HEALTH TIPS

ಜಾತಿ ಮತ ಭಾಷೆಗಳ ಮತ್ತು ಗಡಿಗಳ ಮಧ್ಯೆ ಗೋಡೆ ಕಟ್ಟುವುದನ್ನು ಬಿಟ್ಟು ಮನಸು ಬೆಸೆಯುವ ಸೇತುವೆ ಕಟ್ಟಬೇಕು - ಡಾ. ಕಾ ವೆಂ ಶ್ರೀನಿವಾಸಮೂರ್ತಿ.

ಬದಿಯಡ್ಕ: ಜಾತಿ ಮತ್ತು ಭಾಷೆಗಳ ಮತ್ತು ಗಡಿಗಳ ಮಧ್ಯೆ ಗೋಡೆ ಕಟ್ಟುವುದನ್ನು ಬಿಟ್ಟು ಮನಸು ಬೆಸೆಯುವ ಸೇತುವೆ ಕಟ್ಟುವ ಕೆಲಸವನ್ನು ಮಾಡಬೇಕು ಈ ಮೂಲಕ ಕುವೆಂಪು ಅವರು ಹೇಳಿದ ವಿಶ್ವಮಾನವ ಸಂದೇಶ ಸಾರಲು ಸಾಧ್ಯವಾಗುತ್ತದೆ. ಭಾರತದ ಸಾಂಸ್ಕೃತಿಕ ಮತ್ತು ಜನಪದ ಬುನಾದಿ ಅಪಾರವಾದದ್ದು. ಥಾಯ್ಲೆಂಡ್ ಎಂಬ ಪುಟ್ಟ ದೇಶದ ಪ್ರಗತಿಗೆ ಬುದ್ಧನ ಧ್ಯೇಯ ಮತ್ತು ಚಿಂತನೆಗಳೇ ಅಡಿಪಾಯ. ಇದು ಭಾರತ ದೇಶದ ಕೊಡುಗೆ. ಈ ನಿಟ್ಟಿನಲ್ಲಿ ತುಳು ಕನ್ನಡ ಸ್ನೇಹ ಸಮ್ಮೇಳನ ವನ್ನು ಈ ಮಣ್ಣಿನಲ್ಲಿ ಉದ್ಘಾಟಿಸುತ್ತಿರುವುದು ಸಂಘಟಕರ ಸಾರ್ಥಕ ಪ್ರಯತ್ನ ಎಂದು ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ತಿಳಿಸಿದರು. ಸಂಭ್ರಮ ಬೆಂಗಳೂರು ಮತ್ತು ತುಳು ವಲ್ರ್ಡ್ ಬದಿಯಡ್ಕ- ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಹಾಗೂ ತುಳುಕೂಟ ಬ್ಯಾಂಕಾಕ್ ಮತ್ತು ತಾಯಿ ಕನ್ನಡ ಬಳಗ ಥಾಯ್ಲ್ಯಾಂಡ್ ಇವರ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಕನ್ನಡ ಸ್ನೇಹ ಸಮ್ಮೇಳನದ ಅಂಗವಾಗಿ ನಡೆದ ವಿಚಾರಗೋಷ್ಟಿಯಲ್ಲಿ ಕರ್ನಾಟಕದಲ್ಲಿ ಭಾಷಾ ಸಮನ್ವಯತೆ ಎಂಬ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಳು ಭಾಷೆ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಹಂಚಿ ಹೋಗಿದ್ದರೂ ಇದುವರೆಗೆ ಯಾವುದೇ ರಾಜಾಶ್ರಯ ಇಲ್ಲದಿದ್ದರೂ ಇತರ ಭಾಷೆಗಳಿಗೆ ಸಮಾನವಾಗಿ ಬೆಳೆದು ನಿಂತಿದೆ. ಇದು ಇಲ್ಲಿಯ ಸತ್ಯ. ಆರಾಧನೆಯ ಮಹಿಮೆ. ಇಲ್ಲಿ ಎಲ್ಲರೂ ಸಮಾನರು ಸಮಾನತೆಯನ್ನು ಬಯಸುವವರು. ತುಳುನಾಡಿನ ಸಂಸ್ಕೃತಿ ಜಗತ್ತಿಗೆ ಮಾದರಿ. ಆದರೆ ಇತ್ತೀಚೆಗೆ ರಾಜಕೀಯ ಲಾಭಕ್ಕಾಗಿ ಜಾತಿ ಮತ ಭಾಷೆಯ ಹೆಸರಲ್ಲಿ ವಿಭಜನೆ ಮಾಡಿ ಆಡಳಿತ ನಡೆಸುತ್ತಿರುವುದು ಸಂಸ್ಕೃತಿಯ ಸರ್ವನಾಶಕ್ಕೆ ಕಾರಣವಾಗುತ್ತದೆ. ಎಂದು ಡಾ.ರಾಜೇಶ್ ಆಳ್ವ ಅವರು ವಿಚಾರಗೋಷ್ಠಿಯಲ್ಲಿ ವಿಷಯ ಮಂಡಿಸಿ ಮಾತನಾಡಿದರು. ಬ್ಯಾಂಕಾಕ್ ತುಳುಕೂಟದ ಅಧ್ಯಕ್ಷ ನವೀನ್ ಪಿಂಟೊ,ನಜೀಬ್ ಹಬೀಬ್ ಥಾಯ್ಲೆಂಡ್, ಡೈಜಿವಲ್ಡ್ ನಾ ವಿನ್ಸೆಂಟ್ ಡನಿಲ್, ಥಾಯ್ ಕನ್ನಡ ಬಳಗದ ಮೈಕೆಲ್ ಬ್ಯಾಂಕಾಕ್, ಸುಬ್ರಹ್ಮಣ್ಯ ಎನ್ ಜಿ ಬ್ಯಾಂಕಾಕ್, ಕಾರ್ತಿಕ್ ಸತ್ಯನಾರಾಯಣ ಬ್ಯಾಂಕಾಕ್, ರಮಾಕಾಂತ್ ಪ್ರೇಮ್, ಜಯಶ್ರೀ ಮುಂಬೈ ಮೊದಲಾದವರು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದರು. ಜೋಗಿಲ ಸಿದ್ದರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಂಕರ ಭಾರತೀಪುರ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries