ನಾರಾಯಣ ಮಣಿಯಾಣಿ, ಪದ್ಮನಾಭ ಮಣಿಯಾಣಿ ಉಪಸ್ಥಿತರಿದ್ದರು. ಬಳಿಕ ಸದಾನಂದ ಶೆಟ್ಟಿ ಕುದ್ವ ಉಗ್ರಾಣ ಮುಹೂರ್ತ ನೇರೆವೇರಿಸಿದರು. ಈ ಸಂದರ್ಭದಲ್ಲಿ ದೈವಕ್ಕೆ ನೂತನ ಮೊಗ ಸಮರ್ಪಣೆ,ತಂಬಿಲ ಸೇವೆ,ಸೀಯಾಳಭಿಷೇಕವನ್ನು ಪ್ರತಿಷ್ಠಾ ಕರ್ಮಿ ಕೃಷ್ಣ ಬೆಳ್ಚಪ್ಪಾಡ ನೆರೆವೇರಿಸಿದರು. ಬಳಿಕ ಜರಗಿದ ಧಾರ್ಮಿಕ ಸಭೆಯನ್ನು ಬ್ರಹ್ಮಶ್ರೀ ವೇದಪ್ರವೀಣ ಪುರಸ್ಕೃತ ತಂತ್ರಿವರ್ಯರಾದ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಉದ್ಘಾಟಿಸಿದರು.ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಡಾ.ಸದ್ಗುರು ಶ್ರೀಶಶಿಕಾಂತ ಮಣಿ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂತೋಷ್ ಕುಮಾರ್ ಶೆಟ್ಟಿ ಬಾಕ್ರಬೈಲು ಸಭೆಯ ಅಧ್ಯಕ್ಷತೆವಹಿಸಿದ್ದರು.ಶಂಕರನಾರಾಯಣ ಭಟ್ ಕುಂಟಿಕಾನ,ಮೈರ್ಕಳ ನಾರಾಯಣ ಭಟ್,ಚೆನ್ನಪ್ಪ ಕುಲಾಲ್ ಎರುಗಲ್ಲು,ಆಶೋಕ್ ಕುಂಬ್ಡಾಜೆ ಮೊದಲಾದವರು ಮಾತನಾಡಿದರು. ಉಪ್ಲೇರಿ ಮಂತ್ರ ಮೂರ್ತಿ ಗುಳಿಗ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಸ್ವಾಗತಿಸಿ, ರಾಮ ನಾಯ್ಕ ಕುಂಟಾಲುಮೂಲೆ ವಂದಿಸಿದರು.ಜಯ ಮಣಿಯಂಪಾರೆ ನಿರೂಪಿಸಿದರು. ಬಳಿಕ ಚಿರಂಜೀವಿ ಯಕ್ಷಗಾನ ಕಲಾ ಸಂಘ ಕುಂಟಾಲುಮೂಲೆ ಅವರಿಂದ ಶ್ರೀಕೃಷ್ಣ ಲೀಲಾರ್ಣವ ಎಂಬ ಯಕ್ಷಗಾನ ಪ್ರದರ್ಶನ,ಡಿ.ಡಿ.ಆರ್.ಬೆಳ್ಳಿಗೆ ಅವರಿಂದ ನೃತ್ಯ ವೈವಿದ್ಯ ಹಾಗೂ ಬೈರನ ಬದ್ಕ್ ಎಂಬ ನಾಟಕ ಪ್ರದರ್ಶನಗೊಂಡಿತು.