ಕೆಎಸ್‍ಪಿಎಸ್ ಜಿಲ್ಲಾ ಸಭೆ
0
ಏಪ್ರಿಲ್ 01, 2019
ಮಂಜೇಶ್ವರ: ಪೆರ್ಲ: ಸಮಾಜ ಸೇವೆಯು ಪ್ರತಿಯೊಬ್ಬನ ಜೀವನದಲ್ಲಿ ನಿತ್ಯದ ಒಂದಂಗವಾಗಿರಬೆಕು. ಜನತಾ ಸೇವೆಯೇ ಜನಾರ್ಧನನ ಸೇವೆ ಎಂಬ ಕಲ್ಪನೆಯಡಿ ಬದುಕು ಪರಿಪೂರ್ಣವಾಗುತ್ತದೆ ಎಂದು ವರ್ಕಾಡಿಯ ನೀರೊಳಿಕೆಯಲ್ಲಿರುವ ಶ್ರೀಮಾತಾ ಸೇವಾಶ್ರಮದ ಅದ್ಯಕ್ಷ ಟಿ.ನಾರಾಯಣ ಭಟ್ ಅವರು ತಿಳಿಸಿದರು.
ನೀರೊಳಿಕೆಯ ಶ್ರೀಮಾತಾ ಸೇವಾಶ್ರಮದಲ್ಲಿ ಭಾನುವಾರ ನಡೆದ ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ್ ನ (ಕೆಎಸ್‍ಪಿಎಸ್) ಜಿಲ್ಲಾ ಸಮಿತಿಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಈಶ್ವರ ರಾವ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸೇವಾ ಪ್ರಮುಖ್ ಎನ್.ಪಿ.ಸುಬ್ರಾಯ ನಂದೋಡಿ ದಿಕ್ಸೂಚಿ ಭಾಷಣ ಮಾಡಿದರು. ಸಂಘಟನೆಯ ನೇತೃತ್ವದಲ್ಲಿ ಇತ್ತೀಚೆಗೆ ರಾಮೇಶ್ವರಕ್ಕೆ ಕೈಗೊಂಡ ಪ್ರವಾಸದ ಅನುಭವಗಳನ್ನು ಎಚ್.ರಾಮ ಭಟ್ ಈ ಸಂದರ್ಭ ಹಂಚಿಕೊಂಡರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕರ್ವಜೆ ಕೇಶವ ಭಟ್ ಸ್ವಾಗತಿಸಿ, ಚಂದ್ರಶೇಖರ ನಾಯಕ್ ವಂದಿಸಿದರು. ಜಯಲಕ್ಷ್ಮೀ ಪ್ರಾರ್ಥನೆ ಹಾಡಿದರು. ಸಭೆಯಲ್ಲಿ ಸೀತಾರಾಮ ರಾವ್, ಈಶ್ವರ ನಾಯ್ಕ್, ಯು.ರಾಮಚಂದ್ರ ಭಟ್, ಮಾಧವನ್ ನಾಯರ್, ಕೆ.ಕೇಶವ ಪ್ರಸಾದ್, ಶ್ರೀಧರ ರಾವ್, ಶ್ಯಾಮ ಭಟ್, ವಿಶ್ವನಾಥ ರೈ, ಶ್ರೀಧರ ಭಟ್, ವಿಶ್ವನಾಥ ರೈ, ಸದಾಶಿವ, ಕಮಲಾ ಟೀಚರ್, ವರದಶಂಕರಿ ಟೀಚರ್, ಮಾಲತಿ ಮೊದಲಾದವರು ಭಾಗವಹಿಸಿದರು.