ಕುಂಬಳೆ: ಕಾರ್ಲೆ ಶ್ರೀ ಗುತ್ಯಮ್ಮ ಭಗವತೀ ದೈವಸ್ಥಾನದಲ್ಲಿ ನಡಾವಳಿ ಉತ್ಸವ ಏ.29 ರಂದು ಆರಂಭಗೊಂಡು ಮೇ 2 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಬೆಳಿಗ್ಗೆ 10.30 ಕ್ಕೆ ಹಸಿರುವಾಣಿ ಶೋಭಾಯಾತ್ರೆ, 11.30 ಕ್ಕೆ ಉಗ್ರಾಣ ಮುಹೂರ್ತ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ಸಂಜೆ 6 ಕ್ಕೆ ಭಜನೆ, 7 ಕ್ಕೆ ಆನೆ ಚಪ್ಪರದಲ್ಲಿ ದೀಪ ಪ್ರತಿಷ್ಠೆ, ರಾತ್ರಿ 8.30 ಕ್ಕೆ ಅನ್ನ ಸಂತರ್ಪಣೆ. 9 ಕ್ಕೆ ಹರಿಕಥಾ ಸತ್ಸಂಗ, 10 ಕ್ಕೆ ನಳಿನ್ ನಾರಾಯಣ್ ಕಾವುಗೋಳಿ ಮತ್ತು ಬಳಗದಿಂದ ಭಕ್ತಿಗಾನ ಮೇಳ ಜರಗಲಿದೆ.
ಏ.30 ರಂದು ಬೆಳಿಗ್ಗೆ 9.30 ಕ್ಕೆ ಭಜನೆ, ಮಧ್ಯಾಹ್ನ 1 ಕ್ಕೆ ಅನ್ನ ಸಂತರ್ಪಣೆ, ಸಂಜೆ 5 ಕ್ಕೆ ಹನ್ನೊಂದು ಸ್ಥಾನದ ಅಚ್ಚಮ್ಮಾರರ ಸಮಾವೇಶ, 6.30 ಕ್ಕೆ ಕೆಳಗಿನ ಸ್ಥಾನದಿಂದ ಸಕಲ ವಾದ್ಯ ಘೋಷಗಳೊಂದಿಗೆ ಮೇಲಿನ ಸ್ಥಾನಕ್ಕೆ ಭಂಡಾರ ಏರುವುದು, ಮೇ 1 ರಂದು ಬೆಳಗ್ಗೆ 4.30 ಕ್ಕೆ ಶ್ರೀ ತಂತ್ರಿವರ್ಯರನ್ನು ವಾದ್ಯಘೋಷಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ಸ್ವಾಗತಿಸುವುದು, 5 ಕ್ಕೆ ಹೂವಿನ ಪೂಜೆ, 6 ಕ್ಕೆ ಶ್ರೀ ಭಗವತಿಗಳ ದರ್ಶನ, ಬಿಂಬ ಬಲಿ ಉತ್ಸವ, 9 ಕ್ಕೆ ಕೆಂಡ ಸೇವೆ, 10.30 ಕ್ಕೆ ಪ್ರಸಾದ ವಿತರಣೆ, 11 ಕ್ಕೆ ಮಹಾ ಅನ್ನಸಂತರ್ಪಣೆ, ಮಧ್ಯಾಹ್ನ 1 ಕ್ಕೆ ಭಂಡಾರ ಇಳಿಯುವುದು, ರಾತ್ರಿ 8.30 ಕ್ಕೆ ಅನ್ನ ಸಂತರ್ಪಣೆ, ಮೇ 2 ರಂದು ಬೆಳಿಗ್ಗೆ 8 ಕ್ಕೆ ಕರಿಪೆÇಡಿ ಕಾರ್ಯಕ್ರಮ ಪ್ರಾರಂಭ, ಮಧ್ಯಾಹ್ನ 1 ಕ್ಕೆ ಅನ್ನ ಸಂತರ್ಪಣೆ ಜರಗಲಿದೆ.