ಶಡ್ರಂಪಾಡಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
0
ಏಪ್ರಿಲ್ 06, 2019
ಕುಂಬಳೆ: ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗುತ್ತಿರುವ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಏಪ್ರಿಲ್ ಶನಿವಾರ ಬೆಳಿಗ್ಗೆ ನಿದ್ರಾಕಲಶ ಪೂಜೆ, ಕುಂಭೇಶ ಕಲಶಪೂಜೆ, ಕರ್ಕರಿ ಪೂಜೆ, ಶಿರತತ್ವಪೂಜೆ, ಅನುಜ್ಞಾದಾನಂ, ಸಂಹಾರತತ್ತ್ವ ಕಲಶಾಭಿಷೇಕ, ಜೀವದ್ಧೋಶಾನ ಜೀವ ಕಲಶ, ಶಯ್ಯಾರೋಪಣ, ಗಣಪತಿ ಹೋಮ, ಉಷಃಪೂಜೆ, ಅಂಕುರಪೂಜೆ, ಸಂಹಾರತತ್ತ್ವಹೋಮಗಳು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಿಜಯಾ ಪ್ರಕಾಶ್ ಬೆದ್ರಡಿ-ಕಲ್ಲಕಟ್ಟ ಮತ್ತು ವಿಜಯಾ ಬೆಂಗಳೂರು ಇವರ ಶಿಷ್ಯೆ ಕಾವ್ಯಶ್ರೀ ಹಾಗೂ ಬಳಗದವರಿಂದ ಸಂಗೀತ ಕಛೇರಿ ಬೆಳಿಗ್ಗೆ ಜರಗಿತು.
ಸಮರಸ ಚಿತ್ರ ಮಾಹಿತಿ:
1. ಶ್ರೀಮತಿ ಕಾವ್ಯಶ್ರೀ ಹಾಗೂ ಬಳಗದವರಿಂದ ಸಂಗೀತ ಕಛೇರಿ
2. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು