ಉಪ್ಪಳ: ಭಕ್ತಿ ಎಂಬುದು ಸಂಪೂರ್ಣ ಆತ್ಮಾರ್ಪಣೆಯ ಕಾರ್ಯ. ಪರಿಶುದ್ಧ ಭಕ್ತಿಯಿಂದ ಸ್ತುತಿಸಿದಾಗ ಭಗವಂತ ನಮಗೆ ಇಷ್ಟಾರ್ಥವನ್ನು ಸಿದ್ಧಿಸುತ್ತಾರೆ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಹೇಳಿದರು.
ಉಪ್ಪಳ ಮೊಗವೀರಪಟ್ಣ ಶಾರದಾನಗರದಲ್ಲಿ ಪುನರ್ ನಿರ್ಮಾಣಗೊಳಿಸಿದ ನೂತನ ಶಾರದಾ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆಯಲ್ಲಿ ವೀರಾಂಜನೇಯ ದೇವರ ರೇಖಾ ಚಿತ್ರ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ರಾಮ ಸೇವಕ ಹನುಮ, ಆದರ್ಶದ ಪ್ರತಿರೂಪ ರಾಮ, ಹನುಮರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂಸ್ಕಾರವಂತ ವ್ಯಕ್ತಿಗಳಾಗೋಣ ಎಂದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ಮೊಗವೀರಪಟ್ಣ ಶಾರದಾನಗರ ಇದರ ಅಧ್ಯಕ್ಷ ಜನಾರ್ಧನ ಸಾಲಿಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಶರ ನಾರಾಯಣ ಹೆಗ್ಡೆ ಕೋಡಿಬೈಲು, ಮೊಗವೀರ ಗ್ರಾಮ ಸಭಾ ಮೊಗವೀರಪಟ್ಣ ಉಪ್ಪಳ ಇದರ ಅಧ್ಯಕ್ಷ ಶಿವರಾಮ ಬಂಗೇರ, ಮೊಗವೀರ ಸಂಘ ಉಳ್ಳಾಲ ಇದರ ಅಧ್ಯಕ್ಷ ಭರತ್ ಸುವರ್ಣ, ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ ಮೊಗವೀರ ಪಟ್ಣ ಉಳ್ಳಾಲ ಇಲ್ಲಿನ ಮಧ್ಯಸ್ಥರಾದ ಗಂಗಾಧರ ಸುವರ್ಣ, ಅಮ್ಮ ಎಂಟರ್‍ಪ್ರೈಸಸ್ ಹೊಸಂಗಡಿ ಇದರ ಮಾಲಕರಾದ ಮನೋಜ್ ಎಸ್.ಐಲ, ಉಪ್ಪಳ ಮೊಗವೀರ ಗ್ರಾಮ ಸಭಾ ದುಬೈ ಇದರ ಕಾರ್ಯದರ್ಶಿ ಗೋವರ್ಧನ ಶ್ರೀಯಾನ್, ದುರ್ಗಾ ಸೌಂಡ್ಸ್ ಮಾಲಕರಾದ ಪುರುಷೋತ್ತಮ, ಉಪ್ಪಳ ಮೊಗವೀರ ಗ್ರಾಮ ಸಭಾದ ಗುರಿಕಾರರಾದ ಭಾಸ್ಕರ ಗುಜರಾನ್, ಅಶೋಕ ಶ್ರೀಯಾನ್, ಕೇಶವ ಸಾಲಿಯಾನ್, ಗೋಪಾಲ ಬಂಗೇರ, ಮೊಗವೀರ ಮಹಿಳಾ ಮಂಡಳಿ ಮೊಗವೀರ ಪಟ್ಣ ಉಪ್ಪಳ ಇದರ ಅಧ್ಯಕ್ಷೆ ಸುನಂದ ಸಾಲಿಯಾನ್ ಉಪಸ್ಥಿತರಿದ್ದರು. ಮೇಘ, ರಚನಾ, ಶ್ರಾವ್ಯ ಪ್ರಾರ್ಥನೆ ಹಾಡಿದರು. ಹರ್ಷಿತ್ ಶಾರದಾನಗರ ಸ್ವಾಗತಿಸಿದರು. ಶ್ರವಣ್ ಶಾರದಾನಗರ ವರದಿ ವಾಚಿಸಿ ವಂದಿಸಿದರು. ಜಗದೀಶ ಪ್ರತಾಪನಗರ ಕಾರ್ಯಕ್ರಮ ನಿರೂಪಿಸಿದರು
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಊರ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಮತ್ತು ಲಕುಮಿ ತಂಡ ಮಂಗಳೂರು ಇವರಿಂದ ಮಂಗೆ ಮಲ್ಪೊಡ್ಚಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.