ಕಾಸರಗೋಡು: ಚುನಾವಣೆ ಪ್ರಚಾರ ಸಂದರ್ಭದಲ್ಲಿ ಲಭಿಸಿದ ಒಂದು ಲಕ್ಷಕ್ಕೂ ಅಧಿಕ ಶಾಲುಗಳನ್ನು ಕುಮ್ಮನಂ ರಾಜಶೇಖರನ್ ಏನು ಮಾಡುತ್ತಾರೆ ಎಂಬುದಕ್ಕೆ ಉತ್ತರವನ್ನು ಕುಮ್ಮನಂ ತಮ್ಮ ಎಫ್.ಬಿ.ಪೆÇೀಸ್ಟ್‍ನಲ್ಲಿ ಬಹಿರಂಗಪಡಿಸಿದ್ದಾರೆ.
ತಿರುವನಂತಪುರ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲಲ್ಲಿ ಅವರಿಗೆ ನೀಡಿದ ಸ್ವಾಗತ ಕಾರ್ಯಕ್ರಮದಲ್ಲಿ ಹೊದೆಸಿದ ಶಾಲುಗಳನ್ನು ಬ್ಯಾಗ್ ಮಾಡಿಕೊಡುವುದಾಗಿ ಕುಮ್ಮನಂ ತಿಳಿಸಿದ್ದಾರೆ. ಚೀಲ ನಿರ್ಮಾಣ ಸಾಧ್ಯವಾಗದ ಶಾಲುಗಳನ್ನು ಅನಾಥಾಲಯಗಳಿಗೆ ನೀಡುವುದಾಗಿ ಅವರು ಹೇಳಿದ್ದಾರೆ.
ಬಿಎಂಎಸ್‍ನ ಹೊಲಿಗೆ ಕಾರ್ಮಿಕರು, ಸ್ವಸಹಾಯ ಸಂಘಗಳಿಗೆ ಶಾಲನ್ನು ಚೀಲವನ್ನಾಗಿ ಮಾಡುವ ಹೊಣೆ ನೀಡಲಾಗಿದೆ. ಇವರು ಈ ಕೆಲಸವನ್ನು ಆರಂಭಿಸಿದ್ದಾರೆ. ಮತದಾರರ ಮಧ್ಯೆ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.