ಕಾಸರಗೋಡು: ಪ್ರಜಾಪ್ರಭುತ್ವ ಹಕ್ಕು ಕಾಯ್ದುಕೊಳ್ಳುವುದಕ್ಕೆ ಒಮ್ಮೆ ಬೆರಳೊತ್ತೋಣ (ಮತದಾನ ಸಂಬಂಧ ಮತಯಂತ್ರದ ಗುಂಡಿಯೊತ್ತುವ) ಎಂಬ ಹೆಸರಿನ ಶಿಬಿರ ವಿದ್ಯಾರ್ಥಿಗಳಿಗಾಗಿ ಜರುಗಿತು.
ಸ್ವೀಪ್ ವತಿಯಿಂದ ನಡೆಸಲಾಗುತ್ತಿರುವ ಮತದಾನ ಜಾಗೃತಿ ಕಾರ್ಯಕ್ರಮಗಳ ಅಂಗವಾಗಿ ಕಾಸರಗೋಡು ಎಲ್.ಬಿ.ಎಸ್.ಕಾಲೇಜಿನ ಸಹಭಾಗಿತ್ವದೊಂದಿಗೆ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್ ನಲ್ಲಿ ಈ ಕಾರ್ಯಕ್ರಮ ನಡೆಸಿದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಶಿಬಿರದಲ್ಲಿ ಭಾಗವಹಿಸಿದರು. ಸ್ವೀಪ್ ನೋಡೆಲ್ ಅಧಿಕಾರಿ ವಿ.ಮಹಮ್ಮದ್ ನೌಷಾದ್ ಮತದಾನ ಸಂದೇಶ ನೀಡಿದರು.ಪ್ರಾಂಶುಪಾಲ ಮಹಮ್ಮದ್ ಶುಕೂರ್, ಎನ್.ಎಸ್.ಎಸ್.ಸಂಚಾಲಕ ಕೃಷ್ಣಪ್ರಸಾದ್, ಮಂಜು, ಪಿ.ಬೈಜುರಾಜ್, ಸಿ.ಸತೀಶ್ ಮೊದಲಾದವರು ಉಪಸ್ಥಿತರಿದ್ದರು.
ಮತಜಾಗೃತಿ ವಾಹನದಲ್ಲಿ ನಡೆಯುವ ಮತದಾನ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ, ವಿವಿಪಾಟ್ ಮೆಷಿನ್ ಬಗ್ಗೆ ಮಾಹಿತಿ ಪಡೆಯಲಾಯಿತು. ಸ್ವೀಪ್ ವತಿಯಿಂದ ಸಿದ್ಧಪಡಿಸಿದ ಕಿರು ವೀಡಿಯೋ ಪ್ರದರ್ಶನ ನಡೆಸಲಾಯಿತು.
ಇಂದು(ಏ.13) ರಾಜ್ಯ ಮಟ್ಟದ ಸೈಕಲ್ ರ್ಯಾಲಿ ಜಿಲ್ಲೆಯಿಂದ ಆರಂಭಗೊಳ್ಳಲಿದೆ. ಬೆಳಗ್ಗೆ 7.30ಕ್ಕೆ ಕಾಸರಗೋಡು ನೂತನ ಬಸ್ ನಿಲ್ದಾಣ ಬಳಿ ಮತದಾನ ಜಾಗೃತಿ ಸೈಕಲ್ ರ್ಯಾಲಿ ಆರಂಭಗೊಳ್ಳಲಿದೆ. ತಿರುವನಂತಪುರಂ ವರೆಗೆ ರ್ಯಾಲಿ ನಡೆಯಲಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು.
ಏ.16ರಂದು ಪನತ್ತಡಿ ಗ್ರಾಮಪಂಚಾಯತ್ ನ ಕುರುಂಞÂ ಆದಿವಾಸಿ ಕಾಲನಿಯಲ್ಲಿ ಮತದಾನ ಜಾಗೃತಿ ಪ್ರಚಾರ ಯಾತ್ರೆ ನಡೆಯಲಿದೆ. ಏ.17ರಂದು ಸಾಮೂಹಕ ಓಟ ನಡೆಯಲಿದೆ.
ಮತದಾನ ಜಾಗೃತಿ ಉದ್ದೇಶದಿಂದ ಸ್ವೀಪ್ ವತಿಯಿಂದ ಬೇರೆ ಬೇರೆ ಕಾರ್ಯಕ್ರಮಗಳು ನಡೆದಿವೆ. ಎಲ್ಲ ಕಾರ್ಯಕ್ರಮಗಳೂ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.