ಉಪ್ಪಳ: ಬಾಯಾರು ಪೆರ್ವೊಡಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಸ್ವ ಸಹಾಯ ಸಂಘಗಳು ಬಾಯಾರು ಪೆರ್ವೊಡಿ ಇದರ ಸಹಭಾಗಿತ್ವದಲ್ಲಿ ವಿಷು ಉತ್ಸವ ಹಾಗೂ ಡಾ.ಅಂಬೇಡ್ಕರ್ ಜಯಂತಿ ಆಚರಣೆ ಪೆರ್ವೊಡಿ ವಿವೇಕಾನಂದ ಮೈದಾನದಲ್ಲಿ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಧಾರ್ಮಿಕ ಮುಂದಾಳು ಹಾಗೂ ಸಾಮಾಜಿಕ ಕಾರ್ಯಕರ್ತ ಬಾಬು ನಂದಿತ್ತಿಲು, ಪೆರ್ವೊಡಿ ಇವರಿಗೆ ಅಂಬೇಡ್ಕರ್ ಪ್ರಶಸ್ತಿ ಪ್ರದಾನಗೈದು ಸಮಾರಂಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಕಾಸರಗೋಡು ಮೊಗೇರ ಸವೀಶ್ ಸೊಸೈಟಿ ಕಾರ್ಯದರ್ಶಿ ಮೋಹನ ಯು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಹಿಂದೆ ತಳ್ಳಲ್ಪಟ್ಟ ವಿಭಾಗದವರನ್ನು ಸಮಾಜದ ಮುಖ್ಯ ಧಾರೆಗೆ ಕರೆತರುವಲ್ಲಿ ನಿರಂತರ ಶ್ರಮ ವಹಿಸುತ್ತಿರುವ ವಿವೇಕಾನಂದ ಸಾಂಸ್ಕøತಿಕ ಕೇಂದ್ರದ ಚಟುವಟಿಕೆಗಳು ಮಾದರಿಯಾಗಿ ಶ್ಲಾಘನೀಯವಾದುದು. ಇಂತಹ ಸಂಘಟನೆಗಳ ಮೂಲಕ ಸಾಮಾಜಿಕ ಸುಸ್ಥಿರತೆ, ಒಗ್ಗಟ್ಟಿನ ಭದ್ರ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಗಂಗೆನೀರು ವೀರೇಶ್ವರ ಕರ್ಮಕರ್ ಹೊಸ್ಮಾರು ಇವರು ವಿಷು ಆಚರಣೆಯ ಬಗ್ಗೆ ಮಾತನಾಡಿ ಆಚರಣೆಯ ಮಹತ್ವವನ್ನು ಸವಿವರವಾಗಿ ತಿಳಿಸಿದರು. ಜೊತೆಗೆ ಸಂಸ್ಥೆಯ ಪರವಾಗಿ ವಿಷು ಕಾಣಿಕೆಯನ್ನು ವಿತರಿಸಿದರು. ಪುಷ್ಪರಾಜ ಮಾಸ್ತರ್ ಸ್ವಾಗತಿಸಿ, ರಾಮ ಮಾಸ್ತರ್ ವಂದಿಸಿದರು. ಶಿವರಾಮ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.