HEALTH TIPS

ಚುನಾವಣೆ ಮಾರ್ಗದರ್ಶಿ ಹೊತ್ತಗೆ ಬಿಡುಗಡೆ

           ಕಾಸರಗೋಡು: ಲೋಕಸಭೆ ಚುನಾವಣೆ ಅಂಗವಾಗಿ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ಚುನಾವಣೆ ಮಾರ್ಗದರ್ಶಿ (ಇಲೆಕ್ಷನ್ ಗೈಡ್) ಹೊತ್ತಗೆ ಬಿಡುಗಡೆಗೊಂಡಿದೆ.
       ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೊತ್ತಗೆ ಬಿಡುಗಡೆಗೊಳಿಸಿದರು. ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು ಅವರಿಗೆ ಜಿಲ್ಲಾಧಿಕಾರಿ ಹೊತ್ತಗೆ ಹಸ್ತಾಂತರಿಸಿದರು.
       ಸರಕಾರಿ ಸಿಬ್ಬಂದಿಗೆ, ಪತ್ರಕರ್ತರಿಗೆ, ಸಾರ್ವಜನಿಕರಿಗೆ ಉಪಯೋಗಿಯಾಗುವ ಮೂಲಭೂತ ವಿಚಾರಗಳನ್ನು ಈ ಹೊತ್ತಗೆ ಅಳವಡಗೊಂಡಿದೆ. ಕಾಸರಗೋಡು ಲೋಕಸಭೆ ಕ್ಷೇತ್ರದ ಮೊತ್ತಮೊದಲ ಚುನಾವಣೆ ಚುನಾವಣೆಯಿಂದ ತೊಡಗಿ ಇಂದಿನ ವರೆಗಿನ ಎಲ್ಲ ಮತದಾನ ಮತ್ತು ಆ ಸಂಬಂಧ ಚಟುವಟಿಕೆಗಳ, ಫಲಿತಾಂಶ ಇತ್ಯಾದಿಗಳ ಮಾಹಿತಿ ಈ ಕೃತಿಯಲ್ಲಿದೆ.
       ಕಾಸರಗೋಡು ಲೋಕಸಭೆ ಚುನಾವಣೆಯ ವಿಧಾನಸಭೆ ಕ್ಷೇತ್ರಗಳು, 1957ರಿಂದ 2014 ವರೆಗೆ ನಡೆದ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳು ಸಹಿತ ಮಾಹಿತಿಗಳು, 2019ರಚುನಾವಣೆಯ ಅಭ್ಯರ್ಥಿಗಳು, ಚುನಾವಣೆ ಸಂಬಂಧ ನಿರೀಕ್ಷಕರು, ಚುನಾವಣೆ ಅಧಿಕಾರಿಗಳು, ನೋಡೆಲ್ ಅಧಿಕಾರಿಗಳು, ಮತಗಟ್ಟೆಗಳು ಇತ್ಯಾದಿ ಸಂಬಂಧಿತ ಮಾಹಿತಿಗಳು, ವಿವಿಪಾಟ್ ಸಹಿತ ಮತಯಂತ್ರದ ಚಟುವಟಿಕೆ ಕುರಿತು ಸಮಗ್ರ ಮಾಹಿತಿ, ಚುನಾವಣೆ ಸಂಬಂಧ ಸಿಬ್ಬಂದಿಗೆ ಕರ್ತವ್ಯಕ್ಕೆ ಪೂರಕವಾಗಬಲ್ಲ ಪೋಲ್ ಮೇನೆಜರ್ ಆಪ್, ಜಿಲ್ಲೆಯ ಮತಗಟ್ಟೆಗಳ ಪತ್ತೆಗೆ ಸಹಾಯಕವಾಗಬಲ್ಲ ಕ್ಯೂ ಆರ್ ಕೊಡ್, ವೋಟರ್ ಹೆಲ್ಪ್ ಲೈನ್ ಆಪ್, ವಿಶೇಷ ಚೇತನರಿಗೆ ಸಹಕಾರಿಯಾಗಬಲ್ಲ ವಿಶೇಷ ಮೊಬೈಲ್ ಆಪ್, ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ವತಿಯಿಂದ ನಡೆಸಲಾದ ಬೀದಿ ನಾಟಕಗಳು ಸಹಿತ ವಿವಿಧ ಕಾರ್ಯಕ್ರಮಗಳು, ರಾಜ್ಯದಲ್ಲೇ ಪ್ರಥಮ ಬಾರಿಗೆ ಮಹಿಳೆಯರೇ ಚಟುವಟಿಕೆ ನಡೆಸುವ  ಜಿಲ್ಲಾ ಮಟ್ಟದ ಚುನಾವಣೆ ಸಂಬಂಧ ನಿಯಂತ್ರಣ ಕೊಠಡಿ ಇತ್ಯಾದಿಗಳ ಮಾಹಿತಿ ಈ ಹೊತ್ತಗೆಯಲ್ಲಿದೆ.
     ಬಿಡುಗಡೆ ಸಮಾರಂಭದಲ್ಲಿ ಚುನಾವಣೆ ವಿಭಾಗದ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದು ರಹಮಾನ್, ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ., ಸಹಾಯಕ ಸಂಪಾದಕ ರಶೀದ್ ಬಾಬು, ಚುನಾವಣೆ ವಿಭಾಗ ಕಿರಿಯ ವರಿಷ್ಠಾಧಿಕಾರಿ ಗೋವಿಂದನ್ ರಾವಣೀಶ್ವರಂ, ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries