ತಿರುವನಂತಪುರ: ತ್ರಿಕೋನ ಸ್ಪರ್ಧೆಯ ಕಣವಾಗಿರುವ ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ನಡೆದ ಒಂದೇ ಹಂತದ ಚುನಾವಣೆಯಲ್ಲಿ ಶೇ.74.25 ರಷ್ಟು ಪ್ರಮಾಣದ ಮತದಾನವಾಗಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 75.24 ರಷ್ಟು ಪ್ರಮಾಣದ ಮತದಾನವಾಗಿದೆ. 2014 ಕ್ಕೆ ಹೋಲಿಸಿದರೆ ಈ ಬಾರಿ ಮತದಾನದಲ್ಲಿ ಹೆಚ್ಚಳವಾಗಿದೆ. ಕಳೆದ ಬಾರಿ ಶೇ.74.02 ಮತದಾನವಾಗಿತ್ತು.
ಬೆಳಿಗ್ಗೆ 7 ಗಂಟೆಗೇ ಮತಗಟ್ಟೆಗಳಲ್ಲಿ ಬಾರೀ ಸಂಖ್ಯೆಯಲ್ಲಿ ಮತದಾರರು ಉದ್ದನೆಯ ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಲು ತುದಿಗಾಲಲ್ಲಿದ್ದರು. ಪ್ರತಿ ಬಾರಿಯಂತೆಯೇ ಈ ಬಾರಿಯೂ ಕೆಲವು ಕಡೆಗಳಲ್ಲಿ ಇವಿಎಂಗಳ ದೋಷ ಹಾಗು ಸಣ್ಣಪುಟ್ಟ ಗೊಂದಲದ ಘಟನೆಗಳು ನಡೆದಿವೆ. ಕೆಲವೊಂದು ಅಹಿತಕರ ಘಟನೆಗಳನ್ನು ಬಿಟ್ಟರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಇವಿಎಂ ಯಂತ್ರ ದೋಷದಿಂದ ಕೆಲವೆಡೆ ಮತದಾನ ವಿಳಂಬವಾಗಿ ಆರಂಭಗೊಂಡಿತು.
ಮತ ಚಲಾಯಿಸಬೇಕಾದ ಅಂತಿಮ ಕಾಲಾವಧಿ ಮುಗಿದರೂ, ಸಂಜೆ 6 ಗಂಟೆಗೆ ಮುನ್ನ ಸರದಿಯಲ್ಲಿ ನಿಂತಿದ್ದ ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡಲಾಯಿತು.
ಕುಸಿದು ಬಿದ್ದು ಮೂವರ ಸಾವು : ಮತದಾನ ಸಂದರ್ಭದಲ್ಲಿ ರಾಜ್ಯದಲ್ಲಿ ಕುಸಿದು ಬಿದ್ದು ಮೂವರು ಸಾವಿಗೀಡಾದರು. ತಲಶ್ಶೇರಿಯ ಚೋಕ್ಲಿಯಲ್ಲಿ ಮೋಟೋಳಿ ವಿಜಯ(66), ವಡಶ್ಶೇರಿಕರ ಪೆಳು ಪಾರಯಿಲ್ ಎ.ಪಿ.ಚಾಕೋ ಯಾನೆ ಮತ್ತಾಯಿ ಕುಸಿದು ಬಿದ್ದು ಸಾವಿಗೀಡಾದರು. ಅದೇ ರೀತಿ ಕೊಲ್ಲಂ ಕಿಳಿಕಲ್ಲೂರಿನಲ್ಲಿ ಮಣಿ ಯಾನೆ ಸಾಮು ಕುಸಿದು ಬಿದ್ದು ಸಾವಿಗೀಡಾದರು.
ಅಜಾನೂರಿನಲ್ಲಿ ಪೆÇೀಲಿಂಗ್ ಏಜೆಂಟ್ ಕುಸಿದು ಬಿದ್ದ ಘಟನೆ ನಡೆದಿದೆ. ರಾವಣೇಶ್ವರ ಮಾಕಿ ಶಾಲೆಯ ಆರನೇ ಬೂತ್‍ನಲ್ಲಿ ಪ್ರಥಮ ಪೆÇೀಲಿಂಗ್ ಆಫೀಸರ್ ನೀಲೇಶ್ವರ ಪಳ್ಳಿಕೆರೆಯ ಸುರೇಶ್ ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇವರ ಬದಲಿಗೆ ಇನ್ನೊಬ್ಬ ಅಧಿಕಾರಿಯನ್ನು ನೇಮಿಸಲಾಯಿತು.
