ಮಾನಂದವಾಡಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದ ಜೊತೆಗೆ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಕೇರಳದ ಯುಡಿಎಫ್ಗೆ ಹೊಸ ಚೈತನ್ಯ ಮೂಡಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಯುಡಿಎಫ್, ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಕಂಡು ಬರದಷ್ಟು ಜನಸಾಗರವೇ ರಾಹುಲ್ ಗಾಂಧಿ ಕಲ್ಪಟ್ಟದಲ್ಲಿ ನಾಮಪತ್ರಿಕೆ ಸಲ್ಲಿಸುವ ಸಂದರ್ಭದಲ್ಲಿ ಹರಿದು ಬಂದಿತ್ತು. ಈ ದೊಡ್ಡ ಸಂಖ್ಯೆಯ ಜನಸಾಗರ ರಾಷ್ಟ್ರ ಮತ್ತು ರಾಜ್ಯದ ಕಾಂಗ್ರೆಸ್ ನೇತೃತ್ವವೇ ನಿರೀಕ್ಷಿಸಿರಲಿಲ್ಲ.
ಕಲ್ಪಟ್ಟದಲ್ಲಿ ನಡೆದ ರೋಡ್ಶೋದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಮಾಜಿ ಮುಖ್ಯಮಂತ್ರಿ ಉಮ್ಮನ್ಚಾಂಡಿ, ಹಿರಿಯ ನೇತಾರರಾದ ಮುಕುಲ್ ವಾಸ್ನಿಕ್, ಕೆ.ಸಿ.ವೇಣುಗೋಪಾಲ್, ವಿಪಕ್ಷ ನೇತಾರ ರಮೇಶ್ ಚೆನ್ನಿತ್ತಲ, ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಕುಂಞõÁಲಿಕುಟ್ಟಿ, ಯುಡಿಎಫ್ ನೇತಾರರಾದ ಜೋಸ್ ಕೆ.ಮಾಣಿ, ಜೋನಿ ನೆಲ್ಲೂರು, ಸಿ.ಪಿ.ಜೋನ್, ಜಿ.ದೇವರಾಜನ್ ಮೊದಲಾದ ನೇತಾರರ ದಂಡೇ ರಾಹುಲ್ಗಾಂಧಿ ಜೊತೆಯಲ್ಲಿದ್ದರು. ಯುಡಿಎಫ್ ಲೋಕಸಭಾ ಕ್ಷೇತ್ರ ಚುನಾವಣಾ ಸಮಿತಿ ಪ್ರಧಾನ ಸಂಚಾಲಕ ಸಾದಿಖಲಿ ಶಿಹಾಬ್ ತಂಙಳ್, ವಯನಾಡು ಡಿಸಿಸಿ ಅಧ್ಯಕ್ಷ ಐ.ಸಿ.ಬಾಲಕೃಷ್ಣನ್, ಮಲಪ್ಪುರ ಡಿಸಿಸಿ ಅಧ್ಯಕ್ಷ ವಿ.ವಿ.ಪ್ರಕಾಶ್ ಮೊದಲಾದವರು ನಾಮಪತ್ರಿಕೆ ಸಮರ್ಪಣೆ ಸಂದರ್ಭದಲ್ಲಿದ್ದರು.
ರಾಹುಲ್ ಗಾಂಧಿ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದರಿಂದ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಪಕ್ಷದ ವರ್ಚಸ್ಸು, ಸ್ಥಾನ ಸಂಖ್ಯೆ ವೃದ್ಧಿಗೆ ಸಾಧ್ಯತೆಯಿದೆಯೆಂದು ಕಾಂಗ್ರೆಸ್ ಬಲವಾದ ವಿಶ್ವಾಸದಿಂದಿದೆ. ಈ ನಿರೀಕ್ಷೆಯನ್ನು ಬಲಪಡಿಸುವ ರೀತಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ವೀಕ್ಷಿಸಲು ಜನಸಾಗರವೇ ಹರಿದು ಬಂದಿದೆ ಎಂದು ಕಾಂಗ್ರೆಸ್ ನೇತಾರರು ಅಭಿಪ್ರಾಯಪಟ್ಟಿದ್ದಾರೆ.
ಸನಿಹದ ಜಿಲ್ಲೆಗಳ, ಕರ್ನಾಟಕ, ತಮಿಳುನಾಡು ರಾಜ್ಯಗಳಿಂದಲೂ ಕಾಂಗ್ರೆಸ್ ಮತ್ತು ಯುಡಿಎಫ್ ಕಾರ್ಯಕರ್ತರು, ನೇತಾರರು ಭಾಗವಹಿಸಿದ್ದರು. ಸಂಘ ಪರಿವಾರದ ವಿರುದ್ಧ ಹೋರಾಟ ಎಂಬುದಾಗಿ ಕಾಂಗ್ರೆಸ್ ರಾಷ್ಟ್ರೀಯ ನೇತಾರರು ಹೇಳಿದ್ದಾರೆ. ರೋಡ್ಶೋ ನೀಡಿರುವ ಸಂಚಲನವನ್ನು ಚುನಾವಣೆಯಲ್ಲಿ ಬಳಸಿಕೊಂಡು ಮುನ್ನೇರಲು ಸಾಧ್ಯವಾಗಲಿದೆ ಎಂದು ಕಾಂಗ್ರೆಸ್ ನಾಯಕರು ನಿರೀಕ್ಷಿಸಿದ್ದಾರೆ.