ಮತಗಟ್ಟೆ ಅಧಿಕಾರಿ(ಬೂತ್ ಏಜೆಂಟ್)ಗೆ ತಡೆ : ಸಿ.ಪಿ.ಎಂ.ನ ಭದ್ರ ಕೋಟೆಯಾಗಿರುವ ಉದುಮ ಬೇತೂರುಪಾರದಲ್ಲಿ 191 ಮತ್ತು 192 ನೇ ಬೂತ್‍ಗಳಲ್ಲಿ ಯುಡಿಎಫ್ ಬೂತ್ ಏಜೆಂಟರಿಗೆ ಸಿಪಿಎಂ ಕಾರ್ಯಕರ್ತರು ಕುಳಿತು ಕೊಳ್ಳಲು ಬಿಡಲಿಲ್ಲ ಎಂದು ಆರೋಪಿಸಲಾಗಿದೆ.
ಕುಸಿದು ಬಿದ್ದು ಮಹಿಳೆ ಸಾವು : ಮತ ಚಲಾಯಿಸಲು ಸರದಿಯಲ್ಲಿ ನಿಂತಿದ್ದ ಮಹಿಳೆ ಕುಸಿದು ಬಿದ್ದು ಸಾವಿಗೀಡಾದ ಘಟನೆ ಕಣ್ಣೂರು ಜಿಲ್ಲೆಯ ಚೊಕ್ಲಿ ರಾಮವಿಲಾಸಂ ಹೈಸ್ಕೂಲ್‍ನಲ್ಲಿ ನಡೆದಿದೆ. ಮತ ಚಲಾಯಿಸಲು ಬಂದಿದ್ದ 64 ರ ಹರೆಯದ ಮಹಿಳೆ ಸಾವಿಗೀಡಾದರು.
ರಾಜ್ಯದ ವಿವಿಧ ಲೋಕಸಭಾ ಕ್ಷೇತ್ರದ ಶೇಕಡಾವಾರು ಮತದಾನ ವಿವರ:
ಕಾಸರಗೋಡು - 75.24 ಶೇ.
ಕಣ್ಣೂರು - 78.76 ಶೇ.
ಕಲ್ಲಿಕೋಟೆ - 71.56 ಶೇ.
ಆಲತ್ತೂರು - 71.92 ಶೇ.
ಇಡುಕ್ಕಿ - 74.50 ಶೇ.
ಕೊಲ್ಲಂ- 72.15 ಶೇ.
ವಯನಾಡು - 73.31 ಶೇ.
ತೃಶ್ಶೂರು - 73.87 ಶೇ.
ಕೋಟ್ಟಯಂ - 73.80 ಶೇ.
ಮಲಪ್ಪುರಂ - 72.42 ಶೇ.
ಚಾಲಕುಡಿ - 74.93 ಶೇ.
ಆಲಪುಳ - 74.93 ಶೇ.
ವಡಗರ - 74.55 ಶೇ.
ಎರ್ನಾಕುಳಂ - 72.22 ಶೇ.
ಮಾವೇಲಿಕ್ಕರ - 70.10 ಶೇ.
ತಿರುವನಂತಪುರ - 70.10 ಶೇ.
ಪೆÇನ್ನಾನಿ - 68.45 ಶೇ.
ಪತ್ತನಂತಿಟ್ಟ - 72.40 ಶೇ.
ಆಟ್ಟಿಂಗಲ್ - 72.57 ಶೇ.
ಪಾಲ್ಘಾಟ್ - 72.09 ಶೇ. ಮತದಾನವಾಗಿದೆ. ಪೂರ್ಣರೂಪದ ಶೇಕಡಾ ಮತದಾನದಲ್ಲಿ ಬದಲಾವಣೆಗಳಾಗಬಹುದು.